ಬೆಂಗಳೂರು
ರಾಜ್ಯದ ಸಮಸ್ತ ಅತಿಥಿ ಶಿಕ್ಷಕರ ಗಮನಕ್ಕೆ ಆರ್ಥಿಕ ಇಲಾಖೆಯಿಂದ ಅತಿಥಿ ಶಿಕ್ಷಕರ ವೇತನಕ್ಕೆ ಸಂಬಂಧಿಸಿದ ಅನುದಾನ 227ಕೋಟಿ ರೂ ಅನುಮೋದನೆಯಾಗಿದೆ.
ನಾಳೆ ಸಂಜೆಯೊಳಗೆ ತಾಲೂಕಾ ಪಂಚಾಯತಿಗಳಿಗೆ ಬಿಡುಗಡೆ ಸಾಧ್ಯತೆ
ರಾಜ್ಯದ ಸಮಸ್ತ ಅತಿಥಿ ಶಿಕ್ಷಕರ ಗಮನಕ್ಕೆ ಸಂಘಟನೆಯ ನಿರಂತರ ಪ್ರಯತ್ನದಿಂದ ರಾಜ್ಯದ ಮೊದಲ ಕಂತಿನ 27,000 ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಹಾಗೂ 8000 ಪ್ರೌಢಶಾಲಾ ಅತಿಥಿ ಶಿಕ್ಷಕರ ವೇತನಕ್ಕೆ ಸಂಬಂಧಿಸಿದ ಸುಮಾರು 227 ಕೋಟಿ ಅನುದಾನವು ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡಿದೆ.
ನಾಳೆ ಸಂಜೆಯೊಳಗಾಗಿ ತಾಲೂಕು ಪಂಚಾಯತಗಳಿಗೆ ಬಿಡುಗಡೆಗೊಳ್ಳುತ್ತದೆ ಎಂಬ ಅಂಶವನ್ನು ರಾಜ್ಯದ ಸಮಸ್ತ ಅತಿಥಿ ಶಿಕ್ಷಕರ ಗಮನಕ್ಕೆ ತರಬಯಸುತ್ತೇವೆ ಎಂದು ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ತಿಳಿಸಿದೆ.