ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಉಪ ಕೃಷಿ ನಿರ್ದೇಶಕ ಎಲ್.ಐ.ರೂಢಗಿ ಸೋಮವಾರ ಭೇಟಿ ನೀಡಿ ದಾಸ್ತಾನು ಮಾಹಿತಿ ಪಡೆದರು.
ಪಟ್ಟಣದಲ್ಲಿ ಕೃಷಿ ಪರಿಕರ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಗೊಬ್ಬರ ನಿಗದಿತ ಬೆಲೆಗೆ ಮಾರಾಟವಾಗಬೇಕು. ರಸಗೊಬ್ಬರ ನಿಯಂತ್ರಣ ಆದೇಶ ಸೇರಿದಂತೆ ಇತರೆ ನಿಯಮ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ರೈತರಿಗೆ ಯೋಗ್ಯ ಬೆಲೆಯಲ್ಲಿ ವಿತರಣೆ ಆಗಬೇಕು. ಮಳಿಗೆಯಲ್ಲಿನ ದಾಸ್ತಾನು, ದರ ಪಟ್ಟಿ ರೈತರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೆ ಬೀಜ, ಗೊಬ್ಬರ ಕೊರತೆಯಿಲ್ಲ. ಆರ್‌ಎಸ್‌ಕೆಗಳಲ್ಲಿ ದಾಸ್ತಾನು ಮಾಡಿಸಲಾಗುತ್ತಿದೆ. ರೈತರು ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಜಾಧವ ಇದ್ದರು.