ಬಾಗಲಕೋಟೆ
ಲೋಕಸಭೆ ಚುನಾವಣೆಗೆ ಬಾಗಲಕೋಟೆ ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಏ.೧೯ರಂದು ಕೊನೆಗೊಂಡಿದ್ದು ೨೬ ಅಭ್ಯರ್ಥಿಗಳಿಂದ ೩೫ ನಾಮಪತ್ರ ಸಲ್ಲಿಕೆ ಆಗಿವೆ.
ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಏ.೧೯ರಂದು ೯ ಅಭ್ಯರ್ಥಿಗಳಿಂದ ೧೦ ನಾಮಪತ್ರ ಸಲ್ಲಿಕೆ ಆಗಿವೆ. ಕಾಂಗ್ರೆಸ್‌ನಿಂದ ಸಂಯುಕ್ತಾ ಪಾಟೀಲ ೨ ಸೆಟ್ ನಾಮಪತ್ರ ಸಲ್ಲಿಸಿದರೆ, ಟಿಪ್ಪು ಸುಲ್ತಾನ್ ಪಕ್ಷದಿಂದ ಸೈಯದ ಜಕಲಿ, ಅಖಿಲ ಭಾರತ ಹಿಂದೂ ಮಹಾಸಭಾದಿಂದ ಶರಣಪ್ಪ ಕೊತ್ಲಣ್ಣವರ, ದೇಶಪ್ರೇಮ ಪಕ್ಷದಿಂದ ಸಿದ್ದನಗೌಡ ಮರಿಗೌಡ್ರ, ಬಹುಜನ ಮುಕ್ತಿ ಪಕ್ಷದಿಂದ ಅಬ್ದುಲ್‌ಅಜೀಜ್ ಕಲಾದಗಿ, ರೈತ ಭಾರತ ಪಕ್ಷದಿಂದ ಮುತ್ತಪ್ಪ ಹಿರೇಕುಂಬಿ ಹಾಗೂ ಪಕ್ಷೇತರರಾಗಿ ದತ್ತಾತ್ರೇಯ ತಾವರೆ, ಬಸವರಾಜ ಹಲ್ಪಿ, ಪ್ರಶಾಂತರಾವ್ ತಲಾ ಒಂದು ನಾಮಪತ್ರ ಸಲ್ಲಿಸಿದರು.
ಏ.೧೨ರಿಂದ ಆರಂಭವಾದ ನಾಮಪತ್ರ ಸಲ್ಲಿಕೆ ಶುಕ್ರವಾರ ಕೊನೆಗೊಂಡಿದ್ದು, ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ (೨), ಕಾಂಗ್ರೆಸ್‌ನಿAದ ಸಂಯುಕ್ತಾ ಪಾಟೀಲ (೪), ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಾಸೆ (೨), ಪಕ್ಷೇತರ ಅಭ್ಯರ್ಥಿಗಳಾದ ಅಂಬ್ರೋಸ್ ಡಿ ಮೆಲ್ಲೋ (೨), ರವಿ ಪಡಸಲಗಿ (೨), ಮಲ್ಲಿಕಾರ್ಜುನ ಕೆಂಗನಾಳ (೨), ದತ್ತಾತ್ರೇಯ ತಾವರೆ (೨), ಮಲ್ಲಪ್ಪ ತಳವಾರ-ಕಮ್ಯುನಿಷ್ಟ ಪಕ್ಷ, ಸಾಗರ ಕುಂಬಾರ-ಕೆಆರ್‌ಎಸ್, ಶಂಕರ ನಾಯ್ಕರ್-ಆರ್‌ಪಿಐ, ಮಹದೇವ ಸಿದಗೋಣಿ-ಬಿಎಸ್‌ಪಿ, ಸೈಯದ ಜಕಲಿ-ಟಿಪ್ಪು ಸುಲ್ತಾನ್ ಪಕ್ಷ, ಶರಣಪ್ಪ ಕೊತ್ಲಣ್ಣವರ-ಅಖಿಲ ಭಾರತ ಹಿಂದೂ ಮಹಾಸಭಾ, ಸಿದ್ದನಗೌಡ ಮರಿಗೌಡ್ರ-ದೇಶಪ್ರೇಮ ಪಕ್ಷ, ಅಬ್ದುಲ್ ಅಜೀಜ್ ಕಲಾದಗಿ-ಬಹುಜನ ಮುಕ್ತಿ ಪಕ್ಷ, ಮುತ್ತಪ್ಪ ಹಿರೇಕುಂಬಿ-ರೈತ ಭಾರತ ಪಕ್ಷ ಹಾಗೂ ಬಸವರಾಜ ಹಲ್ಪಿ, ಪ್ರಶಾಂತರಾವ್, ರಾಜೇಸಾಬ ಮಸಳಿ, ಪರಶುರಾಮ ನೀಲನಾಯಕ, ನಾಗರಾಜ ಕಲ್ಲಕುಟಗರ, ಮುತ್ತು ಸುರಕೋಡ, ಮಾರುತಿ ಜಮೀನ್ದಾರ್, ಹನಮಪ್ಪ ತಳವಾರ, ಸಂಗಮೇಶ ಭಾವಿಕಟ್ಟಿ, ಜ್ಯೋತಿಲಕ್ಷಿö್ಮ ಹಂಪಿಹೊಳಿಮಠ ಪಕ್ಷೇತರ ಅಭ್ಯರ್ಥಿಗಳಾಗಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.೨೨ ಕೊನೆಯ ದಿನವಾಗಿದೆ ಎಂದು ಡಿಸಿ ಕೆ.ಎಂ.ಜಾನಕಿ ತಿಳಿಸಿದ್ದಾರೆ.