ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆ ಕುರಿತಂತೆ ಸರಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಸಿಪಿಐ ಕೆ.ಹೊಸಕೇರಪ್ಪ ತಿಳಿಸಿದರು.
ಜಿಲ್ಲೆಯ ಅಮೀನಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ಗಣೇಶೋತ್ಸವ ಆಚರಣೆಯ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರ ಗಣೇಶೋತ್ಸವ ಆಚರಣೆಗೆ ಕುರಿತಂತೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು ಅದರಂತೆ ನಾವೆಲ್ಲ ಗಣೇಶ ಹಬ್ಬ ಆಚರಣೆಗೆ ಮುಂದಾಗಬೇಕು. ಒಂದು ವೇಳೆ ಸೆ.೫ರಂದು ನಡೆಯುವ ಸಿಎಂ ನೇತೃತ್ವದ ಸಭೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆಯೇ ಅದಕ್ಕೆ ನಾವೆಲ್ಲ ಬದ್ಧರಾಗಿರಬೇಕು ಎಂದು ತಿಳಿಸಿದರು.
ಹಬ್ಬಗಳು ಶಾಂತಿ, ಸಹಬಾಳ್ವೆಯ ಪ್ರತೀಕವಾಗಿರಬೇಕು. ಸರಕಾರ ಕೋವಿಡ್ ತಡೆಗಾಗಿ ನಾನಾ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ಸರಕಾರ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರೂ ಸಹಕರಿಸಿದಾಗ ಮಾತ್ರ ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ತಡೆಯಲು ಸಾಧ್ಯ ಎಂದರು.
ಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ, ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ, ಪಪಂ ಮುಖ್ಯಾಧಿಕಾರಿಗಳಾದ ಮಹೇಶ ನಿಡಶೇಶಿ, ಸುರೇಶ ಪಾಟೀಲ, ಹೆಸ್ಕಾಂನ ರಮೇಶ ನಾಯಕ, ಮುಜಾವರ, ಅಜ್ಮೀರ ಮುಲ್ಲಾ, ನಾಗೇಶ ಗಂಜಿಹಾಳ, ವೀರಣ್ಣ ಬಡಿಗೇರ ಮಾತನಾಡಿ, ಮನೆಯಲ್ಲೂ ಸಹ ಪ್ಲಾಸ್ಟರ್ ಆಪ್ ಪ್ಯಾರಿಸ್ ಗಣೇಶ ಪ್ರತಿಷ್ಠಾಪಿಸದೆ ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪನೆ ಮೂಲಕ ಸ್ಥಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡಿ. ಮೂರನೆ ಅಲೆ ನಿಯಂತ್ರಣ ಸರಕಾರದ ಕೈಯಲ್ಲಿಲ್ಲ. ಬದಲಾಗಿ ಎಲ್ಲರ ಸಹಕಾರದೊಂದಿಗೆ ಕೊರೊನಾ ಹೊಡೆದೋಡಿಸೋಣ ಎಂದು ತಿಳಿಸಿದರು.
ಪಿಡಿಒಗಳಾದ ಎಂ.ಎ.ದಖನಿ, ಎಸ್.ಬಿ.ಚಂದ್ರಗಿರಿ, ಗೌರಮ್ಮ ಶಿರೂರ, ಎಸ್.ಸಿ.ಹಿರೇಮಠ, ಬಸವರಾಜ ರೇವಡಿ, ಎಸ್.ಬಿ.ಅಕ್ಕಿ, ಎಸ್.ಜಿ.ಹಿರೇಮಠ, ರವೀಂದ್ರ ದೊಡಮನಿ, ನಾಗರತ್ನ ಚಲವಾದಿ, ಮಂಜು ಪೂಜಾರಿ, ಗ್ರಾಪಂ ಸದಸ್ಯ ಹುಲಗಪ್ಪ ಕುರಿ, ಶಫೀಕ ಇಟಗಿ, ಹನಮಂತ ತೊಟ್ಲಪ್ಪನವರ, ಮಲ್ಲೇಶ ನಿಡಗುಂದಿ, ಶಿವಪ್ಪ ಮರಾಠಾ, ಆನಂದ ಮೊಕಾಶಿ, ಅಮರೇಶ ಮಡ್ಡಿಕಟ್ಟಿ, ಪೀರಾ ಖಾದ್ರಿ, ಗಣೇಶ ಗುಡ್ಡದ, ದುರಗಪ್ಪ ಮಾದರ ಇತರರು ಇದ್ದರು.