This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture NewsLocal NewsState News

ಎಂಟು ಎಕರೆಯಲ್ಲಿ ಪಪ್ಪಾಯ ಬೆಳೆದ ರೈತನಿಗೆ ಉತ್ತಮ ಲಾಭ

ಎಂಟು ಎಕರೆಯಲ್ಲಿ ಪಪ್ಪಾಯ ಬೆಳೆದ ರೈತನಿಗೆ ಉತ್ತಮ ಲಾಭ

ರಾಯಚೂರು : ಬೇಸಿಗೆ ಹಾಗೂ ಅಂತರ್ಜಲ ಅಭಾವದಲ್ಲೂ ಎಂಟು ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದು, ಲಾಭ ಪಡೆದುಕೊಳ್ಳುವ ಮೂಲಕ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದ ವೀರೇಶ ಹೂಗಾರ ರೈತರಿಗೆ ಮಾದರಿಯಾಗಿದ್ದಾರೆ.

ವೀರೇಶ ಅವರು ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿ, ಸದ್ಯ ಕಾನೂನು ಅಧ್ಯಯನ ಮುಂದುವರಿಸಿ, ಮಣ್ಣಿನ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಉದ್ಯೋಗ ಮಾಡುವ ಇಂಗಿತ ಹೊಂದಿದ್ದರು. ಆದರೆ ಕೃಷಿಯಲ್ಲಿನ ಅವರ ಆಸಕ್ತಿಯಿಂದ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇವರ ನಿರ್ಧಾರಕ್ಕೆ ಕುಟುಂಬದವರು ಸಾಥ್‌ ನೀಡಿದ್ದಾರೆ.

ಈಗ ಯಶಸ್ವಿ ಕೃಷಿಕರಾಗಿದ್ದಾರೆ. ಶ್ರಮಕ್ಕೆ ತಕ್ಕ ಫಲ ಪಡೆಯುತ್ತಿದ್ದಾರೆ. ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿದ್ರೆ ಹಣ ಸಂಪಾದನೆ ಮಾಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂಬ ಸತ್ಯ ಅರಿತು.ಇದಕ್ಕೆ ಚಿಕ್ಕಪ್ಪರಾದ ರವಿ ಕುಮಾರ್‌ ಹಾಗೂ ಶರಣಬಸವ ಅವರ ಸಹಕಾರದೊಂದಿಗೆ 8 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿದ್ದಾರೆ.

ರೈತ ವೀರೇಶ ಅವರದು ದೊಡ್ಡ ಕುಟುಂಬ. ಒಟ್ಟು 14 ಎಕರೆ ಜಮೀನು ಇದೆ. ಅದರದಲ್ಲಿ ವೀರೇಶ ಅವರ ಪಾಲಿಗೆ 8 ಎಕರೆ ಬಂದಿದೆ. ಇದರಲ್ಲಿ ಪಪ್ಪಾಯ ಬೆಳೆದಿದ್ದಾರೆ.

ಬೆಳೆಗಾಗಿ ಬಾವಿ ಹಾಗೂ ಬೋರ್‌ವೆಲ್‌ ನೀರು ಬಳಕೆ ಮಾಡುತ್ತಾರೆ. ಪಪ್ಪಾಯ ಬೆಳೆದು ಕೇವಲ 7 ತಿಂಗಳಲ್ಲಿ ಫಸಲು ಪಡೆದುಕೊಂಡಿರುವ ವೀರೇಶ ಹೂಗಾರ ಎರಡು ವರ್ಷಗಳವರೆಗೆ ಫಸಲನ್ನು ಪ್ರತಿ 8 ರಿಂದ 10 ದಿನ ಗಳಿಗೊಮ್ಮೆ ಮಾರಾಟ ಮಾಡುತ್ತಾರೆ. ಜತೆಗೆ ಮಿಶ್ರ ಬೆಳೆಯಾಗಿ ದಾಳಿಂಬೆ ಬೆಳೆದಿದ್ದು, ಬೆಳವಣಿಗೆ ಹಂತದಲ್ಲಿದೆ.

ಪಪ್ಪಾಯ ನಂತರ ದಾಳಿಂಬೆ ಫಸಲು ಪಡೆಯಬಹುದು. Drought: ಕೊಳವೆಬಾವಿ ಕೊರೆಸಿ ಜನ್ಮದಿನ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಇವರಿಗೆ ಮಾರ್ಗದರ್ಶಕರಾಗಿ ಮತ್ತೊಬ್ಬ ಚಿಕ್ಕಪ್ಪ ಸಿದ್ದಣ್ಣ ಹೂಗಾರ್‌ ನೆರವಾಗಿದ್ದಾರೆ.

ತೋಟಗಾರಿಕೆ ಇಲಾಖೆಯ ಸೌಲಭ್ಯ, ಸ್ವಂತ ಖರ್ಚಿನಲ್ಲಿಜೋಡಿ ಬೆಳೆ ಬೆಳೆದಿರುವ ವೀರೇಶ್‌ ಅವರು ಭೂತಾಯಿಯನ್ನೇ ನಂಬಿದರೆ ಖಂಡಿತ ಕೈ ಬಿಡೋದಿಲ್ಲಎಂಬ ಸತ್ಯ ಅರಿತಿದ್ದಾರೆ.

ಅಲ್ಲಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಪಪ್ಪಾಯಗೆ ದರ ಹೆಚ್ಚಳದಿಂದ ವೀರೇಶ ಖುಷಿಯಲ್ಲಿದ್ದಾರೆ.

ಪ್ರತಿ ಕೆಜಿಗೆ 2 ರಿಂದ 5 ರೂ. ವರೆಗೆ ಮಾರಾಟವಾಗುತ್ತಿದ್ದ ಪಪ್ಪಾಯಗೆ ಈಗ ಪ್ರತಿ ಕೆಜಿಗೆ 10 ರೂ.ಗೆ ಖರೀದಿಸುತ್ತಿದ್ದಾರೆ. ಹೈದರಾಬಾದ್‌, ಚೆನ್ನೈ, ಮುಂಬಯಿ ಮತ್ತು ದಿಲ್ಲಿಯಿಂದ ಖರೀದಿದಾರರು ಬಂದು ಪಪ್ಪಾಯ ಖರೀದಿಸುತ್ತಾರೆ.

ಪ್ರತಿಬಾರಿ 10 ರಿಂದ 15 ಟನ್‌ ಪಪ್ಪಾಯ ಮಾರಾಟ ಮಾಡುತ್ತಿದ್ದು, ಸದ್ಯ 8 ತಿಂಗಳಲ್ಲಿ6 ಲಕ್ಷ ರೂ. ಮೌಲ್ಯದ ಪಪ್ಪಾಯ ಬೆಳೆದಿದ್ದು, ಮಾರುಕಟ್ಟೆಯಲ್ಲಿಉತ್ತಮ ಬೆಲೆ ದೊರೆತರೆ 30 ರಿಂದ 40 ಲಕ್ಷ ರೂ.ಸಿಗುತ್ತದೆ ಎಂದು ಕೃಷಿಕ, ವೀರೇಶ ಹೂಗಾರ ದೇವರಭೂಪೂರ ಹೇಳಿದರು.

";