ಬೆಂಗಳೂರು: ಚಳಿಗಾಲ ಕಳೆದ ಬೇಸಿಗೆ ಕಾಲ ಆರಂಭವಾಗಿದೆ. ಈಗ ಕೆಲವು ರೈತರ ಹೊಲಗಳು ಖಾಲಿ ಇರುತ್ತವೆ. ಯಾವ ಬೆಳೆ ಬೆಳೆಯಬೇಕು ಎಂದು ರೈತರು ಚಿಂತೆಯಲ್ಲಿರುತ್ತಾರೆ. ಅಂತಹ ರೈತರಿಗೆ ಸಲಹೆಯೊಂದು ಇಲ್ಲಿದೆ. ತರಕಾರಿ ಅಂದರೆ ಕೊತ್ತಂಬರಿ, ಮೆಂತೆ ಸೇರಿದಂತೆ ಇನ್ನಿತರ ಪಲ್ಲೆಗಳನ್ನು ಬೆಳೆದರೆ ಒಳ್ಳೆಯ ಲಾಭ ಪಡೆಯಬಹುದು.
ಬೇಸಿಗೆಯಲ್ಲಿ ಈ ತಪ್ಪಲು ಪಲ್ಲೆಗೆ ಬೆಲೆ ಜಾಸ್ತಿ ಇರುತ್ತದೆ. ಆದರೆ ಸಿಗುವುದು ಕಡಿಮೆ, ಹೀಗಾಗಿಯೇ ಈ ಸಮಯದಲ್ಲಿ ಇದನ್ನು ಬೆಳೆದು ಉತ್ತಮ ಲಾಭ ಪಡೆಯಬಹುದು.
ಕೃಷಿ ತಜ್ಞರಾದ ಡಾ. ಎನ್.ಸಿ. ತ್ರಿಪಾಠಿಯವರ ಪ್ರಕಾರ, ಮಾರ್ಚ್ ನಿಂದ ಏಪ್ರಿಲ್ ತಿಂಗಳು ಕೊತ್ತಂಬರಿ ಬೆಳೆಯಲು ಸೂಕ್ತ ಸಮಯ. ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಕಳೆ ತೆಗೆಯಬೇಕು. ನಂತರ ಕೊಳೆತ ಸಗಣಿ ಗೊಬ್ಬರ ಹಾಕಿ ಮತ್ತೆ ಚೆನ್ನಾಗಿ ಉಳುಮೆ ಮಾಡಬೇಕು.
ಎರಡನೇ ಬಾರಿ ಉಳುಮೆ ಮಾಡುವಾಗ ಡಿಎಪಿ ಮತ್ತು ಪೊಟ್ಯಾಷ್ ಗೊಬ್ಬರ ಮಿಶ್ರಣ ಮಾಡಿ ಹಾಕಬೇಕು. ನಂತರ ರೋಟವೇಟರ್ ಬಳಸಿ ಮಣ್ಣನ್ನು ಸಡಿಲಗೊಳಿಸಿ ಸಮತಟ್ಟು ಮಾಡಬೇಕು.
ಹಿಸಾರ್ ಸುಗಂಧ ಎಂಬ ಕೊತ್ತಂಬರಿ ತಳಿ ಬೇಗ ಬೆಳೆದು ಹೆಚ್ಚು ಇಳುವರಿ ನೀಡುತ್ತದೆ. ಬಿತ್ತನೆ ಮಾಡುವ ಮೊದಲು ಬೀಜಗಳನ್ನು ಒಂದು ದಿನ ನೆನೆಸಿಟ್ಟು ನಂತರ ಬಿತ್ತನೆ ಮಾಡಬೇಕು.
ಸುಮಾರು 35-40 ದಿನಗಳಲ್ಲಿ ಕೊತ್ತಂಬರಿ ಕೊಯ್ಲಿಗೆ ಬರುತ್ತದೆ. ಒಂದು ಹೆಕ್ಟೇರ್ ಭೂಮಿಯಲ್ಲಿ ಸರಿಯಾಗಿ ಬೆಳೆದರೆ 10 ಕ್ವಿಂಟಾಲ್ ವರೆಗೆ ಕೊತ್ತಂಬರಿ ಇಳುವರಿ ಪಡೆಯಬಹುದು. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ಒಳ್ಳೆಯ ಬೆಲೆ ಸಿಗುವುದರಿಂದ ರೈತರು ಕಡಿಮೆ ಅವಧಿಯಲ್ಲಿ ಉತ್ತಮ ಲಾಭ ಗಳಿಸಬಹುದು.
ಕೇವಲ ಕೊತ್ತಂಬರಿ ಸೊಪ್ಪಷ್ಟೇ ಅಲ್ಲ. ಈ ಬೆಳೆ ಬೆಳೆದ್ರು ಕೈ ತುಂಬಾ ಕಾಸು ಸಿಗುತ್ತೆ. ಮಖಾನನ ಇಂಗ್ಲಿಷ್‌ನಲ್ಲಿ ಫಾಕ್ಸ್ ನಟ್ ಅಂತ ಕರೀತಾರೆ. ಇದು ಮುಳ್ಳಿನ ಗೋರ್ಗಾನ್ ಗಿಡದ ಒಣಗಿದ ಬೀಜ. ಈ ಗಿಡ ದಕ್ಷಿಣ ಮತ್ತು ಪೂರ್ವ ಏಷ್ಯಾದ ಸಿಹಿನೀರಿನ ಕೆರೆಗಳಲ್ಲಿ ಸಿಗುತ್ತೆ. ಮಖಾನ ಗಿಡದ ತಿನ್ನೋ ಭಾಗ ಕಪ್ಪು ಅಥವಾ ಕಂದು ಬಣ್ಣದ ಸಣ್ಣ, ದುಂಡಗಿನ ಬೀಜಗಳಿಂದ ಕೂಡಿರುತ್ತೆ, ಅದಕ್ಕೇ ಇದನ್ನ ‘ಕಪ್ಪು ವಜ್ರ’ ಅಂತ ಕರೀತಾರೆ. ಇದು ತುಂಬಾ ದುಬಾರಿ ಬೆಳೆ.
ಗೃಹಲಕ್ಷ್ಮೀ ಯೋಜನೆ ಹಣ 1,000 ರೂ.ಗೆ ಇಳಿಕೆಯಾಗುತ್ತಾ? ಸದ್ದು ಮಾಡುತ್ತಿರುವ ಸುದ್ದಿ
ಮಖಾನನ ಹೆಚ್ಚಾಗಿ ತಿಂಡಿ ರೂಪದಲ್ಲಿ ತಿನ್ನುತ್ತಾರೆ. ಭಾರತದಲ್ಲಿ ಒಂದು ಕಿಲೋ ಮಖಾನದ ಬೆಲೆ 1600 ರೂ. ಆಗಿದ್ರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಪ್ರತಿ ಕಿಲೋಗೆ 8000 ರೂ. ಇದೆ ಅನ್ನೋದರಿಂದ ಮಖಾನ ಕೃಷಿ ಎಷ್ಟು ಲಾಭದಾಯಕ ಅಂತ ನೀವೇ ಊಹಿಸಬಹುದು.
IPL 2025: ಐಪಿಎಲ್ನ ಕೆಲ ಪಂದ್ಯಗಳಿಗೆ ರಾಹುಲ್ ಅಲಭ್ಯ, ಇದರಿಂದ ಕೈ ತಪ್ಪಿತಾ ಕ್ಯಾಪ್ಟನ್ ಸ್ಥಾನ