This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ನಾನು ಗೆಲ್ಲುತ್ತಿದ್ದೆ. ಆದರೆ ಅಮಿತ್ ಶಾ ಹೇಳಿದ್ದಕ್ಕೆ 2 ಕಡೆ ಸ್ಪರ್ಧಿಸಿ ಸೋತಿದ್ದೇನೆ: ಮಾಜಿ ಸಚಿವ ಸೋಮಣ್ಣ

ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ನಾನು ಗೆಲ್ಲುತ್ತಿದ್ದೆ. ಆದರೆ ಅಮಿತ್ ಶಾ ಹೇಳಿದ್ದಕ್ಕೆ 2 ಕಡೆ ಸ್ಪರ್ಧಿಸಿ ಸೋತಿದ್ದೇನೆ: ಮಾಜಿ ಸಚಿವ ಸೋಮಣ್ಣ

ತುಮಕೂರು: ಗೋವಿಂದರಾಜನಗರ ಕ್ಷೇತ್ರದಿಂದ ಆರಾಮಾಗಿ ಗೆಲ್ಲುತ್ತಿದ್ದೆ. ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ನಾನು ಗೆಲ್ಲುತ್ತಿದ್ದೆ. ಆದರೆ ಅಮಿತ್ ಶಾ ಹೇಳಿದ್ದಕ್ಕೆ 2 ಕಡೆ ಸ್ಪರ್ಧಿಸಿ ಸೋತಿದ್ದೇನೆ ಎಂದು ವಿಧಾನಸಭೆ ಸೋಲನ್ನು ಮಾಜಿ ಸಚಿವ ಸೋಮಣ್ಣ ತಿಳಿಸಿದರು.

ನಗರದ ಮುರುಘಾ ರಾಜೇಂದ್ರ ಸಮುದಾಯ‌ ಭವನದಲ್ಲಿ ನಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಿಜೆಪಿ ಮುಖಂಡ ಡಾ. ಪರಮೇಶ್​​ರವರ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ. ನನಗಾದ ಅಪಚಾರ ನೋಡಿ MP ಟಿಕೆಟ್​ ಕೊಟ್ಟಿದ್ದಾರೆ ಎಂದು ಹೇಳಿದರು.

ಇಂದಿರಾ ಗಾಂಧಿಗೂ ಚಿಕ್ಕಮಗಳೂರಿಗೂ ಏನು ಸಂಬಂಧ? ಆದರೂ ವಿರೋಧಿಗಳು ನನ್ನ ವಲಸಿಗ ಎಂದು ಹೇಳುತ್ತಾರೆ ಎಂದು ಪರೋಕ್ಷವಾಗಿ ಮಾಧುಸ್ವಾಮಿಗೆ ಟಾಂಗ್ ಕೊಟ್ಟರು. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಎಂದೂ ಕೂಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡವರಲ್ಲ. ಆದರೆ ಪ್ರಧಾನಿ ಮೋದಿಗಾಗಿ, ಈ ರಾಷ್ಟ್ರದ ಅಭಿವೃದ್ಧಿಗಾಗಿ ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದಾರೆ.

ತುಮಕೂರನ್ನ ವಾರಣಾಸಿ ಮಾಡೋದು ನನ್ನ ಗುರಿ. ಹೈಕಮಾಂಡ್ ಈಗಲೂ ಹೇಳಿದರೆ ನಿರ್ಧಾರ ಬದಲಿಸುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲು ತೀರ್ಮಾನ ಮಾಡಲಾಗಿದ್ದು, ಸೋಮಣ್ಣ ಪರ ಕೆಲಸ ಮಾಡಲು ಡಾ.ಪರಮೇಶ್ ನಿರ್ಧಾರ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

Nimma Suddi
";