This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಮೀಸಲಾತಿ ದೊರೆಯುವ ಭರವಸೆ

ನಿಮ್ಮ ಸುದ್ದಿ ಬೆಳಗಾವಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಷಯವಾಗಿ ಸ್ವತಃ ಗಡುವು ಪಡೆದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮುದಾಯಕ್ಕೆ ನ್ಯಾಯ ಒದಗಿಸಿ ಬಸವಣ್ಣನಾಗುತ್ತಾರೋ, ಬೇಡಿಕೆ ತಿರಸ್ಕರಿಸಿ ಸಮುದಾಯದ ಅಸಮಾಧಾನಕ್ಕೆ ಕಾರಣರಾಗುತ್ತಾರೋ ಕಾದು ನೋಡೋಣ. ರಾಜ್ಯ ಸರಕಾರದ ನಿರ್ಧಾರ ಪ್ರಕಟವಾಗುವವರೆಗೆ ಯಾರೂ ದುಡುಕುವುದು ಬೇಡ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸುವ ಬೇಡಿಕೆ ವಿಷಯವಾಗಿ ರಾಜ್ಯ ಸರಕಾರ ಈಗಾಗಲೇ ಐದು ಬಾರಿ ಭರವಸೆ ಕೊಟ್ಟು ಮಾತು ತಪ್ಪಿದೆ. ಈಗ ಆರನೇ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ವಾರದ ಗಡುವು ಪಡೆದು ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ತಾಯಿ ಮೇಲೆ ಆಣೆ ಮಾಡಿ ಭರವಸೆ ನೀಡಿದ್ದರಿಂದ ಹೋರಾಟದ ಕೊನೆ ಗಳಿಗೆಯಲ್ಲೂ ನಿರ್ಧಾರ ಬದಲಿಸಿ ಅವಕಾಶ ಕೊಟ್ಟಿದ್ದೇವೆ. ವಿರಾಟ ಪಂಚ ಶಕ್ತಿ ಸಮಾವೇಶ ಸರಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಿದ್ದೇವೆ ಎನ್ನುವ ವಿಶ್ವಾಸ ನಮಗಿದೆ. ಸಮುದಾಯದ ಜನ ವಿಚಲಿತರಾಗಬೇಕಿಲ್ಲ ಎಂದರು.

ವಿರೋಧ ಮಾಡೋರು ಮಾಡಲಿ: ಪಂಚಮಸಾಲಿ ಹೋರಾಟ ಮಾತ್ರ ನಮ್ಮದು. ಅದನ್ನು ವಿರೋಧಿಸುವವರ ವಿಷಯ ನಮಗೆ ಬೇಕಿಲ್ಲ. ಯಾರಿಗೆ ಮೀಸಲಾತಿ ಕೊಡಬೇಕು, ಕೊಡಬಾರದೆನ್ನುವ ವಿಷಯ ಸರಕಾರಕ್ಕೆ ಬಿಟ್ಟಿದ್ದು. ಅರ್ಹರಿಗೆ ಮೀಸಲಾತಿ ಸಿಗಬೇಕೆನ್ನುವುದಷ್ಟೆ ನಮ್ಮ ಒತ್ತಾಯ ಎಂದ ಬಸವಜಯ ಮೃತ್ಯುಂಜಯಬಸ್ವಾಮೀಜಿ, ಸರಕಾರ ನಿರ್ಧಾರ ಬದಲಿಸಿದರೆ ಮುಂದಿನ ಹೋರಾಟದ ವಿಷಯವಾಗಿ ಈಗಾಗಲೇ ಸಮುದಾಯ ಮುಖಂಡರು ಮತ್ತು ಕಾನೂನು ತಜ್ಞರೊಂದಿಗೆ ಎರಡು ಸುತ್ತಿನ ಚರ್ಚೆ ಮಾಡಿದ್ದೇವೆ. ಸರಕಾರದ ನಿರ್ಧಾರದ ನಂತರ ವಿಜಯೋತ್ಸವ ಅಥವಾ ಹೋರಾಟದ ಎನ್ನುವ ನಿಲುವು ಪ್ರಕಟಿಸಲಾಗುವುದು ಎಂದರು.

ಕಾಂಗ್ರಸ್ ನ ಹಿರಿಯ ನಾಯಕ ರಮೇಶ ಕುಮಾರ ಕಣ್ಣಿಗೆ ನಮ್ಮ ಸಮುದಾಯದ ನಾಲ್ಕೈದು ಜನ ಮಾತ್ರ ಕಾಣ್ತಾರೆ.
ದೇಶಮುಖ, ಪಾಟೀಲ ಥರದವರನ್ನು ನೋಡಿ ಇಡೀ ಸಮುದಾಯ ಮತ್ತು ಮುಂದುವರೆದಿದೆ ಎಂದು ಹೇಳಿಕೆ ನೀಡುವಾಗ ಎಚ್ಚರಿಕೆ ಇರಬೇಕು. ಸಂವಿಧಾನದ ಆಳ ಅಗಲ ಅರಿತವರು. ಅವರ ಸಮುದಾಯಕ್ಕೂ ಶೇ.10 ರಷ್ಟು ಮೀಸಲಾತಿ ನೀಡಿದಾಗ ಇನ್ನುಳಿದರ್ಯಾರೂ ವಿರೋಧಿಸಿಲ್ಲ.
ತಮಗೆ ಮೀಸಲಾತಿ ಪಟ್ಟಾಗ ಸಂತೋಣ ಪಟ್ಟವರು ಪಂಚಮಸಾಲಿಗಳ ಬೇಡಿಕೆ ವಿರುದ್ದ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದರು.

ಪಂಚಮಸಾಲಿ ಸಮುದಾಯ ಮುಖಂಡರಾದವಮಾಜಿ ವಿಧಾನಪರಿಷತ್ ಸದಸ್ಯ ಶಿವಶಂಕರ, ಆರ್.ಕೆ.ಪಾಟೀಲ, ದೀಪಕ ಜುಂಜರವಾಡ, ನಿಂಗಪ್ಪ ಪಿರೋಜಿ, ರಾಮನಗೌಡ ಪಾಟೀಲ, ರಾಜು ಮಗದುಮ್ ಸುದ್ದಿಗೋಷ್ಠಿಯಲ್ಲಿ ಇದ್ದರು.
….

Nimma Suddi
";