ಹೋಳಿ ಹಬ್ಬ ಆಚರಣೆಗೆ ನಿರ್ಧಾರ
ನಿಮ್ಮ ಸುದ್ದಿ ಬಾಗಲಕೋಟೆ
ನಗರದಲ್ಲಿ ಹೋಳಿ ಆಚರಣೆ ಕುರಿತು ಜರುಗಿದ ಸಭೆಯಲ್ಲಿ ಮಾರ್ಚ್ 28 ರಿಂದ ಎಪ್ರಿಲ್ 1 ರವರೆಗೆ ಐದು ದಿವಸಗಳ ಹೋಳಿ ಆಚರಿಸಲು ನಿರ್ಧರಿಸಲಾಗಿದೆ.
ಮಾರ್ಚ್ 27 ರಂದು ಸಂಜೆ 7:00 ಗಂಟೆಗೆ ನಗರದ ವಲ್ಲಭಬಾಯಿ ಚೌಕ್ ದಲ್ಲಿ ಹೋಳಿ ಹಬ್ಬ ಉದ್ಘಾಟನೆಗೊಳ್ಳಲಿದೆ. ಅಂದೇ ರಾತ್ರಿ ಕಿಲ್ಲಾ ಓಣಿಯ ಕಾಮದಹನಕ್ಕೆ ಬೆಂಕಿ ತರಲು ಹೋಗುವುದು 28ರಂದು ಉಳಿದ ಓಣಿಗಳಲ್ಲಿ ಕಾಮದಹನ ಜರಗುವುದು .
ಕರೋನಾ 2 ಅತಿ ಬಹಳ ಜೋರಾಗಿರುವುದರಿಂದ ನೀರಿನಿಂದ ಬಹುಬೇಗನೆ ಕರೋನಾ ವೈರಸ್ ಹರಡಬಹುದು ಎಂಬುದರ ಬಗ್ಗೆ ವೈದ್ಯರು ಹೇಳಿರುವುದರಿಂದ ನಗರದ ಜನತೆಯ ಸುರಕ್ಷತೆ ದೃಷ್ಟಿಯಿಂದ ಈ ವರ್ಷದ ಮಟ್ಟಿಗೆ ದಿನಾಂಕ 29 ರಿಂದ 31ರವರೆಗೆ ಜರಗುವ ಹೋಳಿ ಹಬ್ಬ ಬಣ್ಣದ ಬಂಡಿಗಳನ್ನು ಹಾಗೂ ರೇನ್ ಡ್ಯಾನ್ಸ್ ಹೊರತು ಪಡಿಸಿ ಆಚರಿಸಲು ನಿರ್ಧರಿಸಲಾಗಿದೆ.
ಆದರೆ ಬಣ್ಣದ ಗಾಡಿಗಳು ಹೋಗುವ ಮಾರ್ಗದಲ್ಲಿ ತುರಾಯಿ ಹಲಗೆ ಹಾಗೂ ನಿಶಾನೆಗಳು ಮೆರವಣಿಗೆ ಇರುವುದು.
ದಿನಾಂಕ 27 ರಿಂದ 1ನೇ ಏಪ್ರಿಲ್ ವರೆಗೆ ಸೋಗಿನ ಬಂಡಿಗಳು ಪ್ರದರ್ಶನ ಇರುವುದು ದಿನಾಂಕ 28 ಕಿಲ್ಲಾ ಓಣಿ ದಿನಾಂಕ 29 ಹಳೇಪೇಟೆ ದಿನಾಂಕ 30 ಹೊಸಪೇಟೆ ದಿನಾಂಕ 31 ಜೈನ ಪೇಟೆ ಹಾಗೂ ಎಪ್ರಿಲ್ 1 ವೆಂಕಟಪೇಠ ಪ್ರದರ್ಶನ ಹೋಳಿ ಆಚರಣೆ ಸಮಿತಿಯ ಸಭೆಯಲ್ಲಿ ಎಲ್ಲ ಓಣಿಯ ಹಿರಿಯರು ಬಾಬುದಾರರು ಸಾಹಿತಿಗಳು ವಿದ್ಯಾಗಿರಿಯ ಗೆಳೆಯರ ಬಳಗ ಮಾಧವ ಸೇವಾ ಕೇಂದ್ರ ಹಿಂದೂ ಸಂಘಟನೆಗಳು ಎಲ್ಲ ರಾಜಕೀಯ ಪಕ್ಷದ ಮುಖಂಡರು ಹಿರಿಯರು ಭಾಗವಹಿಸಿದ್ದು ವಿಶೇಷವಾಗಿತ್ತು .
ಸಭೆಯಲ್ಲಿ ಆಚರಣಾ ಸಮಿತಿಯ ಅಧ್ಯಕ್ಷರಾದ ಕಳಕಪ್ಪ ಬಾದವಾಡಗಿ, ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ಸಂಘಟನಾ ಕಾರ್ಯದರ್ಶಿ ಸಂಜೀವ್ ವಾಡಕರ್, ರಾಜು ನಾಯಕ, ನಾಗರಾಜ್ ಹದ್ಲಿ, ನಾರಾಯಣ ದೇಸಾಯಿ, ರವಿ ಕುಮಟಗಿ, ಗುಂಡು ಸಿಂಧೆ, ಸುರೇಶ್ ಕುದುರಿಕಾರ್, ಪಿಎಸ್ ಮಡಿವಾಳರ್, ಶರಣಪ್ಪ ಕೆರೂರ್, ಸತ್ಯನಾರಾಯಣ ಹೇಮಾದ್ರಿ, ಬಸವರಾಜ ಹೊನ್ನಳ್ಳಿ, ಅಶೋಕ್ ಮುತ್ತಿನಮಠ, ವಿಜಯ್ ಸುಲಾಖೆ, ಕಾಂತು ಪತ್ತಾರ್, ಸುರೇಶ್ ಮಜ್ಜಗೆ, ರಾಜು ಸಿಂತ್ರೆ, ಪರಶುರಾಮ ದಾವಣಗೆರೆ, ವೀರೇಶ್ ರೋಣದ, ಈರಣ್ಣ ಮಾಳಗಿ, ರಾಜು ಗೌಳಿ, ಪ್ರವೀಣ್ ಖಾತೆದಾರ, ಸುರೇಶ ಮಾಗಿ, ರಾಜು ಶ್ರೀರಾಮ, ದುರ್ಗಿಶ ಚೋಳಚಗುಡ್ಡ ಸಂಜು ಮಿರಜಕರ . ಊರಿನ ಹಿರಿಯರು ಯುವಕ ಮಿತ್ರರು ಪಾಲ್ಗೊಂಡಿದ್ದರು