ಬೆಂಗಳೂರು: ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ, ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದರು.
ಇದರ ನಡುವೆ ಬಸವಣ್ಣನವರ ವಚನ ಹೇಳಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದು,ಕೇರಳದ ರಾಜರಾಜೇಶ್ವರಿ ದೇವಸ್ಥಾನ ಬಳಿ ದೊಡ್ಡ ಕುಟುಂಬದವರು ಮಾಟ ಮಂತ್ರ ಮಾಡಿಸಿದ್ದಾರೆಂದು ಹೇಳಿದ್ದಾರೆ ಎಂದು ವಿವರಿಸಿದರು.
ಮಾಟ ಮಂತ್ರದ ಬಗ್ಗೆ ದಾಖಲೆ ಕೊಡುತ್ತೇವೆ ಅಂತಾರೆ. ನಮ್ಮಲ್ಲಿ ಇದೆಲ್ಲ ನಡೆಯೊಲ್ಲಾ ಅಂತಾ ಕೇರಳ ಸರ್ಕಾರ ಚೀಮಾರಿ ಹಾಕಿದೆ. ಕುರಿ ಕೋಳಿ ಹೊಡೆದ ಬಗ್ಗೆ ಎಸ್ಐಟಿ ರಚನೆ ಮಾಡಲಿ. ಮಾಟ ಮಾಡಿಸಿರೋರು ರಾಜಕೀಯವಾಗಿ ದೊಡ್ಡ ಕುಟುಂಬ ಅಂತಾರೆ ಎಂದರು.
‘ಕೈ’ ಸರ್ಕಾರ ತೆಗೆಯೋಕೆ ಯಾರೋ ಕುರಿ & ಕೋಳಿ ಬಲಿ ಕೊಟ್ಟಿದ್ದಾರೆ. ಕುರಿ, ಕೋಳಿ ಯಾರು ಹೊಡೆದಿದ್ದಾರೆಂದು ಡಿಸಿಎಂ ಡಿಕೆ ಹೇಳಿದ್ದಾರೆ. ಅದಕ್ಕೂ ಎಸ್ಐಟಿ ತನಿಖೆ ಮಾಡಿಸಿ ಎಂದ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟಿ ನೀಡಿದರು.
ನಾನು ಕೇರಳಕ್ಕೆ ಹೋಗಿದ್ದು ಮಾಟ ಮಂತ್ರಕ್ಕೆ ಎಂದು ಹೇಳಿದ್ದಾರೆ. ನಾನು ನನ್ನ ಮೊಮ್ಮಗನ ಜೊತೆ ಕಾಲ ಕಳೆಯಲು ಹೋಗಿದ್ದೆ. ಗುಪ್ತಚರ ಮೂಲಕ ನನ್ನನ್ನು ಹುಡುಕುವ ಕೆಲಸ ಮಾಡಿದ್ರು. ಈ ವೇಳೆ ಅವರಿಗೆ ನಾನು ಕಬಿನಿಯಲ್ಲಿ ಇರೋ ವಿಚಾರ ಗೊತ್ತಾಗಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.