ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದಕರ ಹಾಗೂ ಕಲ್ಲು ತೂರಾಟಗಾರರ ಕುಟುಂಬಕ್ಕೆ ಅಥವಾ ಅವರ ನಿಕಟವರ್ತಿಗಳಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕಾಶ್ಮೀರದಲ್ಲಿ, ಯಾರಾದರೂ ಭಯೋತ್ಪಾದಕ ಸಂಘಟನೆಗೆ ಸೇರಿದರೆ, ಅವರ ಕುಟುಂಬದ ಸದಸ್ಯರಿಗೆ ಯಾವುದೇ ಸರ್ಕಾರಿ ಉದ್ಯೋಗ ನೀಡುವುದಿಲ್ಲ ಎಂಬ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದರ ಜತೆಗೆ ಯಾರಾದರೂ ಕಲ್ಲು ತೂರಾಟದಲ್ಲಿ ತೊಡಗಿದರೆ ಅವರ ಕುಟುಂಬದ ಸದಸ್ಯರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಈ ನಿರ್ಧಾರದ ವಿರುದ್ಧ ಕೆಲವೊಂದು ಬುದ್ಧಿಜೀವಿಗಳು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ಕೊನೆಗೆ ಸುಪ್ರೀಂನಲ್ಲೂ ಸರ್ಕಾರದ ನಿರ್ಧಾರವೇ ಮೇಲುಗೈ ಸಾಧಿಸಿತು. ಇನ್ನು ಭಯೋತ್ಪಾಕದ ಕುಟುಂಬದವರ ತನ್ನ ಹತ್ತಿರದ ಸಂಬಂಧಿಗಳು ಅಧಿಕಾರಿಗಳ ಮುಂದೆ ಬಂದು ನಮ್ಮ ಕುಟುಂಬದ ಈ ವ್ಯಕ್ತಿ ಭಯೋತ್ಪಾದಕ ಸಂಘಟನೆಯಲ್ಲಿ ತೋಡಗಿಸಿಕೊಂಡಿದರೆ ಎಂದು ಹೇಳಿದರೆ ಅವರಿಗೆ ವಿನಾಯಿತಿ ನೀಡಿಲಾಗುವುದು ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹಾಗೂ ಅಂತಹ ಪರಿಸರವನ್ನು ನಿರ್ಮೂಲನೆ ಮಾಡಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಭಯೋತ್ಪಾದಕ ಘಟನೆ ಕಡಿಮೆಯಾಗಿದೆ ಎಂದು ಹೇಳಿದರು.