ಬೆಂಗಳೂರು: ತಮಿಳುನಾಡಿಗೆ ಒಂದೇ ಒಂದು ಹನಿ ನೀರು ಬಿಟ್ರು ಹೋರಾಟದ ರೂಪ ಬೇರೆಯಿರುತ್ತೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ನಾಳೆಯ ಬಂದ್ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂದ್ ಬೆಂಬಲಿಸಲು ಕರೆ ನೀಡಿದ್ದಾರೆ.
ನಾಳೆಯ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕು. ಎಲ್ಲಾ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಬೇಕು ಕಾವೇರಿ ವಿವಾದದ ಬಗ್ಗೆ ಬಹಳ ಚರ್ಚೆ ಮಾಡಿದ್ದೀವಿ. ನಾಳೆ ಬೆಂಗಳೂರು ಬಂದ್ ಆಗಬೇಕು. ಎಲ್ಲಾ ಸಂಘಟನೆಗಳು ಬಂದ್ ಮಾಡಬೇಕು. ಯಾರು ಹೋಟೆಲ್ ಓಪನ್ ಮಾಡಬಾರದು ಸಂಪೂರ್ಣ ಬಂದ್ ಮಾಡಬೇಕು. ನಾಡಿದ್ದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಎಲ್ಲಾ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ನಾಯಕರು ಸೇರಿ ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದಿದ್ದಾರೆ.
ತಮಿಳುನಾಡಿನ ಏಜೆಂಟ್‌ನಂತೆ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನ ನಾನು ಖಂಡಿಸುತ್ತೇನೆ. ನಮಗೆ ಕುಡಿಯಲು ನೀರಿಲ್ಲದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವ ಅವಶ್ಯಕತೆ ಇಲ್ಲ. ಹೀಗಾಗಿ ನಾಳೆ ಕರೆದಿರುವ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.