ಬೆಂಗಳೂರು: ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಾಜ್ಯದಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ನಡುವೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇಂದಿನ ಬಂದ್ ಕುರಿತಂತೆ ಎಕ್ಸ್ (ಟ್ವೀಟ್)ನಲ್ಲಿ ಬರೆದುಕೊಂಡಿರುವ ಅವರು, ಕಾವೇರಿ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ, ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. ಕಾಂಗ್ರೆಸ್ ಸರ್ಕಾರವು ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಕಾವೇರಿ_ನಮ್ಮದು ಎಂದಿದ್ದಾರೆ.
ಇವರಲ್ಲದೆ ಬಿಜೆಪಿ ಸಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಸ್ಟಾಲಿನ್ ನಾಡಿನ ರೈತರಿಗೆ ಎರೆಡೆರಡು ಬೆಳೆ ಬೆಳೆಯಲು ನೀರು ಬಿಟ್ಟು, ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ “ಕರ್ನಾಟಕ ಮಾಡೆಲ್” ಅನ್ನು ಪರಿಚಯಿಸುತ್ತಿರುವ ನಾಡದ್ರೋಹಿ ಕಾಂಗ್ರೆಸ್ ಸರಕಾರ ಎಂದಿದೆ.
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು – ಇದು ಹಳೇ ಗಾದೆ…ಊರ್ ಕೊಳ್ಳೆ ಹೊಡ್ಸಿದ್ರು, ಆಮೇಲೆ ಕೋಟೆ ಬಾಗ್ಲು ಹಾಕೋ ನಾಟಕ ಆಡ್ಸಿದ್ರು – ಇದು ಇವ್ರನ್ನು ನೋಡಿ ಮಾಡಿರೋ ಹೊಸ ಗಾದೆ…ಎಂದು ಲೇವಡಿ ಮಾಡಿದೆ.