This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ಹಿರಿಯರು ಕುಟುಂಬ, ಸಮಾಜದ ಆಸ್ತಿ : ಗದ್ದಿಗೌಡರ

ಹಿರಿಯರು ಕುಟುಂಬ, ಸಮಾಜದ ಆಸ್ತಿ : ಗದ್ದಿಗೌಡರ

ಬಾಗಲಕೋಟೆ

ಜೀವನದುದ್ದಕ್ಕೂ ನೇವು, ನಲಿವು ಅನುಭವಿಸಿ ಪರಿಪಕ್ವವಾದ ಹಿರಿಯರು ಕುಟುಂಬ ಹಾಗೂ ಸಮಾಜದ ಆಸ್ತಿಯಾಗಿದ್ದಾರೆಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಕಲಾಭವನದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

ಹಿಂದಿನಿಂದ ಹಿರಿಯರು ಹಾಕಿಕೊಟ್ಟ ನಮ್ಮ ಸಂಸ್ಕøತಿಯನ್ನು ಗೌರವಿಸುತ್ತಾ ಬಂದಿದ್ದೇವೆ. ಅಂತವರ ಮಾರ್ಗದರ್ಶನದಲ್ಲಿ ಅನೇಕ ಅವಿಭಕ್ತ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸುಶಿಕ್ಷಿತವಗಿ ಶಾಂತಿ, ನೆಮ್ಮದಿಯ ಬದುಕನ್ನು ಬಾಳಿದ್ದರು. ಆದರೆ ಇಂದು ಆಧುನಿಕತೆಯ ಭರಾಟೆಗೆ ಸಿಲುಕಿದ ಯುವ ಪೀಳಿಗೆ ಹಣ, ಜನ ಗಳಿಸುವ ದಾವಂತದಲ್ಲಿ ಹೆತ್ತವರನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಇರಿಂದ ಅನೇಕ ಹಿರಿಯ ಜೀವಿಗಳು ವೃದ್ದಾಶ್ರಮದಲ್ಲಿ ಸೇರುವಂತಾಗಿದೆ ಎಂದರು.

ಸಮಾಜದಲ್ಲಿ ಅನುಭವಿಸುತ್ತಿರುವ ನೋವುಗಳನ್ನು ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಶೇಷ ಯೋಜನೆಗಳನ್ನು ಹೊರತಂದಿದೆ. ರಿಯಾಯಿತಿ ದರದಲ್ಲಿ ಬಸ್ ಸಂಚಾರ, ಕಡಿಮೆ ದರದಲ್ಲಿ ಸಾಲ, ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕಾಯ್ದಿರಿಸಲಾಗುತ್ತಿದೆ. ಈ ಎಲ್ಲ ಸೌಲಭ್ಯಗಳನ್ನು ಹಿರಿಯ ನಾಗರಿಕರು ಸದುಪಯೋಗ ಪಡಿಸಿಕೊಂಡು ನೆಮ್ಮದಿಯ ಜೀವನ ಹಾಗೂ ಹಕ್ಕಿನ ಬದುಕು ನಡೆಸಲು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ 30 ವರ್ಷಗಳ ಹಿಂದೆ ಹಿರಿಯರನ್ನು ಗೌರವಿಸುವ ಉದ್ದೇಶದಿಂದ ಅವರು ಕುಟುಂಬದಲ್ಲಿ ಅನುಭವಿಸುವ ಯಾತನೆಯನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಅಕ್ಟೋಬರ 1 ನ್ನು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅನುಭವದ ಕಣಜ ಎನಿಸಿಕೊಂಡು ಹಿರಿಯರ ಮಾರ್ಗದರ್ಶನ ಕುಟುಂಬಕ್ಕು ಗ್ರಾಮಕ್ಕೂ ಸರಕಾರಕ್ಕು ಅವಶ್ಯವಾಗಿರುವದರಿಂದ ಅಂತಹ ಹಿರಿಯರಿಗೆ ಗೌರವಿಸಿ ಸತ್ಕಾರ ಮಾಡುವ ದಿನ ಇದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ಮನೆಯಲ್ಲಿ ಒಬ್ಬರು ಹಿರಿಯರಿದ್ದರೆ ಅವರ ಅನುಭವದ ಮಾತುಗಳು ಕೇಳುವದರ ಜೊತೆಗೆ ಅವುಗಳನ್ನು ಪಾಲಿಸುವುದು ಅಗತ್ಯವಾಗಿದೆ. ಜಿಲ್ಲೆಯ ಮುಧೋಳನ ಪ್ರೊ.ಆರ್.ಆರ್.ಹಂಚಿನಾಳ ಅವರಿಗೆ ಹಿರಿಯ ನಾಗರಿಕರ ವಿಭಾಗದ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿ, ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಹಿರಿಯ ನಾಗರಿಕರಾದ ಗುಳೇದ, ಪರಶುರಾಮ ತೆಗ್ಗಿ, ಗುರಮ್ಮ ಸಂಕಿನ, ಆರ್.ಕೆ.ಮಠ, ಷಣ್ಮುಕಪ್ಪ ಹದ್ಲಿ, ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ಹಿರಿಯ ಸಾಧಕರಿಗೆ ಸನ್ಮಾನ*

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 9 ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಷಣ್ಮುಖಪ್ಪ ವೀರಪ್ಪ ಹದ್ಲಿ (ಸಮಾಜ ಸೇವೆ), ಬೈಲಪ್ಪ ಹನಮಪ್ಪ ಹೂಗಾರ (ಶಿಕ್ಷಣ ಕ್ಷೇತ್ರ), ತಿಪ್ಪಣ್ಣ ಪರಪ್ಪ ಮಂಗಳೂರು (ಸಂಗೀತ ಕ್ಷೇತ್ರ), ಜಿ.ಎಸ್.ಗೌಡರ (ಸಮಾಜ ಸೇವೆ), ದೊಡ್ಡವ್ವ ಪರಮೇಶ್ವರಪ್ಪ ಪೂಜಾರಿ (ಕೃಷಿ ಕ್ಷೇತ್ರ), ಮುದಕಪ್ಪ ಯಮನಪ್ಪ ವಡವಾನಿ (ಶಿಕ್ಷಣ ಕ್ಷೇತ್ರ), ಶಾಂತಾಬಾಯಿ ಮಾಳಿ, ಗುರಪ್ಪ ಹೊನ್ನಪ್ಪ ಚೌರಿ, ಕಲ್ಲಪ್ಪ ಭೀಮಪ್ಪ ಕಡಬಲ್ಲವರ (ಸಮಾಜ ಸೇವೆ).

Nimma Suddi
";