This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsPolitics NewsState News

ಜಿಲ್ಲೆಗೆ ಸಂಬಂಧಿಸಿದ ೧೧ ಅರ್ಜಿಗಳಲ್ಲಿ ನಾಲ್ಕು ಇತ್ಯರ್ಥ

ಜಿಲ್ಲೆಗೆ ಸಂಬಂಧಿಸಿದ ೧೧ ಅರ್ಜಿಗಳಲ್ಲಿ ನಾಲ್ಕು ಇತ್ಯರ್ಥ

ಬಾಗಲಕೋಟೆ:

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಂಬಂಧಿಸಿದ ೧೧ ಅರ್ಜಿಗಳು ಸ್ವೀಕೃತಗೊಂಡಿದ್ದು, ಅದರಲ್ಲಿ ನಾಲ್ಕು ಅರ್ಜಿಗಳನ್ನು ಇತ್ಯರ್ಥಪಡಿಸಲಾಯಿತು.

ಗುರುವಾರ ನಡೆದ ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಬಾಗಲಕೋಟೆಯಿಂದ ವಿಡಿಯೋ ವರ್ಚ್ಯೂಚಲ್ ಮೂಲಕ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಅವರು ಬಾಗಿಯಾಗಿ ಬೆಳಿಗ್ಗೆಯಿಂದ ಸಂಜೆಯವರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಗೆ ಸಂಬAಧಿಸಿದ ಸ್ವೀಕೃತವಾಗಿ ಅರ್ಜಿಗಳನ್ನು ಆಲಿಸಿದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಂಬಂಧಿಸಿದ ಒಟ್ಟು ೧೧ ಅಹವಾಲುಗಳು ಸ್ವೀಕೃತವಾಗಿದ್ದು, ಇತ್ಯರ್ಥಗೊಂಡವುಗಳಲ್ಲಿ ಮುಧೋಳ ತಾಲೂಕಿನ ಇಂಗಳಿ ಗ್ರಾಮದ ರಕ್ಷಿತಾ ಲಕ್ಷö್ಮಣ ಮತ್ತು ಇತರರು ಸೇರಿ ಜಮೀನಿಗೆ ದಾರಿ ಮತ್ತು ಸಿಡಿ ಕಾಮಗಾರಿ ಕ್ರೀಯಾಯೋಜನೆಯಲ್ಲಿ ಸೇರಿಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯನ್ನು ತಕ್ಷಣದಲ್ಲಿ ಇತ್ಯರ್ಥ ಪಡಿಸಲಾಯಿತು.
ಶಿವಯ್ಯ ಅಯ್ಯಪ್ಪ ಬೂದಿಹಾಳ ಮತ್ತು ರಾಮಪ್ಪ ಲೆಂಕಪ್ಪ ದೊಡ್ಡಮನಿ ಅವರು ಬೀಳಗಿ ಮತ್ತು ಬಾದಾಮಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಿವೃತ್ತ ಕಾರ್ಯದರ್ಶಿ, ಎಸ್.ಡಿ.ಎ ಹಾಗೂ ಪಿಡಿಓಗಳಿಗೆ ಹಳೆಯ ಪಿಂಚಣಿ ಮಂಜೂರು ಕುರಿತು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪಂಚಾಯತ ರಾಜ್ ಇಲಾಖೆಯಿಂದ ತಕ್ಷಣ ಇತ್ಯರ್ಥಪಡಿಸಲಾಯಿತು. ಲಕ್ಕಪ್ಪ ಪಾಂಡಪ್ಪ ಬಾರ್ಕಿ ಅವರು ಮುಧೋಳ ತಾಲೂಕಿನ ಮಾಚಕನೂರ ಗ್ರಾಮ ಪಂಚಾಯತ ಕಚೇರಿಯ ಸಿಪಾಯಿ ಅಂತ ನನ್ನ ಹೆಸರಿಗೆ ಅನುಮೋದನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯನ್ನು ಸಹ ಇತ್ಯರ್ಥಪಡಿಸಲಾಯಿತು.

ಉಳಿದ ಬೀಳಗಿ ತಾಲೂಕಿನ ಭುವನೇಶ್ವರಿ ಹಿರೇಮಠ ಅಟಲಜೀ ಜನಸ್ನೇಹಿ ಕೇಂದ್ರದಲ್ಲಿ ಬೀಳಗಿ ಕಸಬಾ ಹೆಚ್ಚುವರಿ ಆಪರೇಟರ್ ಆಗಿ ನೇಮಿಸಲು, ಬಾದಾಮಿ ತಾಲೂಕಿನ ರುಕ್ಮಿಣಿ ಚೀಲವೇರಿ ಅವರು ಎಜೆಎಸ್‌ಕೆ ಕೇಂದ್ರದಲ್ಲಿ ಹೆಚ್ಚುವರಿ ಆಪರೇಟರ್ ಆಗಿ ತೆಗೆದುಕೊಳ್ಳುವ ಕುರಿತು, ರಬಕವಿ ಬನಹಟ್ಟಿಯ ಶೈನಾಝ ಪೆಂಡಾರಿ ಮತ್ತು ಶೋಭಾ ಕಲಾಲ ಅವರು ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡುವ ಬಗ್ಗೆ, ಇಲಕಲ್ಲಿನ ಶಂಶದ್‌ಬೆಗA ತಹಶೀಲ್ದಾರ ನಿವೇಶನ ಮಂಜೂರು ಮಾಡುವ ಕುರಿತು, ಬಾದಾಮಿಯ ರಾಮಚಂದ್ರ ಯಲ್ಲಪ್ಪ ಸಾರ್ವಜನಿಕ ರಸ್ತೆ ಮರ್ಧಯದಲ್ಲಿ ಮನೆ ಕಟ್ಟಿದ್ದು, ತೆರವುಗೊಳಿಸುವ ಕುರಿತು ಒಟ್ಟು ೭ ಅರ್ಜಿಗಳನ್ನು ತುರ್ತಾಗಿ ಇತ್ಯರ್ಥಪಡಿಸಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜನತಾ ದರ್ಶನದ ವಿಡಿಯೋ ವರ್ಚ್ಯೂಚಲ್ ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.

*ಆರ್.ಎ.ಎಫ್‌ದಿಂದ ನಗರದಲ್ಲಿ ಫ್ಲ್ಯಾಗ್ ಮಾರ್ಚ*
—————————————
ಬಾಗಲಕೋಟೆ:  ನಗರದಲ್ಲಿ ಶಹರದ ಮತೀಯ ಅತೀ ಸೂಕ್ಷö್ಮ ಪ್ರದೇಶಗಳಲ್ಲಿ ಶಹರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಹಾಗೂ ೯೭ ಬಟಾಲಿನ್ ರ‍್ಯಾಪಿಡ್ ಆಕ್ಷನ್ ಫೋರ್ಸ ಭದ್ರಾವತಿ ಇವರಿಂದ ಗುರುವಾರ ಫ್ಲಾö್ಯಗ್ ಮಾರ್ಚ ನಡೆಸಲಾಯಿತು.

ಫ್ಲ್ಯಾಗ್ ಮಾರ್ಚ ಶಹರದ ವಲ್ಲಾಭಾಯಿ ಚೌಕ್‌ನಿಂದ ಪ್ರಾರಂಭವಾಗಿ ಮತೀಯ ಅತೀ ಸೂಕ್ಷö್ಮ ಪ್ರದೇಶಗಳಲ್ಲಿ ಫ್ಲಾö್ಯಗ್ ಮಾರ್ಚ ಕೈಗೊಂಡು ಬಸವೇಶ್ವರ ಸರ್ಕಲ್‌ಗೆ ಮುಕ್ತಾಯಗೊಂಡಿತು.

ಫ್ಲಾö್ಯಗ್ ಮಾರ್ಚನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ ಗುರುನಾಥ ಚವ್ಹಾನ, ಪಿ.ಎಸ್.ಐ ಕಲ್ಮೇಶ ಬನ್ನೂರ, ಅಸಿಸ್ಟಂಟ್ ಕಮಾಂಡರ ನವೀನಕುಮಾರ, ಇನ್ಸಪೆಕ್ಟರ ಶಶಿಧರ ಎಂ.ಎನ್, ಅಸಿಸ್ಟಂಟ ಸಬ್ ಇನ್ಸಪೆಕ್ಟರ ಶಾಂತಪ್ಪ ನಾಯ್ಕ ಹಾಗೂ ೯೭ ಬಟಾಲಿನ್ ರ‍್ಯಾಪಿಡ್ ಆಕ್ಷನ್ ಫೋರ್ಸ ಭದ್ರಾವತಿ ಹಾಗೂ ೧೦೦ ಜನ ಸಿಬ್ಬಂದಿಗಳೊAದಿಗೆ ಆಧುನಿಕ ಶಸ್ತಾçಸ್ತçಗಳಾದ ಮಲ್ಟಿ ಬ್ಯಾರಲ್ ಲಾಂಚರ್, ಪಂಪ್ ಆಕ್ಷನ್‌ಗನ್, ಎ.ಕೆ-೪೭, ಗ್ಯಾಸ್ ಗನ್, ಆಂಟಿ ರೈಡ್‌ಗನ್, ಇನ್ಸಾಸ್ ನಂತಹ ವಿವಿಧ ಆಧುನಿಕ ಪಥ ಸಂಚಲ ನಡೆಸಲಾಯಿತು.

Nimma Suddi
";