ಶಿವಮೊಗ್ಗ:ಈ ನೆಲದ ಗುಣವೇ ಹೀಗಿರಬಹುದು ಮಾರಾಯ್ರೇ. ಇಲ್ಲಿಗೆ ಬರುವ ರಾಜಕಾರಣಿಗಳು ಕವಿಗಳಾಗಿ ಬಿಡುತ್ತಾರೆ. ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ಬಳಿಕ ಹೆಮ್ಮೆಯಿಂದ ಬೀಗುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಗರದಲ್ಲಿಂದು ಸರ್ಕಾರದ 5 ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತಾಡುವಾಗ ಕವಿ ಕೂಡ ಆದರು ಎಂದು ಮಾಹಿತಿ ತಿಳಿದು ಬಂದಿದೆ.
ಅವರ ಕವನನದ ಸಾಲುಗಳು: ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಅದನ್ನು ನೋಡಿ ಅರಳಿದ ಕಮಲ ಉದುರಿ ಹೋಯಿತು, ತೆನೆ ಹೊತ್ತ ಮಹಿಳೆ ತೆನೆ ಎಸೆದುಬಿಟ್ಟಳು ಎಂದು ಹೇಳಿ ಕುಮಾರಣ್ಣ ಕಮಲದ ಹಿಂದೆ ಹೋಗಿದ್ದಾರೆ, ಗ್ಯಾರಂಟಿಗಳಿಂದ ಕರ್ನಾಟಕ ಪ್ರಬುದ್ಧವಾಯಿತುಮ ಕರ್ನಾಟಕ ಸಮೃದ್ಧವಾಯಿತು ಎಂದರು.
ತಮ್ಮ ಸರ್ಕಾರದ ಬಗ್ಗೆ ಮಾತಾಡಿದ ಶಿವಕುಮಾರ್, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 141 ಸೀಟು ಬರುತ್ತವೆ ಅಂದಿದ್ದೆ, ಅದರೆ ಸ್ವಲ್ಪ ಹೆಚ್ಚು ಕಡಿಮೆಯಾಯಿತು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದಿನ ನಾಲ್ಕು ವರ್ಷಗಳವರೆಗೆ ಮುಂದುವರಿಯುತ್ತವೆ ಮತ್ತು ಫಲಾನುಭವಿ ತಾಯಂದಿರ ಆಶೀರ್ವಾದ ತಮ್ಮ ಮೇಲಿದ್ದರೆ ಮತ್ತೊಂದು ಅವಧಿಯ 5 ವರ್ಷಗಳಿಗೂ ಮುಂದುವರಿಯುತ್ತವೆ ಎಂದು ಹೇಳಿದರು.