ಬೆಂಗಳೂರು
ಇಂದು ಸಂಘದ ನಿಯೋಗವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ರವನ್ನು ಭೇಟಿ ಮಾಡಿ ಪತ್ರಕರ್ತರ ಅನೇಕ ಸಮಸ್ಯೆಗಳನ್ನು ಅವರ ಜೊತೆ ಚರ್ಚಿಸಲಾಯಿತು. ಬಹುತೇಕ ಸಮಸ್ಯೆಗಳಿಗೆ ಉತ್ತರವನ್ನು ನೀಡಿದ್ದಾರೆ.
# ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕೆಂಬ ಬೇಡಿಕೆಯನ್ನು ಈ ಭಾರಿ ಈಡೇರಿಸುವುದಾಗಿ ತಿಳಿಸಿದರು ಇದಕ್ಕೆ ಬೇಕಾದ ಅನುದಾನವನ್ನು ಈ ಸಾಲಿನ ಬಜೆಟ್ ನಲ್ಲಿ ಮೀಸಲಿರಿಸಿ ಬಜೆಟ್ ನಲ್ಲಿ ಘೋಷಿಸಿಲು ತೀರ್ಮಾನಿಸಲಾಗಿದೆ ಎಂದರು.
# ಪರಿಶಿಷ್ಟ ಜಾತಿ,ಹಿಂದುಳಿದ ವರ್ಗಗಳು,ಬ್ರಾಹ್ಮಣ ವರ್ಗಗಳು ಮತ್ತು ಏಜೆನ್ಸಿ ಮೂಲಕ ನೀಡಲಾಗಿರುವ ಜಾಹೀರಾತು ಮೊತ್ತಕ್ಕಾಗಿ 93 ಕೋಟಿ ರೂಗಳನ್ನು ಇನ್ನು ಒಂದೆರಡು ದಿನದಲ್ಲಿ ವಾರ್ತಾಇಲಾಖೆಗೆ ನೀಡಲಾಗುವುದು.
# ಉದ್ದೇಶ ಪೂರಕವಾಗಿ ಜಾಹೀರಾತು ನೀಡಿಕೆಯಲ್ಲಿ ವಿಳಂಬ ದೊರಣೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
# ದರ ಪರಿಷ್ಕರಣೆಯನ್ನೂ ಸಧ್ಯದಲ್ಲಿಯೇ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಜಾಹೀರಾತು ಬಾಕಿ ಮೊತ್ತವನ್ನು ಬಿಡುಗಡೆ ಮಾಡಿದ (93ಕೋಟಿ)ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಗೂ ನಮ್ಮ ಪರ ವಕಾಲತ್ತು ವಹಿಸಿದ ಮಾಧ್ಯಮ ಸ್ನೇಹಿಯಾದ ಕೆ.ವಿ.ಪ್ರಭಾಕರ್ ರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು,ಅಭಿನಂದಿಸಿದರು
ಈ ನಿಯೋಗದಲ್ಲಿ KUWJ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು,ರಾಜ್ಯ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮತ್ತು ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಚೆಲುವರಾಜು ರವರು ಇದ್ದರು