ಬಾಗಲಕೋಟೆ
ಕನಸನ್ನು ನನಸಾಗಿಸಿಕೊಳ್ಳಲು ಸರ್ವಾಂಗೀಣ ಅಭಿವೃದ್ಧಿಯತ್ತ ಚಲನಶೀಲರಾಗಲು ಪಠ್ಯ ಒಂದು ದಾರಿಯಾದರೆ ಪಠ್ಯೇತರ ಚಟುವಟಿಕೆಗಳು ಅನೇಕ ಬಗೆಯ ಕವಲುದಾರಿಗಳಿದ್ದಂತೆ ಎಂದು ತೋವಿವಿ ಸ್ನಾತಕೋತ್ತರ ವಿಭಾಗದ ಡೀನ್ ಡಾ.ರವೀಂದ್ರ ಮುಳಗೆ ಹೇಳಿದರು.
ನಗರದ ಬವಿವ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಖ್ಯ ಗುರಿ ಹೊಂದಿದವರಿಗೆ ಇಂಥ ಕವಲುದಾರಿಗಳು ಬೇಗ ಸಾಧನೆಯತ್ತ ತೊಡಗಿಸಿಕೊಳ್ಳಲು ಸಹಕಾರಿಯಾಗಲಿವೆ. ಹೀಗಾಗಿ ಪ್ರತಿ ವಿದ್ಯಾರ್ಥಿಯೂ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಗಳ ಕಾರ್ಯಧ್ಯಕ್ಷ ಗುರುಬಸವ ಸೂಳಿಭಾವಿ, ಪ್ರಾಚಾರ್ಯ ಡಾ.ಎಸ್.ಎಂ.ಗಾAವಕರ್, ಐಕ್ಯೂಎಸಿ ಸಂಯೋಜಕ ಡಾ.ದೇವಪ್ಪ ಲಮಾಣಿ ಮಾತನಾಡಿದರು.
ವಿದ್ಯಾರ್ಥಿ ಕಲ್ಯಾಣ ಅಕಾರಿ ಪ್ರೊ.ಎ.ಎಲ್.ಕಾತರಕಿ, ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ..ಬಸವರಾಜ ಲೋಕಾಪರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಹರಿ ಧೂಪದ, ವಿದ್ಯಾರ್ಥಿ ಪ್ರತಿನಿ ಮುತ್ತಪ್ಪ ಸುನದಳ್ಳಿ, ಶಿಲ್ಪಾ ಯರನಾಳ, ಕೀರ್ತಿ, ಮಹಾನಂದ ಮಠದ ಇದ್ದರು.
೨೦೨೩ನೇ ಶೈಕ್ಷಣಿಕ ವರ್ಷದಲ್ಲಿ ಅತಿ ಕಡಿಮೆ ರಜೆ ಪಡೆದ ಮಹಾವಿದ್ಯಾಲಯದ ನೌಕರರನ್ನು ಗೌರವಿಸಿ, ಸನ್ಮಾನಿಸಲಾಯಿತು.