ಬಾಗಲಕೋಟೆ: ಅಲೆಯಿಂದಲೇ ಖಾತೆ ಆರಂಭಿಸಿದ ಬಾಗಲಕೋಟೆಯ ಸಂಸದ ಪಿ.ಸಿ.ಗದ್ದಿಗೌಡರ, ಮೂರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸತತ ಐದು ಸಲ ಗೆದ್ದ ಮೊದಲ ಸಂಸದ ಎಂಬ ಹೆಗ್ಗಳಿಗೆ ಮೊದಲನೇ ದಾಖಲೆಯಾದರೆ, ಎರಡು ಸಲ ರಡ್ಡಿ ಕಾಂಗ್ರೆಸ್ ಅ‘್ಯರ್ಥಿಗಳ ವಿರುದ್ಧ, ಇನ್ನೂ ಎರಡು ಎರಡು ಸಲ ಪಂಚಮಸಾಲಿ ಮಹಿಳಾ ಅ‘್ಯರ್ಥಿಗಳ ವಿರುದ್ಧ ಗೆದ್ದು ಅಲ್ಲಿಯೂ ಹೊಸದ ದಾಖಲೆ ಬರೆದಿದ್ದಾರೆ.
ಈ ಹಿಂದೆ ಸುನಗದ ಎಸ್.ಬಿ.ಪಾಟೀಲರು ಸತತ ನಾಲ್ಕು ಸಲ ಗೆದಿದ್ದರು. ಗದ್ದಿಗೌಡರ 2019ರಲ್ಲಿ ಗೆಲ್ಲುವ ಮೂಲಕ ಪಾಟೀಲರನ್ನು ಸರಿಗಟ್ಟಿದ್ದರು. ಈಗ ಐದನೇ ಸಲ ಅತ್ಯಕ ಮತಗಳ ಅಂತರದಿಂದ ಗೆಲ್ಲುವ ಮೂಲಕ ತಮಗೆ ಯಾರು ಸರಿಸಾಟಿ ಇಲ್ಲ ಎಂಬುದನ್ನು ಸಾಬೀತು ಪಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
1972, 1967, 1971 ಹಾಗೂ 1977ರಲ್ಲಿ ಸುನಗದ ಪಾಟೀಲರು ಕಾಂಗ್ರೆಸ್‌ನಿಂದ ಗೆಲುವು ಸಾಸಿದ್ದರು. ಅದಾದ ನಂತರ ಯಾರು ಅವರ ಸಲ ಗೆಲುವು ದಾಖಲಿಸಲಿಲ್ಲ. ಆದರೆ 2004ರಲ್ಲಿ ಗದ್ದಿಗೌಡರ ಸ್ಪರ್‘ೆಯ ಮೂಲಕ ಮೊದಲ ಗೆಲುವು ದಾಖಲಿಸಿದ್ದು ಅಲ್ಲದೇ, 2009, 2014 ಹಾಗೂ 2019ರಲ್ಲಿ ಮತ್ತು ಈಗ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್ ಹಾಗೂ ಆ ಪಕ್ಷದ ಎಸ್.ಬಿ.ಪಾಟೀಲರ ದಾಖಲೆಯನ್ನು ಉಡಿಸ್ ಮಾಡಿದ್ದು, ಬಿಜೆಪಿ ಹಾಗೂ ಗದ್ದಿಗೌಡರ.
2004ರಲ್ಲಿ ಮಾಜಿ ಪ್ರ‘ಾನಿ ಅಟಲ್ ಬಿಹಾರಿ ವಾಜಪೇಯಿ ಅಲೆಯಲ್ಲಿ ಗೆದಿದ್ದ ಗದ್ದಿಗೌಡರ, 2009ರಲ್ಲಿ ರಾಜ್ಯದಲ್ಲಿನ ಯಡಿಯೂರಪ್ಪ ಅಲೆಯಲ್ಲಿ ಜಯದ ನಗೆ ಬೀರಿದ್ದರು. ನಂತರ 2014, 2019 ಹಾಗೂ 2024ರಲ್ಲಿ ಮೋದಿ ಅಲೆಯಲ್ಲಿಯೇ ಗೆದ್ದು ಕೊನೆಗೂ ಇನ್ನೊಬ್ಬರ ಅಲೆಯಲ್ಲಿಯೇ ತಮ್ಮ ಗೆಲುವು ಎಂಬುದನ್ನು ಸಾಬೀತುಪಡಿಸಿದ್ದಾರೆ ಗದ್ದಿಗೌಡರ.
2004ರಲ್ಲಿ ಆರ್.ಎಸ್.ಪಾಟೀಲ ವಿರುದ್ಧಘಿ, 2009ರಲ್ಲಿ ಜೆ.ಟಿ.ಪಾಟೀಲ ವಿರುದ್ಧ ಗದ್ದಿಗೌಡರ ಗೆದ್ದಿದ್ದರು. ಈ ಇಬ್ಬರು ರಡ್ಡಿ ನಾಯಕರು. ಇನ್ನೂ 2019ರಲ್ಲಿ ವೀಣಾ ಕಾಶಪ್ಪನವರ, 2024ರಲ್ಲಿ ಸಂಯುಕ್ತಾ ಪಾಟೀಲರ ವಿರುದ್ಧ ಗೆಲ್ಲುವ ಮೂಲಕ ಪಂಚಮಸಾಲಿಗಳಿಗೂ ನಾನು ಮಣಿಯಲ್ಲ ಎಂದು ತೋರಿಸಿದ್ದಾರೆ.