ಬೆಂಗಳೂರು: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ಜಿಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರ ಹಾರ್ಟ್ ಆಪರೇಶನ್ ಬಗ್ಗೆ ಹಗುರವಾಗಿ ಮಾತಾಡಿದ್ದು ಖುದ್ದು ಅವರ ಪಕ್ಷದ ನಾಯಕರನ್ನೇ ಕೆರಳಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು; ಯಾವುದೇ ಪಕ್ಷದವರಾಗಿಲಿ, ರಾಜಕಾರಣದಲ್ಲಿ ಯಾವತ್ತೂ ವೈಯಕ್ತಿಕ ಟೀಕೆಗಳನ್ನು ಮಾಡಬಾರದು ಎಂದು ಹೇಳಿದರು.
ಮಳವಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡುವಾಗ ಬಂಡಿಸಿದ್ದೇಗೌಡ, ಚುನಾವಣಾ ಸಮಯದಲ್ಲೇ ಕುಮಾರಸ್ವಾಮಿಯವರ ಆರೋಗ್ಯ ಯಾಕೆ ಹದಗೆಡುತ್ತದೆ? ಹೃದಯ ಶಸ್ತ್ರಚಿಕಿತ್ಸೆಗೊಳಗಾದವರು ಅದು ಹೇಗೆ ಆಪರೇಶನ್ ಆದ ಕೇವಲ ಮೂರು ದಿನಗಳ ನಂತರ ಎದ್ದು ಓಡಾಡುವುದು ಸಾಧ್ಯ ಎಂದು ಪ್ರಶ್ನಿಸಿದ್ದರು.
ಮಾತಾಡುವಾಗ ನಮ್ಮ ನಾಲಗೆ ಮೇಲೆ ಹಿಡಿತವಿರಬೇಕು, ಬೇರೆಯವರು ಬೇರೆ ಬೇರೆ ವಿಚಾರಗಳ ಬಗ್ಗೆ ಮಾತಾಡುತ್ತಾರೆ, ಅದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಏನೇನೋ ಮಾತಾಡುವುದು ಸರಿಯಲ್ಲ, ಅದು ಬೇರೆ ಪಕ್ಷದ ನಾಯಕನ ಅರೋಗ್ಯದ ವಿಷಯವಾಗಿರಬಹುದು, ಅಥವಾ ಮತ್ತೇನೋ ಖಾಸಗಿ ವಿಷಯ ಆಗಿರಬಹುದು, ಅದನ್ನು ಸಾರ್ವಜನಿಕವಾಗಿ ಚರ್ಚಿಸುವ ಪ್ರಯತ್ನಕ್ಕೆ ಯಾವತ್ತೂ ಕೈಹಾಕಬಾರದೆಂದು ಸೂಚಿಸಿದರು.