ಮೂಡಲಗಿ: ಸರಕಾರಿ ಶಾಲೆಗಳಲ್ಲಿನ ಅತಿಥಿ ಶಿಕ್ಷಕರು 6 ತಿಂಗಳು ವೇತನ ವಿಲ್ಲದೆ ಜೀವನ ನಡಿಸೋಕೆ ಪರದಾಟ ನಡೆಸುತ್ತಿದ್ದು,
ಸರಕಾರವು 2023-2024 ನೇ ಸಾಲಿಗೆ 2 ಹಂತಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ ಎಂದು ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ (ರಿ ) ಕರ್ನಾಟಕ ರಾಜ್ಯ ನಿರ್ದೇಶಕರು ಆದ ಶ್ರೀ ಗಂಗಾಧರ ಕಟ್ಟಿಕಾರ ಸೂಚಿಸಿದರು.
ಆದರೆ ವೇತನವು ಮೊದಲ ಹಂತದಲ್ಲಿ ಆಯ್ಕೆಯಾದ ಅತಿಥಿ ಶಿಕ್ಷಕರಿಗೆ ಮಾತ್ರ ನೀಡುತ್ತಾ ಬಂದಿದೆ, ಎರಡನೇ ಹಂತದಲ್ಲಿ ಅತಿಥಿ ಶಿಕ್ಷಕರಾಗಿ ನೇಮಕಾತಿ ಹೊಂದಿರುವ ಅತಿಥಿ ಶಿಕ್ಷಕರ ವೇತನ ಸುಮಾರು ಆರು ತಿಂಗಳು ಆದರೂ ಯಾವುದೇ ವೇತನ ನೀಡಿಲ್ಲ ಎಂದು ತಿಳಿಸಿದರು.
ಹಲವಾರು ಅತಿಥಿ ಶಿಕ್ಷಕರ ಕುಟುಂಬ ನಿರ್ವಹಣೆ ತುಂಬಾ ಕಷ್ಟದಾಯಕವಾಗಿದೆ ಎಂದು ವಿವರಿಸಿದರು.