This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Crime NewsNational NewsState News

ಮನೆಗೆಲಸದವನ ಮನೆಯಲ್ಲಿ 25 ಕೋಟಿ ನಗದು ಪತ್ತೆ: ಜಾರ್ಖಂಡ್ ಸಚಿವನ ಕಾರ್ಯದರ್ಶಿ ಮೇಲೆ ಇ.ಡಿ ದಾಳಿ

ಮನೆಗೆಲಸದವನ ಮನೆಯಲ್ಲಿ 25 ಕೋಟಿ ನಗದು ಪತ್ತೆ: ಜಾರ್ಖಂಡ್ ಸಚಿವನ ಕಾರ್ಯದರ್ಶಿ ಮೇಲೆ ಇ.ಡಿ ದಾಳಿ

ರಾಂಚಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿನ ಅನೇಕ ಸ್ಥಳಗಳಲ್ಲಿ ಸೋಮವಾರ ಸರಣಿ ದಾಳಿಗಳನ್ನು ನಡೆಸಿದ್ದು, ಸುಮಾರು 25 ಕೋಟಿ ರೂದಷ್ಟು ದಾಖಲೆಗಳಿಲ್ಲದ ನಗದು ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

70 ವರ್ಷದ ಕಾಂಗ್ರೆಸ್ ನಾಯಕ ಅಲಂಗೀರ್ ಅಲಂ ಅವರು ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದ ಈ ದಾಳಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಪ್ರತಿಪಕ್ಷಗಳ ವಿರುದ್ಧ ಬಿಜೆಪಿಗೆ ಇದು ಅಸ್ತ್ರವಾಗಿ ಪರಿಣಮಿಸಿದೆ.

ಸಂಜೀವ್ ಲಾಲ್‌ನ ಕೆಲಸದವನ ಮನೆಯಲ್ಲಿ ಸಿಕ್ಕ ನೋಟಿನ ಕಂತೆಗಳ ಬೃಹತ್ ರಾಶಿ ಕಂಡು ಸ್ವತಃ ಇಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಈ ಹಣವನ್ನು ಲೆಕ್ಕ ಮಾಡಲು ಅಧಿಕ ಸಂಖ್ಯೆಯಲ್ಲಿ ನಗದು ಎಣಿಕೆ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಳ್ಳಲಾಗುತ್ತಿದೆ.

ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವೀರೇಂದ್ರ ಕೆ ರಾಮ್ ಅವರನ್ನು ಈ ಪ್ರಕರಣದಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಬಿಹಾರ ಮತ್ತು ದಿಲ್ಲಿ ಜತೆಗೆ ಜಾರ್ಖಂಡ್‌ನ ರಾಂಚಿ, ಜೆಮ್‌ಷೆಡ್ಪುರ ಹಾಗೂ ಇತರೆ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ವ್ಯಾಪಕ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿತ್ತು. ನಂತರ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು.

2019ರಲ್ಲಿ ವೀರೇಂದ್ರ ಕೆ ರಾಮ್ ಅವರ ಅಧೀನ ಉದ್ಯೋಗಿಯ ಮನೆಯಿಂದ ಭಾರಿ ಮೊತ್ತದ ನಗದು ಹಣ ಪತ್ತೆಯಾಗಿತ್ತು. ಇದರ ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಾರಿ ನಿರ್ದೇಶನಾಲಯ ಪ್ರಕರಣವನ್ನು ವಹಿಸಿಕೊಂಡಿತ್ತು.

ಜಾರ್ಖಂಡ್ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್‌ ಅವರ ಮನೆ ಸೇರಿದಂತೆ ದಾಳಿ ನಡೆಸಲಾಗಿದ್ದು, ಸಂಜೀವ್ ಲಾಲ್ ಅವರ ಮನೆಗೆಲಸದವನ ಬಳಿ ಅಂದಾಜು 20 ರಿಂದ 30 ಕೋಟಿ ರೂ ಮೊತ್ತದಷ್ಟು ಭಾರಿ ಮೊತ್ತದ ನಗದು ಪತ್ತೆಯಾಗಿದೆ.

 

Nimma Suddi
";