ಬಾಗಲಕೋಟೆ
ನ್ಯಾಯವಾದಿ, ರೈತರ ಪರ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರ ಮೇಲೆ ಮುಧೋಳ ನಗರದ ಹೊರವಲಯದ ಇಂಗಳಗಿ ರಸ್ತೆಯ ಬೈಪಾಸ್ ಬಳಿ ಮಾರಣಾಂತಿಕ ಹಲ್ಲೆ ಘಟನೆ ಖಂಡಿಸಿ ನಗರದಲ್ಲಿ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಹೆಗಡೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ತಪ್ಪಿಸ್ಥಿತರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೇ ಎಲ್ಲೆಡೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ ಮಾತನಾಡಿ, ಹೋರಾಟಗಾರರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಹೋರಾಟಗಾರ ಹಣಮಂತ ಶಿಂಧೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಸುರೇಶ ಚಿಂಚಲಿ, ಬಸಪ್ಪ ಸಂಗನ್ನವರ, ಸುಭಾಸ ಶಿರಬೂರ, ರಾಚಪ್ಪ ಕಲ್ಲೊಳ್ಳಿ, ವೆಂಕಣ್ಣಾ ಮಳಲಿ, ಲವಿತ ಮೇತ್ರಿ ಇತರರು ಇದ್ದರು.
ಡಿವೈಎಸ್ಪಿ ಭೇಟಿ:
ಡಿವೈಎಸ್ಪಿ ಶಾಂತವೀರ, ಸಿಪಿಐ ಮಹದೇವ ಶಿರಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ,ದೂರು ನೀಡಿದ 24 ಗಂಟೆಯೊಳಗೆ ಬಂಧಿಸಲಾಗುವುದು. ಪ್ರತಿಭಟನೆ ಹಿಂದೆ ಪಡೆಯಬೇಕೆಂದು ಮನವಿ ಮಾಡಿಕೊಂಡಾಗ ರೈತರು ಪ್ರತಿಭಟನೆ ಹಿಂದೆ ಪಡೆದರು.