ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ನಾನಾ ಬೆಳೆಗಳ ಕ್ಷೇತ್ರಗಳಿಗೆ ಜಿಲ್ಲಾ ಪೀಡೆ ಸರ್ವೆಕ್ಷಣಾ ತಂಡ ಪ್ರವಾಸ ಕೈಗೊಂಡು ರೈತರಿಗೆ ತಮ್ಮ ಕ್ಷೇತ್ರದಲ್ಲಿಯೇ ಕೀಟ ಪೀಡೆಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಅರ್ಜುನ ಸೂಲಗಿತ್ತಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಎಸ್.ಬಿ.ಕೊಂಗವಾಡ, ಆರ್.ಜಿ.ನಾಗನ್ನವರ ಮತ್ತು ಸಹಾಯಕ ಕೃಷಿ ನಿರ್ದೇಶಕ ಎಮ್.ಆರ್.ನಾಗೂರ, ಬಿ.ವಿ.ದಾಸರ, ಕೃಷಿ ಅಕಾರಿಗಳಾದ ರೇಣುಕಾ, ಲಕ್ಷಿö್ಮÃ ತೇಲಿ, ಆರ್.ಬಿ.ಚಿಕ್ಕೂರ, ಪರಸಪ್ಪ ಹುಲಗಬಾಳಿ, ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕ ಮಹಾಂತೇಶ ಕುಂಟೋಜಿ ಇತರರ ತಂಡ ಕ್ಷೇತ್ರ ಭೇಟಿ ಕೈಗೊಂಡಿತ್ತು.
ಮುಧೋಳ ತಾಲೂಕಿನ ಮುಧೋಳ, ಮಂಟೂರ, ರೂಗಿ, ಲೋಕಾಪುರ, ಪಾಲ್ಕಿಮಾನ್ಯ ಮತ್ತು ಹುನಗುಂದ ತಾಲೂಕಿನ ಸುರುಳಿಕಲ್, ಅಂಬಲಿಕೊಪ್ಪ, ಇಂದವಾರ, ಇಳಕಲ್ ತಾಲೂಕಿನ ಕೆಲೂರ ಗ್ರಾಮಗಳಲ್ಲಿ ರೈತರು ಬೆಳೆದ ಹೆಸರು, ಉದ್ದು, ಸೋಯಾಅವರೆ, ಗೋವಿನಜೋಳ, ಕಬ್ಬು, ತೊಗರಿ, ಸಜ್ಜೆ, ಮೆನಸಿನಕಾಯಿ, ಈರುಳ್ಳಿ, ಪೇರಲ ಇತ್ಯಾದಿ ಬೆಳೆಗಳ ಕ್ಷೇತ್ರ ವಿಕ್ಷಣೆ ಕೈಗೊಂಡರು.
ರೈತರಿಗೆ ಹೊಲದಲ್ಲಿಯೇ ಹತೋಟಿಗೆ ಕ್ರಮಗಳ ಬಗ್ಗೆ ವಿವರಿಸಿದರು. ಈ ವರ್ಷ ಮುಂಗಾರಿನಲ್ಲಿ ಮಳೆಯ ನಂತರ ಉಂಟಾದ ಒಣ ಬರದಿಂದಾಗಿ ಕಬ್ಬು, ತೊಗರಿ ಮತ್ತು ಈರುಳ್ಳಿ ಬೆಳೆಯಲ್ಲಿ ಹೆಚ್ಚಾಗಿ ಗೊಣ್ಣೆಹುಳುವಿನ ಬಾಧೆ ಕಂಡು ಬರುತ್ತಿದೆ. ಅವುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.