This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsInternational NewsLocal NewsNational NewsState News

Gmail Tips: ಜಿಮೇಲ್‌ ಸ್ಟೋರೇಜ್‌ ಫುಲ್‌ ಆಯ್ತಾ, ಅನಗತ್ಯ ಇಮೇಲ್‌ ಅಳಿಸಿ ಸ್ಥಳಾವಕಾಶ ಹೆಚ್ಚಿಸಿಕೊಳ್ಳಲು ಇಲ್ಲಿದೆ 5 ಟಿಪ್ಸ್‌

Gmail Tips: ಜಿಮೇಲ್‌ ಸ್ಟೋರೇಜ್‌ ಫುಲ್‌ ಆಯ್ತಾ, ಅನಗತ್ಯ ಇಮೇಲ್‌ ಅಳಿಸಿ ಸ್ಥಳಾವಕಾಶ ಹೆಚ್ಚಿಸಿಕೊಳ್ಳಲು ಇಲ್ಲಿದೆ 5 ಟಿಪ್ಸ್‌

How to free up storage in Gmail: ಕಳೆದ ಹಲವು ವರ್ಷಗಳಿಂದ ಆರಾಮವಾಗಿ ಬಳಸುತ್ತಿದ್ದ ಜಿಮೇಲ್‌ ಖಾತೆಯಲ್ಲಿ ಈಗ ಬಹುತೇಕರಿಗೆ ಸ್ಥಳಾವಕಾಶದ ತೊಂದರೆ ಕಾಡಬಹುದು. ನಿಮ್ಮ ಸ್ಟೋರೇಜ್‌ ಫುಲ್‌ ಆಗಿದೆ, ಸ್ಟೋರೇಜ್‌ ಖರೀದಿಸಿಕೊಳ್ಳಿ, ತಿಂಗಳಿಗೆ 130 ರೂಪಾಯಿ ಪಾವತಿಸಿ ಇತ್ಯಾದಿ ಸಂದೇಶಗಳನ್ನು ನೋಡಿದಾಗ ಅಯ್ಯೋ ಮುಂದೇನು ಮಾಡೋದಪ್ಪ ಎಂದು ಯೋಚಿಸುತ್ತಿರಬಹುದು. ಜಿಮೇಲ್‌ನಲ್ಲಿರುವ ಇಮೇಲ್‌ಗಳಲ್ಲಿ ಯಾವುದನ್ನು ಉಳಿಸೋದು, ಯಾವುದನ್ನು ಡಿಲೀಟ್‌ ಮಾಡೋದು ಎಂಬ ಸಂದೇಹ ಕಾಡಬಹುದು. ಕಳೆದ ಹಲವು ವರ್ಷಗಳಲ್ಲಿ ಹಲವು ಅನಗತ್ಯ ಇಮೇಲ್‌ಗಳು ನಿಮ್ಮ ಇನ್‌ಬಾಕ್ಸ್‌ನಲ್ಲಿ ತುಂಬಿರಬಹುದು. 15 ಜಿಬಿ ಕ್ಲೌಡ್‌ ಸ್ಟೋರೇಜ್‌ ಫುಲ್‌ ಆಗಲು ಫೋಟೋಗಳು, ಕಾಂಟ್ಯಾಕ್ಟ್‌ಗಳು, ಪಿಡಿಎಫ್‌ ಫೈಲ್‌ಗಳ ಕೊಡುಗೆ ಅಪಾರವಾಗಿದೆ. ಕೆಲವೊಂದು ಸುಲಭವ ಟ್ರಿಕ್ಸ್‌ ಮೂಲಕ ಇಮೇಲ್‌ನಲ್ಲಿರುವ ಅನಗತ್ಯ ಮೇಲ್‌ಗಳನ್ನು ಡಿಲೀಟ್‌ ಮಾಡಿ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು.

ಇಮೇಲ್‌ ಸ್ಟೋರೇಜ್‌ ಫುಲ್‌ ಆಗಿದೆ, ಮುಂದೇನು?

ಹೆಚ್ಚುವರಿ ಜಿಬಿ ಸ್ಥಳಾವಕಾಶ ಬೇಕಿದ್ದರೆ ಗೂಗಲ್‌ಗೆ ಹಣ ಪಾವತಿಸಿ ಸ್ಟೋರೇಜ್‌ ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು ಪ್ರತಿತಿಂಗಳು/ವರ್ಷಕ್ಕೆ ಇಂತಿಷ್ಟು ಹಣ ಪಾವತಿಸಬೇಕು. ಕಡಿಮೆಯೆಂದರೂ ತಿಂಗಳಿಗೆ 130 ರೂಪಾಯಿ ಪಾವತಿಸಬೇಕು. ಇದರ ಬದಲು ಇರೋ ಹದಿನೈದು ಜಿಬಿಯಲ್ಲಿ ಸ್ಥಳಾವಕಾಶ ಮಾಡಿಕೊಳ್ಳುವುದೇ ಸುಲಭದ ಉಪಾಯವಾಗಿದೆ. ಇದರಿಂದ ಸಾಕಷ್ಟು ಸ್ಥಳಾವಕಾಶ ದೊರಕುತ್ತದೆ. ಗೂಗಲ್‌ ಇಮೇಲ್‌ನಲ್ಲಿ ಸ್ಥಳಾವಕಾಶ ಮಾಡಿಕೊಳ್ಳಲು ಈ ಮುಂದಿನ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿರಿ.

 

  1. ಗೂಗಲ್‌ ಸ್ಟೋರೇಜ್‌ಗೆ ಹೋಗಿ ಯಾವ ಖಾತೆ ಹೆಚ್ಚು ಸ್ಥಳಾವಕಾಶ ಬಳಸಿಕೊಂಡಿದೆ ಎಂದು ತಿಳಿಯಿರಿ. ಮೊದಲಿಗೆ ಗೂಗಲ್‌ ಫೋಟೋಸ್‌ಗೆ ಹೋಗಿ ಅನಗತ್ಯ ಫೋಟೋಗಳು ಸಿಂಕ್‌ ಆಗಿದ್ದರೆ ಡಿಲೀಟ್‌ ಮಾಡಿ. ಈಗ ಸ್ಮಾರ್ಟ್‌ಫೋನ್‌ಗಳು ಗೂಗಲ್‌ ಖಾತೆಗೆ ಲಿಂಕ್‌ ಆಗಿರುವುದರಿಂದ ಸಾಕಷ್ಟು ಫೋಟೋಗಳು ನಿಮ್ಮ ಅರಿವಿಗೆ ಬಾರದೆ ಗೂಗಲ್‌ ಸ್ಟೋರೇಜ್‌ನಲ್ಲಿ ಸಿಂಕ್‌ ಆಗಿರಬಹುದು. ಅವುಗಳನ್ನು ಪರಿಶೀಲಿಸಿ.
  2. ಗೂಗಲ್‌ ಡ್ರೈವ್‌ನಲ್ಲಿರುವ ಅನಗತ್ಯ ಫೈಲ್‌ಗಳನ್ನು ಡಿಲೀಟ್‌ ಮಾಡಿ. ಗೂಗಲ್‌ನಲ್ಲಿ ಹಲವು ದೊಡ್ಡ ಗಾತ್ರದ ಪಿಡಿಎಫ್‌ ಫೈಲ್‌ಗಳು, ವಿಡಿಯೋ ಕ್ಲಿಪ್‌ಗಳು ತುಂಬಿರಬಹುದು. ಅವುಗಳನ್ನು ಡಿಲೀಟ್‌ ಮಾಡಿ.
  3. ಜಿಮೇಲ್‌ ಮೇಲ್‌ಗಳೇ ಹೆಚ್ಚು ಸ್ಥಳಾವಕಾಶ ಪಡೆದುಕೊಂಡಿದ್ದರೆ ಇಮೇಲ್‌ನಲ್ಲಿರುವ ಅನಗತ್ಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿ. ಅನ್‌ ರೀಡ್‌ (ಓದದೆ ಇರುವ) ಇಮೇಲ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಸೆಲೆಕ್ಟ್‌ ಮಾಡಿ ಡಿಲೀಟ್‌ ಮಾಡಿ. ಇದಕ್ಕಾಗಿ ಅನ್‌ರೀಡ್‌ ಇಮೇಲ್‌ ಆಯ್ಕೆಯನ್ನು ಬಳಸಿಕೊಳ್ಳಿ.
  4. ಇಮೇಲ್‌ನಲ್ಲಿರುವ ರಾಶಿರಾಶಿ ಮೇಲ್‌ಗಳಲ್ಲಿ ದೊಡ್ಡ ಗಾತ್ರದ ಇಮೇಲ್‌ಗಳನ್ನು ಸುಲಭವಾಗಿ ಹುಡುಲು ‘has:attachment larger:10M’ ಎಂದು ಹುಡುಕಿ. ಆಗ ದೊಡ್ಡ ಗಾತ್ರದ ಇಮೇಲ್‌ಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಅನಗತ್ಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿ.
  5. ಇದೇ ರೀತಿ, 10M, 5M, 2M ಎಂದು ವಿವಿಧ ಗಾತ್ರದ ಮೇಲ್‌ ಹುಡುಕುತ್ತ ಡಿಲೀಟ್‌ ಮಾಡಿ. ಈ ಮೂಲಕ ನಿಮ್ಮ ಇಮೇಲ್‌ನಲ್ಲಿ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು.
Nimma Suddi
";