This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಬಿಸಿಲ ಎಫೆಕ್ಟ್‌ಗೆ ಹೂ ತುಂಬಿಕೊಂಡ ಮರಗಳು:ಬರದಲ್ಲಿ ಮಾವು ಕೈಹಿಡಿಯುವ ನಿರೀಕ್ಷೆ

ಬಿಸಿಲ ಎಫೆಕ್ಟ್‌ಗೆ ಹೂ ತುಂಬಿಕೊಂಡ ಮರಗಳು:ಬರದಲ್ಲಿ ಮಾವು ಕೈಹಿಡಿಯುವ ನಿರೀಕ್ಷೆ

ಬೆಂಗಳೂರು ಗ್ರಾಮಾಂತರ: ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಬೆಳೆಗಳಿಗೂ ಬರದ ಛಾಯೆ ಆವರಿಸಿದ್ದು, ಬಹುತೇಕ ಬೆಳೆಗಳು ಕೂಡ ಇಳಿಮುಖವಾಗಿವೆ ಇದರ ನಡುವೆ ಜಿಲ್ಲೆಯಲ್ಲಿ ಮಾವು ಬೆಳೆಗಾರರಲ್ಲಿ ಆಶಾಭಾವನೆ ಮೂಡಿದೆ. ಉತ್ತಮವಾಗಿ ಹೂ ಬಿಟ್ಟಿರುವ ಮಾವು ಒಳ್ಳೆಯ ಬೆಳೆ ಕೊಡುವ ನಿರೀಕ್ಷೆ ಮೂಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅದರಲ್ಲೂ3 ತಾಲೂಕುಗಳಲ್ಲಿ ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ವ್ಯಾಪ್ತಿಯಲ್ಲಿ ಮಾವು ಬೆಳೆಯುತ್ತಿದ್ದು, 2022ರಲ್ಲಿ ಸುರಿದ ವ್ಯಾಪಕ ಮಳೆಯಿಂದ ಕಳೆದ ಬಾರಿ ನಿರೀಕ್ಷೆಯಷ್ಟು ಫಸಲು ಬಂದಿಲ್ಲ. ಆದರೆ ಈ ವರ್ಷ ಬರದ ನಡುವೆಯೂ ಮಾವಿಗೆ ಉತ್ತಮ ವಾತಾವರಣವಿರುವ ಹಿನ್ನೆಲೆ ಬಹುತೇಕ ಮರಗಳಲ್ಲಿ ಹೂವು ಉತ್ತಮವಾಗಿದೆ.

ಕಳೆದ ಕೆಲ ದಿನಗಳಿಂದ ಒಂದೇ ರೀತಿಯ ವಾತಾವರಣ ಮುಂದುವರಿದಿರುವುದರಿಂದ ಹೂವುಗಳಿಗೆ ಯಾವುದೇ ಹಾನಿಯಾಗಿಲ್ಲ. ಇದೇ ರೀತಿ ಮುಂದುವರಿದರೆ ಈ ವರ್ಷ ಬಂಪರ್‌ ಫಸಲು ಕೈಸೇರುವ ನಿರೀಕ್ಷೆಯಿದೆ. ಫಸಲಿನ ಜತೆಗೆ ಮಾವಿನ ಹಣ್ಣಿಗೆ ಉತ್ತಮ ದರ ಸಿಕ್ಕರೆ ಮಾವು ಬೆಳೆಗಾರರು ಲಾಭದ ಸಿಹಿ ಗಳಿಸುವ ಆಶಯದಲ್ಲಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ತಾಲೂಕುಗಳಲ್ಲೂ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1038.57 ಹೆಕ್ಟೇರ್‌, ಹೊಸಕೋಟೆ 2066.80 ಹೆಕ್ಟೇರ್‌, ನೆಲಮಂಗಲ 1399 ಹೆಕ್ಟೇರ್‌, ದೇವನಹಳ್ಳಿ 729.61 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯುವ ಮೂಲಕ ಜಿಲ್ಲೆಯಾದ್ಯಂತ ಒಟ್ಟು 5233.98 ಹೆಕ್ಟೇರ್‌ ಪ್ರದೇಶದಲ್ಲಿಮಾವು ಬೆಳೆಯಲಾಗಿದೆ.

ಬಾದಮಿ, ರಸಪುರಿ, ತೋತಾಪುರಿ ಸೇರಿದಂತೆ ನಾನಾ ರೀತಿಯ ಮಾವುಗಳನ್ನು ಬೆಳೆಯಲಾಗುತ್ತಿದ್ದು, ಈ ಬಾರಿ ಉತ್ತಮ ಫಸಲು ಕೈಸೇರುವ ಮೂಲಕ ಈ ಸೀಸನ್‌ನಲ್ಲಿಒಳ್ಳೆಯ ಆದಾಯ ಕೂಡ ಗಳಿಸುವ ನಿರೀಕ್ಷೆಯನ್ನು ಮಾವು ಮೂಡಿಸಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಅಡಕೆ ಹಾವಳಿ ಕೂಡ ಹೆಚ್ಚಾಗಿದೆ. ಹಲವು ಕಡೆಗಳಲ್ಲಿಅಡಕೆ ಬೆಳೆಯುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ಹಲವು ಕಡೆಗಳಲ್ಲಿಮಾವಿಗೂ ಹೊಡೆತ ಬಿದ್ದಿದೆ ಎಂಬ ಬಗ್ಗೆ ಮಾಹಿತಿ ಇದೆ.

Nimma Suddi
";