ಬಾಗಲಕೋಟೆ
ಶಿಕ್ಷಣದಿಂದ ಬದುಕಿನ ಪ್ರಗತಿಯಾಗಬಲ್ಲದು, ವಿದ್ಯಾರ್ಥಿಯಲ್ಲಿ ಶೈಕ್ಷಣಿಕ ಪ್ರಗತಿಯ ಜತೆ ಮಾನವೀಯ ಮೌಲ್ಯಗಳನ್ನು ಪರಿಚಯಿಸಿ ಅವರ ಅಂತರAಗದ ವಿಕಾಸ ಮಾಡಬೇಕಾಗಿದೆ ಎಂದು ಸಹಕಾರಿ ಧುರೀಣ ರವೀಂದ್ರ ಕಲಬುರ್ಗಿ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಸರಕಾರಿ ಪಪೂ ಕಾಲೇಜ್‌ನ ಪ್ರೌಢಶಾಲಾ ವಿಭಾಗದಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುವ ಕಾರ್ಯಕ್ರಮದಲ್ಲಿ ಅವರು ಮಾನಾಡಿದರು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ನೈತಿಕ ಮೌಲ್ಯಗಳಿಂದ ದೂರ ಸರಿಯುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಥಿ ಸಮುದಾಯದಲ್ಲಿ ನೈತಿಕತೆ ಬೆಳೆಸಲು ಪಾಲಕರು, ಪೋಷಕರು ಶಿಕ್ಷಕ ಬಳಗದೊದಿಗೆ ಕೈಜೋಡಿಸುವ ಅಗತ್ಯವಿದೆ ಎಂದರು.
ನಿವೃತ್ತ ಉಪ ಪ್ರಾಚಾರ್ಯ ಅಶೋಕ ಬೆಲ್ಲದ, ಸರಕಾರಿ ಶಾಲೆಗಳು ಸರಕಾರ ನೀಡುತ್ತಿರುವ ಪ್ರೋತ್ಸಾಹದಾಯಕ ಯೋಜನೆಗಳಿಂದ ಬಲಗೊಳ್ಳುತ್ತ ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ 536ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಇದನ್ನು ಸಾಕ್ಷೀಕರಿಸುತ್ತಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ವಿರುಪಾಕ್ಷಪ್ಪ ದೂಪದ, ದೇವರಾಜ ಕಮತಗಿ, ಹುಲಗಪ್ಪ ಕುರಿ, ನಾರಾಯಣ ಗಾಡಿ, ಪ್ರಭಾರಿ ಉಪಪ್ರಾಚಾರ್ಯ ಎಚ್.ಎಂ.ಹಾಲನ್ನವರ, ಗ್ರಾಪಂ ಸದಸ್ಯ ಹನಮಂತ ಮಿಣಜಗಿ, ಖಾಸೀಂಸಾಬ ಬೂದಿಹಾಳ, ಕೃಷ್ಣಾ ಚಲವಾದಿ, ನಬಿಸಾಬ ಮಾಗಿ, ಬಸವರಾಜ ಚಂದ್ರಾಯಿ, ವೀರಯ್ಯ ಲೂತಿಮಠ, ಪಾಂಡುರAಗ ಮಾಶಾಳ ಇತರರಿದ್ದರು.
ವರ್ಗಾವಣೆ:ಸನ್ಮಾನ
ಸಂಸ್ಥೆಯಿAದ ವರ್ಗಾವಣೆಗೊಂಡ ನಿರ್ಮಲಾ ಕುಚನೂರ, ಸವಿತಾ ಕಲ್ಲೂರ, ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಪದ್ಮಾವತಿ ಗಿರಿಯಪ್ಪನವರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಮಹಾದೇವ ಬಸರಕೋಡ, ಶಿಕ್ಷಕರಾದ ಎಲ್.ಎಸ್.ಬಾರಡ್ಡಿ, ಮಹಾಂತೇಶ ಪಾಟಿಲ್, ಎಫ್.ಎಂ.ತುAಬದ, ನಿಂಗಮ್ಮ ಕಜ್ಜಿ, ಶೋಭಾ ಮುಂಡೇವಾಡಿ, ಜಗದೀಶ ಬೆಲ್ಲದ, ಮಹಾಂತೇಶ ಅಂಗಡಿ, ಶಾರದಾ ಬೀಸಲದಿನ್ನಿ, ಅಶೋಕ ಲಮಾಣಿ ಇದ್ದರು.