This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಸಿಎಂ ಕ್ಯಾಬಿನೆಟ್ ನಿರ್ಧಾರಕ್ಕೆ ನಾವು ಬದ್ದ: ಜಿ ಪರಮೇಶ್ವರ್​​

ಸಿಎಂ ಕ್ಯಾಬಿನೆಟ್ ನಿರ್ಧಾರಕ್ಕೆ ನಾವು ಬದ್ದ: ಜಿ ಪರಮೇಶ್ವರ್​​

ಬೆಂಗಳೂರು: ಖಾಸಗಿ ಸಂಸ್ಥೆಯವರು ನೀಡಿರುವ ಎಫ್​ಎಸ್​ಎಲ್ ವರದಿ ಗಣನೆಗೆ ತೆಗೆದುಕೊಳ್ಳಲ್ಲ ಎಂದು ಗೃಹ ಸಚಿವೆ ಜಿ. ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಫ್​ಎಸ್​ಎಲ್​, ಗೃಹ ಇಲಾಖೆಯ ಫಾರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಧೃಡವಾಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಎಫ್​ಎಸ್​ಎಲ್​ ವರದಿ ಘಟನೆ ನಡೆದ ಮರುದಿನವೆ ಬಂದಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಜಿ. ಪರಮೇಶ್ವರ್​, ಅವರು ಯಾವ ಅಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದು. ನಮ್ಮ ವರದಿ ಬಂದ ಮೇಲೆ ಹೇಳುತ್ತೇನೆ. ಖಾಸಗಿಯವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ? ಅವರಿಗೆ ಎನ್​​ಒಸಿ ಯಾರು ಕೊಟ್ಟಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇನೆ ಎಂದು ವಿವರಿಸಿದರು.

ಜಾತಿಗಣತಿ ವರದಿ ವಿಚಾರವಾಗಿ ಮಾತನಾಡಿದ ಅವರು. ಮುಖ್ಯಮಂತ್ರಿಗಳೇ ಹೇಳಿದ್ದಾರೆ, ಸಂಪುಟ ಸಭೆಯಲ್ಲಿಟ್ಟು ನಿರ್ಧಾರ ಮಾಡಲಾಗುತ್ತದೆ. ವಿರೋಧ ಮಾಡುವುದು, ಪರವಾಗಿ ಮಾತಾಡುವುದುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದಿದ್ದೇ. ವರದಿ ತರಿಸಿಕೊಂಡ‌ಮೇಲೆ ಲಾಜಿಕ್ ಎಂಡ ಆಗಬೇಕು. ಇಲ್ಲ ರಿಜೆಕ್ಟ್ ಮಾಡಬೇಕು. ಸಿಎಂ ಕ್ಯಾಬಿನೆಟ್ ನಿರ್ಧಾರಕ್ಕೆ ನಾವು ಬದ್ದ ಎಂದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್​ ವಿಚಾರವಾಗಿ ಮಾತನಾಡಿದ ಅವರು, ಸಭೆ ಮಾಡಿ ಸದ್ಯಕ್ಕೆ ಎಲ್ಲ ಹೇಳಿದ್ದು, ಕೆಲ ವಿಚಾರ ಹಂಚಿಕೊಳ್ಳಲು ಆಗಲ್ಲ. ಎನ್​ಐಎ ಈಗಾಗಲೆ ತನಿಖೆ ಆರಂಭಿಸಿದ್ದಾರೆ, ಎನ್​ಎಸ್​​ಜಿ ಕೂಡ ತನಿಖೆ ನಡೆಸುತ್ತಿದೆ. ಇದರ ಹಿಂದೆ ಯಾರಿದ್ದಾರೆ, ವ್ಯಕ್ತಿ ಇದ್ದಾರಾ, ಸಂಘಟನೆ ಇದೆಯಾ.? ಎಲ್ಲವನ್ನೂ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

Nimma Suddi
";