ವಿಜಯಪುರ: ಗುಮ್ಮಟನಗರಿಯಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ , 12.17 ಲಕ್ಷ ರೂ. ಸಾವಿರ ಮೌಲ್ಯದ 210 ಗ್ರಾಮ ತೂಕದ ಚಿನ್ನಾಭರಣ, 20 ಗ್ರಾಮ ಬೆಳ್ಳಿ, ಎಲ್‌ಇಡಿ ಟಿವಿ ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಜಮೀರ ಖಾನ್, ಅನ್ವರ ಶೇಖ್, ಆಸೀಫ್ ಹವಾಲ್ದಾರ್, ಸನ್ಮಾನ ಖಾನ ಬಂಧಿತ ಆರೋಪಿಗಳಾಗಿದ್ದು, ಗರದ ಮದೀನಾನಗರದಲ್ಲಿ 4 ಮನೆಗಳ್ಳತನ ಕೃತ್ಯಗಳನ್ನು ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಋಷಿಕೇಶ ಭಗವಾನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಗಾಂಧಿಚೌಕ್ ಹಾಗೂ ಒಂದು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಮತ್ತೊಂದೆಡೆ ನಗರದ ಝಂಡಾ ಕಟ್ಟಾ ಹಳಕೇರಿ ಗಲ್ಲಿಯ ಸಮೀರ ಇನಾಂದಾರನ್ನು ಬಂಧಿಸಿ 2.70 ಲಕ್ಷ ಮೌಲ್ಯದ 50 ಗ್ರಾಂ ಚಿನ್ನ ಜಪ್ತಿಗೈದಿದ್ದಾರೆ.
ನಗರದ ಸದ್ಗುರು ಜ್ಯುವೇಲರಿ ಶಾಪನಲ್ಲಿ 80 ಸಾವಿರ ಮೌಲ್ಯದ 15 ಗ್ರಾಂ ಚಿನ್ನ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಬ್ಯಾಗಳಿಯ ಆರೋಪಿ ಲಲಿತಾ @ ಶಾಂತಾಬಾಯಿ ಗಾಯಕವಾಡ ಬಂಧಿತರು.
ಇರಾನಿ ಕಾಲೋನಿ ನಿವಾಸಿ ಗೌಸಮೋದ್ದಿನ ಮಕಾನದಾರ, ಆಸಾರಗಲ್ಲಿ ನಿವಾಸಿ ಸಾಬೀರ ಬಗಲಿ ಬಂಧಿಸಿ 1.20 ಲಕ್ಷ ಮೌಲ್ಯದ 3 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.