This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಎಲ್ಲ ಕಡೆ ಕೇಳ್ತಾರೆ, ಈ ಸಲ ನಿಂತರೆ ನೀವು ಕೇಂದ್ರದಲ್ಲಿ ಮಂತ್ರಿ ಆಗ್ತಿರಿ ಎಂದು : ಎಚ್‌ಡಿ ಕುಮಾರಸ್ವಾಮಿ

ಎಲ್ಲ ಕಡೆ ಕೇಳ್ತಾರೆ, ಈ ಸಲ ನಿಂತರೆ ನೀವು ಕೇಂದ್ರದಲ್ಲಿ ಮಂತ್ರಿ ಆಗ್ತಿರಿ ಎಂದು : ಎಚ್‌ಡಿ ಕುಮಾರಸ್ವಾಮಿ

ಹಾಸನ : ರಾಜ್ಯ ಬಿಟ್ಟು ನನ್ನ ಏಕೆ ಕಳಿಸ್ತೀರಿ, ನಾನು ರಾಜ್ಯದಲ್ಲಿ ಇರೋಣ ಅಂತ ಇದ್ದೇನೆ. ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ನಾನು ಇದುವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಈ ಮೂಲಕ ತಮ್ಮ ಸ್ಪರ್ಧೆಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.ಹಾಸನ ತಾಲೂಕಿನ ಚನ್ನಂಗಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಬೇಕು ಅಂತ ನಿಮಗೆ ಆಸೆ ಇದೆಯಾ? ರಾಜ್ಯ ಬಿಟ್ಟು ನನ್ನ ಏಕೆ ಕಳಿಸ್ತೀರಿ. ನಾನು ರಾಜ್ಯದಲ್ಲಿ ಇರೋಣ ಅಂತ ಇದ್ದೇನೆ. ಎಲ್ಲ ಕಡೆ ಕೇಳ್ತಾರೆ, ಈ ಸಲ ನಿಂತರೆ ನೀವು ಕೇಂದ್ರದಲ್ಲಿ ಮಂತ್ರಿ ಆಗ್ತಿರಿ ಎಂದರು.

ರಾಜ್ಯಕ್ಕೆ ಒಳ್ಳೆಯದಾಗುತ್ತೆ ನೀವು ನಿಲ್ಲಬೇಕು, ನಿಲ್ಲಬೇಕು ಅಂತಾರೆ. ನಾನು ಆ ವಿಷಯದಲ್ಲಿ ಈ ಕ್ಷಣದವರೆಗೂ ಯಾವುದೇ ತೀರ್ಮಾನ ಮಾಡಿಲ್ಲ.ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲೂ ನೀವೇ ನಿಲ್ಲಬೇಕು ಅಂತಾರೆ. ಇಲ್ಲಿ ನಮ್ಮ ಹಾಸನ ಜಿಲ್ಲೆಯಲ್ಲಿ ದೇವೇಗೌಡರು ನಿಲ್ಲದೇ ಇದ್ದರೆ ನೀವೇ ಬಂದುಬಿಡಿ ಅಂತಾರೆ ಎಂದು ತಿಳಿಸಿದರು.

";