This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಲಾಭದಲ್ಲಿ ಗಾಯತ್ರಿ ಪತ್ತಿನ ಸಹಕಾರಿ ಸಂಘ

ಲಾಭದಲ್ಲಿ ಗಾಯತ್ರಿ ಪತ್ತಿನ ಸಹಕಾರಿ ಸಂಘ

ಬಾಗಲಕೋಟೆ

ಜಿಲ್ಲೆಯ ಸೂಳೇಭಾವಿಯ  ಗಾಯತ್ರಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ 1 ಕೋಟಿ 68 ಲಕ್ಷ ಲಾಭ ಗಳಿಸಿದೆ ಎಂದು ಪತ್ತಿನ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

ಸಂಘದ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1996 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಕೇವಲ 686 ಜನ ಸದಸ್ಯರನ್ನೊಳಗೊಂಡ ಶೇರು ಹಣ ರೂ 3,43,000/- ಠೇವು ರೂ. 42,290/- ಪ್ರಾರಂಭವಾದ ಈ ಸಂಸ್ಥೆ ಇಂದಿಗೆ 27 ವರ್ಷಗಳನ್ನು ಪೂರ್ಣಗೊಳಿಸಿದೆ ಎಂದರು.

31/03/2023 ಕ್ಕೆ 13,061 ಜನ ಸದಸ್ಯರನ್ನೊಳಗೊಂಡು ಶೇರು ಹಣ ರೂ 7 ಕೋಟಿ 61 ಲಕ್ಷದಷ್ಟಿರುತ್ತದೆ. ನಿಲಗಳು 7 ಕೋಟಿ 88 ಲಕ್ಷದಷ್ಟಿರುತ್ತದೆ. ಠೇವು ಹಣ ರೂ 122 ಕೋಟಿ 38 ಲಕ್ಷದಷ್ಟಿರುತ್ತದೆ. ಒಟ್ಟು ದುಡಿಯುವ ಬಂಡವಾಳ ರೂ 137ಕೋಟ 68 ಲಕ್ಷದಷ್ಟಿರುತ್ತದೆ, ಲಾಭ 01 ಕೋಟಿ 68 ಲಕ್ಷದಷ್ಟಿರುತ್ತದೆ ಎಂದು ಹೇಳಿದರು.

ಇದಲ್ಲದೆ ಸಂಘವು ಕೇಂದ್ರ ಕಛೇರಿ ಹೊರತು ಪಡಿಸಿ 25 ಶಾಖೆಗಳನ್ನು ಹೊಂದಿದೆ. ಎಲ್ಲಾ ಶಾಖೆಗಳು ಗಣಕಿಕೃತ ಒಳಗೊಂಡಿದೆ. ಸಂಘವು ಕೋರ ಬ್ಯಾಂಕಿಂಗ ವ್ಯವಸ್ಥೆಯನ್ನುಒಳಗೊಂಡಿರುವುದರಿಂದ ಸದಸ್ಯರು ಯಾವುದೇ ಶಾಖೆಯಲ್ಲಿ ವ್ಯವಹರಿಸಬಹುದು. ಸದಸ್ಯರು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಇದ್ದಲ್ಲಿ ಮೊಬೈಲ್ ಆಪ್ ಸೌಲಭ್ಯವನ್ನು ಪಡೆಯಬಹುದು. ಸದಸ್ಯರು ಅಥವಾ ಸದಸ್ಯಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪಿಯುಸಿ ನಂತರದ ಮಕ್ಕಳಿಗೆ ವಿಜ್ಞಾನ ವಿಭಾಗದಲ್ಲಿ ಶೇ 70 ಕ್ಕಿಂತ ಹೆಚ್ಚಿನ ಅಂಕ ಗಳಿಸಿದವರಿಗೆ ರೂ 5000/- 70
ವಿಧ್ಯಾರ್ಥಿಆಗೆ ಇತರೆ ವಿಭಾಗದಲ್ಲಿ ಶೇ 80 ಕ್ಕಿಂತ ಹೆಚ್ಚಿನ ಅಂಕ ಗಳಿಸಿದವರಿಗೆ ರೂ 3000/- 12 ವಿಧ್ಯಾರ್ಥಿಗಳಿಗೆ
ನೀಡಲಾಗುವದು. ಸಂಘದ ಸದಸ್ಯರು ಮರಣ ಹೊಂದಿದವರಿಗೆ ರೂ 5000+2000 ಒಟ್ಟು ರೂ 7,000/- ಮರಣೋತ್ತರ ಹಣ ನೀಡಲಾಗುವದು. ಕ್ಯೂ ಆರ್ ಕೋಡ್ ಸೌಲಭ್ಯವಿರುತ್ತದೆ. ಆಯ್ದ ಶಾಖೆಗಳಲ್ಲಿ ಇ ಸ್ಟಾಂಪಿಂಗ ಸೌಲಭ್ಯ ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.

ಸುಮಾರು 2.5 ಕೋಟಿಗಳಲ್ಲಿ ಸಂಘದ ಕಟ್ಟಡವು ಸಹಿತ ದಿನಾಂಕ 29/04/2022 ರಂದು ನಾಡಿನ ಹರ ಗುರು ಚರಮೂರ್ತಿಗಳಿಂದ ವಿಜೃಂಭನೆಯಿಂದ ಉದ್ಘಾಟನೆಗೊಂಡಿತು. ಅಮಿನಗಡ ಮತ್ತು ಬಾಗಲಕೋಟೆ ಶಾಖೆಯಲ್ಲಿ ಜಾಗೆ
ಖರೀದಿಸಿಲಾಗಿದೆ. ಮತ್ತು ಇಳಕಲ್ ದಲ್ಲಿ ಸ್ವಂತ ಕಟ್ಟಡ ಖರಿದಿಸಲಾಗಿದೆ. ಸಂಘವು ತನ್ನ ಕಾರ್ಯ ವ್ಯಾಪ್ತಿಯನ್ನು ಬಾಗಲಕೋಟೆ, ವಿಜಯಪೂರ, ಕೊಪ್ಪಳ, ಗದಗ ಜಿಲ್ಲೆಯ ವರೆಗೂ ವಿಸ್ತರಿಸಲಿಸದೆ ಎಂದು ಹೇಳಿದರು.

ಎಸ್.ಆರ್.ಜನಿವಾರದ, ಆರ್.ಜೆ.ರಾಮದುರ್ಗ, ಎಲ್.ಎನ್.ಕಣಗಿ, ಎಸ್.ಆರ್.ಭಾಪ್ರಿ, ಎಚ್.ಆರ್.ವಡ್ಡೋಡಗಿ, ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ, ನಿರ್ದೇಶಕರು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಇದ್ದರು.

";