This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

Happy friendship day : ಸ್ನೇಹ ದಿನದ ಶುಭಾಶಯಗಳು; ಸ್ನೇಹ ಪ್ರಪಂಚದಲ್ಲಿ ಖುಷಿಯ ಜೀವ ನಾನು

Happy friendship day : ಸ್ನೇಹ ದಿನದ ಶುಭಾಶಯಗಳು; ಸ್ನೇಹ ಪ್ರಪಂಚದಲ್ಲಿ ಖುಷಿಯ ಜೀವ ನಾನು

ಸ್ನೇಹ ಎಂಬುದು ಅದ್ಭುತ ಪ್ರಪಂಚ… ನಮಗೆ ನಾವೇ ಆರಿಸಿಕೊಳ್ಳುವ ಅದ್ಭುತ ಕುಟುಂಬ ಇದು… ಜೀವಕ್ಕೆ ಜೀವ ಕೊಡುವ ಫ್ರೆಂಡ್ಸ್ ಇದ್ದರೆ ಖುಷಿಗೇನೂ ಕೊರತೆಯಾಗದು, ಬದುಕಿನಲ್ಲಿ ಎದುರಾಗುವ ಕಷ್ಟಗಳು, ಸವಾಲುಗಳನ್ನು ಎದುರಿಸಿ ಗೆಲ್ಲುವ ಧೈರ್ಯವೂ ಕಡಿಮೆಯಾಗದು… ಯಾಕೆಂದರೆ ಸ್ನೇಹದ ಶಕ್ತಿಯೇ ಅಂತಹದ್ದು.

ಈ ಜಗತ್ತಿನಲ್ಲಿರುವ ಅತ್ಯಂತ ಸುಂದರ ಸಂಬಂಧಗಳಲ್ಲಿ ಒಂದು ಸ್ನೇಹ. ಫ್ರೆಂಡ್ಸ್ ಜೊತೆಗಿದ್ದಾಗ ನಾವು ಸುಂದರ ಪ್ರಪಂಚದ ವಿಹಾರಿಗಳು… ಫ್ರೆಂಡ್ಸ್ ಜೊತೆ ನಗುತ್ತೇವೆ, ಫ್ರೆಂಡ್ಸ್ ಜೊತೆ ಅಳುತ್ತೇವೆ, ಫ್ರೆಂಡ್ಸ್ ಜೊತೆ ಜಗಳವಾಡಿ ಒಂದಾಗುತ್ತೇವೆ, ಪ್ರತಿ ಕ್ಷಣವನ್ನೂ ಆನಂದಿಸುತ್ತೇವೆ. ಗುದ್ದಾಡಿದರೂ ಇಲ್ಲಿ ಪ್ರೀತಿಯಂತು ಕಡಿಮೆಯಾಗದು. ಇದೇ ಕಾರಣಕ್ಕೆ ಸ್ನೇಹವನ್ನು ಮಧುರ ಬಂಧ ಎನ್ನುವುದು.

ಭಾರತದಲ್ಲಿ ಪ್ರತಿವರ್ಷ ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್ಶಿಪ್ ಡೇ ಎಂದು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 4ರ ಭಾನುವಾರವನ್ನು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಫ್ರೆಂಡ್ಶಿಪ್ಡೇ ಅನ್ನು ಮೊದಲು ಪರಾಗ್ವೆಯಲ್ಲಿ 1958 ರಲ್ಲಿ ಜಾಯ್ಸ್ ಹಾಲ್ ಪ್ರಸ್ತಾಪಿಸಿದರು. ನಮ್ಮ ಜೀವನದಲ್ಲಿ ಸ್ನೇಹಿತರ ಮೌಲ್ಯವನ್ನು ಆಚರಿಸುವ, ವ್ಯಕ್ತಪಡಿಸುವ ಮತ್ತು ಪ್ರಶಂಸಿಸುವ ದಿನವನ್ನು ಪರಿಚಯಿಸಲು ಅವರು ಬಯಸಿದ್ದರು. ಕ್ರಮೇಣ ಇದು ವಿಶ್ವದಾದ್ಯಂತ ಆಚರಣೆಗೆ ಬಂತು. ಭಾರತ, ಬಾಂಗ್ಲಾದೇಶ, ಮಲೇಷ್ಯಾ, ಯುಎಇ, ಯುಎಸ್ನಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್ಶಿಪ್ ಡೇ ಆಗಿ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಫ್ರೆಂಡ್ಶಿಫ್ ಡೇ ಯನ್ನು ಆಚರಿಸಲಾಗುತ್ತದೆ.

ಇನ್ನು ಈ ಮಧುರ ದಿನದಂದು ನೀವು ಹಂಚಿಕೊಳ್ಳಬಹುದಾದ ಕೆಲವೊಂದು ಶುಭಾಶಯದ ಸಂದೇಶಗಳು ಇಲ್ಲಿವೆ

• ಸ್ನೇಹ ಎಂಬುದು ಮಧುರ ಬಂಧ… ನಿನ್ನ ಸುಂದರ ಸ್ನೇಹದ ಪ್ರಪಂಚದಲ್ಲಿ ನಾನೂ ಇದ್ದೇನೆ ಎಂಬ ಖುಷಿ ನನ್ನದು… ಹ್ಯಾಪಿ ಫ್ರೆಂಡ್ಶಿಪ್ ಡೇ
• ಖುಷಿ ನೀಡಿದಿ… ಧೈರ್ಯ ತುಂಬಿದಿ… ನಗು ಅರಳಿಸಿದಿ… ಬದುಕು ರೂಪಿಸಿದಿ… ಹೇಗೆ ತಿಳಿಸಲಿ ಧನ್ಯವಾದ, ಹೇಗೆ ತೀರಿಸಲಿ ಈ ಋಣ…
• ದೇವರು ನಿನಗೆ ಆರೋಗ್ಯ, ಆಯುಷ್ಯ, ಸಂಪತ್ತು, ಸಂತೋಷ, ನೆಮ್ಮದಿ ಕರುಣಿಸಲಿ… ನಿನ್ನ ಕಷ್ಟಗಳೆಲ್ಲಾ ದೂರವಾಗಿ ಖುಷಿ ಮೂಡಲಿ… ಹ್ಯಾಪಿ ಫ್ರೆಂಡ್ಶಿಪ್ ಡೇ
• ನನ್ನನ್ನು ಚೆನ್ನಾಗಿ ಅರಿತಿರುವ, ನನ್ನ ಎಲ್ಲಾ ಸುಖ ದುಃಖಗಳಲ್ಲಿ ಜೊತೆಯಾಗಿರುವ ಅದ್ಭುತ ಫ್ರೆಂಡ್ ನೀನು. ನಿನ್ನ ಪ್ರೀತಿ, ವಿಶ್ವಾಸ, ನಂಬಿಕೆಗೆ ಕೃತಜ್ಞತೆ. ಹ್ಯಾಪಿ ಫ್ರೆಂಡ್ಶಿಪ್ ಡೇ
• ದೇವರು ಕೊಟ್ಟ ಅದ್ಭುತ ಗಿಫ್ಟ್ ನೀನು. ನಿನಗೆ ಸ್ನೇಹದ ದಿನದ ಹಾರ್ದಿಕ ಶುಭಾಶಯಗಳು
• ನಿನ್ನ ಪ್ರೀತಿ, ವಿಶ್ವಾಸಕ್ಕೆ ಬೆಲೆಯೇ ಕಟ್ಟಲಾಗದು. ಫ್ರೆಂಡ್ ಎಂದರೆ ಹೇಗಿರಬೇಕು ಎಂಬುದಕ್ಕೆ ಸಾಕ್ಷಿ ನೀನು… ಎಂದೆಂದೂ ಹೀಗೆಯೇ ಜೊತೆಯಾಗಿರು… ಹ್ಯಾಪಿ ಫ್ರೆಂಡ್ಶಿಪ್ ಡೇ
• ನಿನ್ನ ಸುಂದರ ಸ್ನೇಹವೇ ನನ್ನ ಸಂತೋಷದ ಮೂಲ. ನಾನು ನಿನ್ನ ಫ್ರೆಂಡ್ ಆಗಿರುವುದಕ್ಕೆ ಧನ್ಯ… ನಿನಗೆ ಸ್ನೇಹದ ದಿನದ ಶುಭಾಶಯಗಳು
• ನಿನ್ನ ಸ್ನೇಹದ ಪ್ರಪಂಚದಲ್ಲಿ ಖುಷಿಯ ಜೀವ ನಾನು. ಬದುಕಿನುದ್ದಕ್ಕೂ ಉಳಿಯಲಿ ಈ ಸುಂದರ ಸ್ನೇಹ. ಹ್ಯಾಪಿ ಫ್ರೆಂಡ್ಶಿಪ್ ಡೇ
• ಸ್ನೇಹ ಎಂದರೆ ಎಲ್ಲರನ್ನೂ ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮಾಂತ್ರಿಕ ಶಕ್ತಿ. ನನ್ನ ಬದುಕಿಗೂ ಶಕ್ತಿ ನಿನ್ನ ಪ್ರೀತಿ. ಸ್ನೇಹದ ದಿನದ ಹಾರ್ದಿಕ ಶುಭಾಶಯಗಳು
• ನನ್ನ ಒಳ್ಳೆಯ ಹಾಗೂ ಕೆಟ್ಟ ಸಮಯದಲ್ಲೂ ಜೊತೆಗಿದ್ದು ಬಲ ನೀಡಿದ ನಿನಗೆ ನನ್ನ ಧನ್ಯವಾದ… ನಿನ್ನ ಸ್ನೇಹವೇ ನನ್ನ ಬದುಕಿಗೆ ಬಲ. ನಿನ್ನಂತಹ ಫ್ರೆಂಡ್ ಪಡೆದ ನಾನೇ ಧನ್ಯ. ಹ್ಯಾಪಿ ಫ್ರೆಂಡ್ಶಿಪ್ಡೇ
• ಯಾರು ನನ್ನನ್ನು ಬಿಟ್ಟು ಹೋದರೂ ನೀನು ಜೊತೆಗಿರುವೆ ಎಂಬ ಧೈರ್ಯ ನನ್ನದು… ನಿನಗೆ ಸ್ನೇಹದ ದಿನದ ಶುಭಾಶಯಗಳು

Nimma Suddi
";