ಬೆಂಗಳೂರು, ಮೇ.29: ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಿದ್ದು, ಆದರೆ ಶಾಲೆ ಶುರುವಾದ್ರೂ ತರಗತಿಗಳು ನಡೆಯೋದೆ ಡೌಟ್ ಆಗಿದೆ.
ಏಕೆಂದರೆ ಶಾಲೆ ಶುರುವಾದರೂ ಇನ್ನು ಕೂಡ ವಿದ್ಯಾರ್ಥಿಗಳ ಕೈಗೆ ಪಠ್ಯ ಪುಸ್ತಕಗಳು ಸೇರಿಲ್ಲ. ಮಕ್ಕಳ ಪಠ್ಯ ಪುಸ್ತಕಕ್ಕೆ ಕಳೆದ 6 ತಿಂಗಳ ಹಿಂದೆಯೇ ಶಾಲೆಗಳು ಹಣ ಕಟ್ಟಿವೆ. ಆದರೂ ಪಠ್ಯ ಪುಸ್ತಕಗಳು ಬಂದಿಲ್ಲ. ಹೀಗಾಗಿ ಶಾಲೆ ಶುರುವಾದರೂ ಮಕ್ಕಳಿಗೆ ತರಗತಿಗಳು ನಡೆಯೋದು ಡೌಟ್ ಆಗಿದೆ.
ಕೇವಲ 50% ರಿಂದ 60% ಪಠ್ಯಪುಸ್ತಕಗಳನ್ನ ಮಾತ್ರ ಶಿಕ್ಷಣ ಇಲಾಖೆ ಶಾಲೆಗಳಿಗೆ ನೀಡಿದೆ. ಉಳಿದ ಪಠ್ಯ ಪುಸ್ತಕಗಳು ಬಂದಿಲ್ಲ. ಪಠ್ಯ ಪುಸ್ತಕ ಇಲ್ಲದೆ ತರಗತಿ ನಡೆಸುವುದು ಹೇಗೆ ಎಂದು ಶಾಲೆಗಳು ಹಾಗೂ ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನವೇ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಅಂತಾ ಇಲಾಖೆ ಹೇಳಿತ್ತು.
ಬೆಂಗಳೂರಿನ ನಾಗಸಂದ್ರ ಬಳಿಯ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಗಲಾಟೆ ನಡೆದಿದೆ. ಬೆಳ್ಳಂಬೆಳಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಪೂರ್ಣ ಪ್ರಜ್ಞಾ ಶಾಲೆಯ ಮುಂದೆ ಪೋಷಕರು ಧರಣಿ ನಡೆಸುತ್ತಿದ್ದಾರೆ. ಹಾಘೂ ಕಿರುಕುಳ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ಬೇಕಾಬಿಟ್ಟಿ ಫೀಸ್ ವಸೂಲಿ ಮಾಡ್ತಿದೆ. ಪೋಷಕರಿಗೆ ಆಡಳಿತ ಮಂಡಳಿ ಮಾರ್ಯದೆ ನೀಡ್ತಿಲ್ಲ. ಇಲ್ಲಿಯವರೆಗೆ ಪೋಷಕರ ಜೊತೆ ಮೀಟಿಂಗ್ ಮಾಡಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ವಾಗ್ದಾಳಿ ನಡೆಸಿದ್ದಾರೆ. ಇನ್ನು ಶಾಲಾ ಶುಲ್ಕ ಕಟ್ಟದ ಮಕ್ಕಳನ್ನ ಕೂಡಿ ಹಾಕಿದ್ದಾರೆ ಎಂದು ಪೋಷಕರು ಶಾಲೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಗಲಾಟೆ ಬಳಿಕ ಕೂಡಿ ಹಾಕಿದ್ದ ಮಕ್ಕಳನ್ನ ತರಗತಿಗೆ ಕಳಿಸಲಾಗಿದೆ ಎನ್ನಲಾಗುತ್ತಿದೆ.
ಶಾಲೆಗಳಿಗೆ ಪಠ್ಯ ಪುಸ್ತಕಗಳು ತಲುಪಿಲ್ಲ. ಇಂದಿನಿಂದ ಶಾಲೆ ಆರಂಭವಾದ್ರೂ ಕಂಪ್ಲೀಟ್ ತರಗತಿಗಳು ನಡೆಯೋದು ಡೌಟ್ ಎನ್ನಲಾಗುತ್ತಿದೆ. ಶಿಕ್ಷಣ ಇಲಾಖೆ ನಡೆಗೆ ಪೋಷಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.