ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರಿಂದ ಆರಂ‘ಗೊಳ್ಳಲಿದೆ, ಕಳೆದ ಸಲದಂತೆ ಈ ಸಲವೂ ಜೂನ್ ತಿಂಗಳಲ್ಲಿಯೇ ರಾಜ್ಯ ಸರಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಲಿದೆಯಾ? ಹೌದು, ರಾಜ್ಯ ಸರಕಾರ ಶಾಲೆಗಳಲ್ಲಿನ ಎಲ್ಲ ಹಂತದ ಚಟುಟಿಕೆಗಳನ್ನು ಕೂಡಲೇ ಕೈಗೊಂಡು ಪಾಠ ಮಾಡಲು ರೆಡಿಯಾಗಿ ಎಂದು ಶಿಕ್ಷಕರಿಗೆ ಸೂಚನೆ ನೀಡಿದೆ.
ರಾಜ್ಯದ 31 ಶೈಕ್ಷಣಿಕ ಜಿಲ್ಲೆಗಳ 42,200 ಪ್ರಾಥಮಿಕ ಹಾಗೂ 5,350 ಪ್ರೌಢಶಾಲೆಗಳಲ್ಲಿ ಒಟ್ಟು 60 ಸಾವಿರದಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಸರಕಾರ ಇನ್ನು ತುಂಬುವ ಮನಸ್ಸು ಮಾಡಿಲ್ಲಘಿ. ಹಾಗಾಗಿಯೇ ಕಳೆದ ಸಲದಂತೆ ಈ ಸಲವೂ ಜೂನ್ ತಿಂಗಳಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಿದೆಯಾ ಎಂಬ ಪ್ರಶ್ನೆ ಶಿಕ್ಷಕ ವಲಯದಿಂದಲೇ ಕೇಳಿಬರುತ್ತಿದೆ.
ಈ ಹಿಂದೆ ಸರಕಾರ 15 ಸಾವಿರಕ್ಕೂ ಹೆಚ್ಚು ಜಿಪಿಎಸ್‌ಟಿಆರ್ ಹುದ್ದೆಗೆ ನೇಮಕಾತಿ ನಡೆಸಿತ್ತುಘಿ. ಅದರಲ್ಲಿ 13 ಸಾವಿರ ಶಿಕ್ಷಕರು ದೊರೆತಿದ್ದರು. ಅದರಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ಶಿಕ್ಷಕರ ಕೊರತೆ ಕಡಿಮೆಯಾಗಿತ್ತುಘಿ. ಆದರೂ ಕೂಡ ಈ ವರ್ಷ ಮತ್ತೆ 60 ಸಾವಿರ ಶಿಕ್ಷಕರ ಕೊರತೆ ಎದುರಾಗಿದೆ. ಹಾಗಾಗಿ ಎಲ್ಲದಕ್ಕೂ ಅತಿಥಿ ಶಿಕ್ಷಕರ ನೇಮಕ ಸರಕಾರಕ್ಕೆ ಈಗ ಅನಿವಾರ್ಯವಾಗಿದೆ.
ಕಳೆದ ವರ್ಷ ರಾಜ್ಯ ಸರಕಾರ ಎರಡು ಹಂತದಲ್ಲಿ 44 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿತ್ತು. ನಂತರದ ದಿನಗಳಲ್ಲಿ 13 ಸಾವಿರ ಜಿಪಿಎಸ್‌ಟಿಆರ್ ಶಿಕ್ಷಕರ ನೇಮಕದಿಂದಾಗಿ ಆ ಸಂಖ್ಯೆ 31 ಸಾವಿರಕ್ಕೆ ಇಳಿದಿತ್ತು. ಈ 31 ಸಾವಿರ ಅತಿಥಿ ಶಿಕ್ಷಕರು ಮಾರ್ಚ್ 30ರವರೆಗೂ ಶಾಲೆಗಳಲ್ಲಿ ಕೆಲಸ ಮಾಡಿದ್ದರು. ಆ ನಂತರ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಅದೇ ತೆರನಾಗಿ ಈ ವರ್ಷವೂ ಜೂನ್ ಮೊದಲ ವಾರದಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಸರಕಾರ ಒತ್ತು ಕೊಡಬೇಕು ಎಂದು ಅತಿಥಿ ಶಿಕ್ಷಕರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹೀಗಾಗಿ ಗುಣಮಟ್ಟದ ಶಿಕ್ಷಣ ನೀಡಲು ಕಷ್ಟವಾಗಲಿದೆ. ಹಾಗಾಗಿ ಕೂಡಲೇ ಸಿದ್ದರಾಮಯ್ಯನವರ ಸರಕಾರ ಕಳೆದ ಸಲದಂತೆ ಈ ಸಲವೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಈಗಾಗಲೇ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಸರಕಾರ ಕೂಡ ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದೆ ಎಂಬ ನಂಬಿಕೆಯೂ ಇದೆ ಎಂದು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ನೌಕರರ ಸಂಘದ ಪ್ರ‘ಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಮೆರಿಟ್ ಪದ್ಧತಿ ಕೈಬಿಟ್ಟು ಈ ಹಿಂದೆ ಕೆಲಸ ಮಾಡಿದವರನ್ನೇ ಜೂನ್ ಮೊದಲ ವಾರದಿಂದಲೇ ಅತಿಥಿ ಶಿಕ್ಷಕರ ನೇಮಕವಾಗಬೇಕು. ಸೇವಾ ‘ದ್ರತೆ, ಸೇವಾ ಪ್ರಮಾಣಪತ್ರ ಜತೆಗೆ ಮುಂದಿನ ನೇಮಕಾತಿಯಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದವರಿಗೆ ಪ್ರತಿ ವರ್ಷಕ್ಕೆ ಶೇ.5ರಷ್ಟು ಕೃಪಾಂಕ ನೀಡಬೇಕು. ಈಗಾಗಲೇ ಈ ಕುರಿತು ಶಿಕ್ಷಣ ಸಚಿವರನ್ನು ‘ೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಅವರೂ ಕೂಡಾ ಸ್ಪಂದಿಸಿದ್ದಾರೆ ಎಂದು ಅತಿಥಿ ಶಿಕ್ಷಕರ ಸಂಘದ ಪ್ರ‘ಾನ ಕಾರ್ಯದರ್ಶಿ ಬಸವರಾಜ ಕರಡಿಗುಡ್ಡ ಆಗ್ರಹಿಸಿದ್ದಾರೆ.