ತುಮಕೂರು: ಮಾಜಿ ಸಚಿವ ಮಾಧುಸ್ವಾಮಿ ಅವರು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದು ಬೆಳಕಿಗೆ ಬಂದಿದೆ.
ವಿಪಕ್ಷ ಆರ್.ಅಶೋಕ್ ನಮ್ಮ ಮನೆಗೆ ಬಂದದ್ದು ನಿಜ. ಗೋಪಾಲಯ್ಯ ಕೂಡ ಬಂದಿದ್ದರು. ಆದರೆ ನನಗೆ ಯಡಿಯೂರಪ್ಪರ ಮೇಲೆ ಮಾತ್ರ ನನ್ನ ಸಂಕಟ ಇದೆ. ಸುಮ್ಮನೆ ಇದ್ದವನನ್ನು ಟೆಂಪ್ಟ್ ಮಾಡಿ ಟಿಕೆಟ್ ಕೊಡದೇ ಅವಮಾನ ಮಾಡಿದ್ದಾರೆ. ಆರ್.ಅಶೋಕ್ ದಯವಿಟ್ಟು ಪಾರ್ಟಿಬಿಡಬೇಡಿ ಎಂದಿದ್ದಾರೆ. ನಾನು ಅಷ್ಟೊಂದು ಮುಂದುವರಿದಿಲ್ಲ ಅಂದೆ. ಈಗಲೂ ಹೇಳ್ತಿನಿ ಹೊರಗಿನಿಂದ ಬಂದ ಸೋಮಣ್ಣ ಗೆ ಟಿಕೆಟ್ ಕೊಟ್ಟಿದ್ದು ಸರಿಯಲ್ಲ. ಜಿಲ್ಲೆಯನ್ನು ಯಾಕೆ ಈ ರೀತಿ ಅಡ ಇಡುತ್ತಿದ್ದಾರೋ ಗೊತ್ತಿಲ್ಲ’ ಎಂದರು.
‘ ನಾನು ಎರಡು- ಮೂರು ವಿಷಯ ಸ್ಪಷ್ಟಪಡಿಸಬೇಕಾಗಿದ್ದು, ಕಾಂಗ್ರೆಸ್ ನವರು ಅಭ್ಯರ್ಥಿ ಚೇಂಜ್ ಮಾಡಿ ಬಿ ಫಾರ್ಮ್ ಕೊಟ್ಟರು. ಬಿಜೆಪಿಯವರು ಬಿ ಫಾರ್ಮ್ ಕೊಟ್ಟರೂ ನಾನು ಸ್ಪರ್ಧೆ ಮಾಡಲ್ಲ. ಮಾಧ್ಯಮದಲ್ಲಿ ಏಕೆ ಹೀಗೆ ಸುದ್ದಿ ಪ್ರಸಾರ ಆಗುತ್ತಿದೆಯೋ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಇಲ್ಲದ ಕೆಲವರು ಆಹ್ವಾನ ಕೊಟ್ಟಿದ್ದರು. ಕಾಂಗ್ರೆಸ್ ನ ತೀರ್ಮಾನ ತೆಗೆದುಕೊಳ್ಳುವ ಯಾವ ನಾಯಕರೂ ನನಗೆ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಗೆ ಹೋಗ್ತಿನಿ ಅಥವಾ ಹೋಗಲ್ಲ ಅಂತ ಏನನ್ನೂ ಹೇಳಿಲ್ಲ. ನನಗೆ ಕಾಂಗ್ರೆಸ್ ಗೆ ಬರುವಂತೆ ಯಾರೂ ಆಮಿಷನೂ ಒಡ್ಡಿಲ್ಲ’ ಎಂದರು.
‘
ಸೋಮಣ್ಣಗೆ ಹೊರತುಪಡಿಸಿ ಮುದ್ದಹನುಮೇಗೌಡರೂ ಬಿಜೆಪಿಯಲ್ಲಿ ಇದ್ದರೂ ನಾನು ಸಪೋರ್ಟ್ ಮಾಡ್ತಿದ್ದೆ. ಸೋಮಣ್ಣ ಬಂದು ತುಮಕೂರು ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಅನ್ನೋದು ಸುಳ್ಳು. ಇವೆಲ್ಲಾ ಬೊಗಳೆ ಮಾತುಗಳು.ನಸಂಸದರಿಂದ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಅನ್ನೋದು ಸುಳ್ಳು. ಈಗ ನಾನು ಗೊಂದಲ ಜಿಜ್ಞಾಸೆಯಲ್ಲಿ ಇದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಮುಖ್ಯ. ಪ್ರತಿದಿನ ಬ್ಯಾಚ್ ವೈಸ್ ಮೂಲಕ ಸಭೆ ನಡೆಸುತ್ತಿದ್ದೇನೆ. ಅವರ ಅಭಿಪ್ರಾಯ ಸಂಗ್ರಹ ಮಾಡಿ ನಿರ್ಧಾರ ಪ್ರಕಟಿಸುತ್ತೇನೆ’ ಎಂದರು.