This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಶಾಲೆಗಳಿಗೆ ಇ-ಮೇಲ್ ಬೆದರಿಕೆಗೆ ಮಾಹಿತಿ ನೀಡಲು ನಿರಾಕರಿಸಿದ ಜಿ-ಮೇಲ್ ಕಂಪನಿ

ಶಾಲೆಗಳಿಗೆ ಇ-ಮೇಲ್ ಬೆದರಿಕೆಗೆ ಮಾಹಿತಿ ನೀಡಲು ನಿರಾಕರಿಸಿದ ಜಿ-ಮೇಲ್ ಕಂಪನಿ

ಬೆಂಗಳೂರು: ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರಿಗೆ ಹಿನ್ನಡೆಯಾಗಿದ್ದು, ಇ-ಮೇಲ್ ಬೆದರಿಕೆ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಜಿ-ಮೇಲ್ ಕಂಪನಿ ನಿರಾಕರಿಸಿದೆ.

ಜಿ-ಮೇಲ್ ಕಂಪನಿಗೆ ಮಾಹಿತಿ ನೀಡಲು ಇಂಟರ್​ ಪೋಲ್ ಸೂಚನೆ ನೀಡಿತ್ತು. ಆದರೆ ಇಂಟರ್ ಪೋಲ್ ನೋಟಿಸ್​ಗೂ ಕ್ಯಾರೇ ಎನ್ನದೆ ಜಿ-ಮೇಲ್ ಕಂಪನಿ ಮಾಹಿತಿ ನೀಡಲು ನಿರಾಕರಿಸಿದ್ದು, ಬಳಕೆದಾರರ ಮಾಹಿತಿ ಗೌಪ್ಯವಾಗಿಡುವುದು ನಮ್ಮ ಕರ್ತವ್ಯ. ಮಾಹಿತಿ ನೀಡಲ್ಲ ಎಂದಿದೆ. ಇದರಿಂದ ಬಾಂಬ್ ಬೆದರಿಕೆ ಪ್ರಕರಣ ಸಂಬಂಧ ತನಿಖೆ ನಡೆಸಲು ಪೊಲೀಸರಿಗೆ ಸಮಸ್ಯೆ ಎದುರಾಗಿದೆ.

ಡಿಸೆಂಬರ್​ನಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ನಗರ ಹಾಗೂ ಗ್ರಾಮಾಂತರ ಸೇರಿ ಒಟ್ಟು 70 ಶಾಲೆಗಳಿಗೆ ಕಿಡಿಗೇಡಿಗಳೂ ಬಾಂಬ್ ಬೆದರಿಕೆ ಹಾಕಿ ಇ-ಮೇಲ್ ಮಾಡಿದ್ದರು. ಈ ಸಂಬಂಧ ಆಯಾ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

ಈ ಸಂಬಂಧ ವಿಪಿಎನ್ ಹಾಗೂ ಐಪಿ ಅಡ್ರೆಸ್ ಪತ್ತೆ ಮಾಡಿದ್ದ ನಗರ ಪೊಲೀಸರು ಈ ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಇಂಟರ್ ಪೋಲ್ ಗೆ ಪತ್ರ ಬರೆದಿದ್ದರು.ಪೊಲೀಸರ ಪತ್ರಕ್ಕೆ ಸ್ಪಂದಿಸಿದ ಇಂಟರ್ ಪೋಲ್, ಜಿ-ಮೇಲ್ ಕಂಪನಿಗೆ ಮಾಹಿತಿ ನೀಡಲು ನೋಟಿಸ್ ನೀಡಿತ್ತು. ಆದರೆ ಇಂಟರ್ ಪೋಲ್ ನೋಟಿಸ್​ಗೂ ಕ್ಯಾರೇ ಎನ್ನದ ಜಿ-ಮೇಲ್ ಕಂಪನಿ ಮಾಹಿತಿ ನೀಡಲು ನಿರಾಕರಿಸಿದೆ. 2022ರಲ್ಲಿ ಕೂಡ ಮಾಹಿತಿ ನೀಡುವಂತೆ ಇಂಟರ್ ಪೋಲ್ ನೋಟಿಸ್ ನೀಡಿತ್ತು. ಆಗ ಕೂಡ ಮಾಹಿತಿ ನೀಡಲು ನಿರಾಕರಿಸಿತ್ತು.

Nimma Suddi
";