This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local NewsPolitics NewsState News

ಅಮೀನಗಡ ಪಿಕೆಪಿಎಸ್‌ಗೆ ಚುನಾವಣೆ ಫಿಕ್ಸ್

ಅಮೀನಗಡ ಪಿಕೆಪಿಎಸ್‌ಗೆ ಚುನಾವಣೆ ಫಿಕ್ಸ್

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ೧೧ ಸ್ಥಾನಗಳಿಗೆ ೨೬ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಿಕೆಪಿಎಸ್ ನಿರ್ದೇಶಕ ಮಂಡಳಿಯ ೧೨ ಸ್ಥಾನದ ಚುನಾವಣೆಗೆ ಡಿ.೧೮ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿತ್ತು. ನಾಮಪತ್ರ ಸಲ್ಲಿಸಿದ ೪೮ ಅಭ್ಯರ್ಥಿಗಳಲ್ಲಿ ಕೊನೆಯ ದಿನ ೨೧ ನಾಮಪತ್ರಗಳನ್ನು ವಾಪಸ್ ಪಡೆಯಲಾಯಿತು. ಇದೀಗ ೨೬ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ೧ ಸ್ಥಾನಕ್ಕೆ ಹುಲ್ಲಪ್ಪ ತಳವಾರ ಅಭ್ಯರ್ಥಿ ಒಬ್ಬರೇ  ಉಳಿದಿದ್ದರಿಂದ ಅವರ ಆಯ್ಕೆ ಅವಿರೋಧವಾಗಿ ಆಯಿತು. ಇನ್ನುಳಿದ ೧೧ ಸ್ಥಾನಗಳಿಗೆ ಡಿ.೨೪ರಂದು ಎಂಪಿಎಸ್ ಶಾಲೆಯಲ್ಲಿ ಮತದಾನ ನಡೆಯಲಿದೆ.

ಸಾಲಗಾರರ ಸಾಮಾನ್ಯ ಕ್ಷೇತ್ರದ ೫ ಸ್ಥಾನಗಳಿಗೆ ೧೧ ಅಭ್ಯರ್ಥಿಗಳು, ಪಜಾ ಕ್ಷೇತ್ರದ ೧ ಸ್ಥಾನಕ್ಕೆ ೩ ಅಭ್ಯರ್ಥಿಗಳು, ಹಿಂವಅ ಕ್ಷೇತ್ರದ ೧ ಸ್ಥಾನಕ್ಕೆ ೩ ಅಭ್ಯರ್ಥಿಗಳು, ಹಿಂವಬ ಕ್ಷೇತ್ರದ ೧ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು, ಮಹಿಳಾ ಕ್ಷೇತ್ರದ ೨ ಸ್ಥಾನಕ್ಕೆ ೪ ಅಭ್ಯರ್ಥಿಗಳು ಹಾಗೂ ಸಾಲೇತರ ಕ್ಷೇತ್ರದ ೧ ಸ್ಥಾನಕ್ಕೆ ೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಾಮಾನ್ಯ ಕ್ಷೇತ್ರ ಕಣದಲ್ಲಿರುವವರು:

ಲೋಹಿತ ರಕ್ಕಸಗಿ, ಹುಸೇನಸಾಬ ಬಾಗೇವಾಡಿ, ಸಂಗಪ್ಪ ಕತ್ತಿ, ರವಿ ಬಂಡಿ, ಚಂದ್ರಕಾಂತ ಚೌಕಿಮಠ, ಚಿದಾನಂದಪ್ಪ ತತ್ರಾಣಿ, ಪುಂಡಲೀಕಪ್ಪ ರಕ್ಕಸಗಿ, ಈಶಪ್ಪ ಚಳ್ಳಗಿಡದ, ಸಿದ್ದು ಸಜ್ಜನ, ಮೈಲಾರಪ್ಪ ನರಿ, ಗ್ಯಾನನಗೌಡ ಪಾಟೀಲ.

ಪಜಾ ಕ್ಷೇತ್ರ ಕಣದಲ್ಲಿರುವವರು:

ಪಾಂಡಪ್ಪ ವಡ್ಡರ, ಅಶೋಕ ಲಮಾಣಿ, ತಾಯಪ್ಪ ಹುಲಗಿನಾಳ.

ಹಿಂವಅ ಕ್ಷೇತ್ರ ಕಣದಲ್ಲಿರುವವರು:

ಸಂತೋಷ ಕತ್ತಿ, ಚಂದ್ರಕಾAತ ಸಂಗಟಿ, ಯಲ್ಲನಗೌಡ ಪಾಟೀಲ.

ಹಿಂವಬ ಕ್ಷೇತ್ರ ಕಣದಲ್ಲಿರುವವರು:

ಅಶೋಕ ಯರಗೇರಿ, ಬಸವರಾಜ ನರಿ.

ಮಹಿಳಾ ಕ್ಷೇತ್ರ ಕಣದಲ್ಲಿರುವವರು:

ಶಿವವ್ವ ರಾಮಥಾಳ, ಪಂಪವ್ವ ಯಡಪ್ಪನ್ನವರ, ಪ್ರೇಮಾ ಚೌವಾಣ, ಮಳಿಯವ್ವ ಮದ್ಲಿ.

ಸಾಲೇತರ ಕ್ಷೇತ್ರ ಕಣದಲ್ಲಿರುವವರು:

ಕೂಡ್ಲಪ್ಪ ಚಿತ್ತರಗಿ, ಬಾಬು ಛಬ್ಬಿ, ಪಾಪಣ್ಣ ಭದ್ರಶೆಟ್ಟಿ.

ಚುನಾವಣೆಗೆ ಸಿದ್ಧತೆ
ಹಲವು ವರ್ಷಗಳಿಂದ ಚುನಾವಣೆಯನ್ನೇ ಕಾಣದೆ ಅವಿರೋಧ ಆಯ್ಕೆ ನಡೆದ ಇಲ್ಲಿನ ಪಿಕೆಪಿಎಸ್ ನಿರ್ದೇಶಕರ ಮಂಡಳಿಗೆ ಕೊನೆಗೂ ಕಣ ಸಿದ್ದವಾಗಿದೆ. ಡಿ.೧೮ರಂದು ಬಹುತೇಕ ಸ್ಥಾನಗಳು ಅವಿರೋಧವಾಗಿ ಆಯ್ಕೆ ಆಗುತ್ತದೆ ಎಂದೇ ಭಾವಿಸಲಾಗಿತ್ತು. ಬೆಳಗ್ಗೆಯಿಂದ ಆಯಕಟ್ಟಿ ಸ್ಥಳದಲ್ಲಿ ಹಗ್ಗಜಗ್ಗಾಟ ಭರ್ಜರಿಯಾಗಿತ್ತು. ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ವಿಳಂಬವಾದರೂ ಹಗ್ಗಜಗ್ಗಾಟಕ್ಕೆ ಬ್ರೇಕ್ ಬಿದ್ದು ಸಂಜೆ ೬.೩೦ಕ್ಕೆ ಅಂತಿಮ ಪಟ್ಟಿ ಪ್ರಕಟಗೊಂಡು ಕೊನೆಗೂ ಕಣ ರಂಗೇರುವಂತಾಯಿತು.

Nimma Suddi
";