ಮೈಸೂರು: ಬಿಜೆಪಿ – ಜೆಡಿಎಸ್ ಮೈತ್ರಿಗೂ ಪೆನ್ ಡ್ರೈವ್‌ಗೂ ಸಂಬಂಧ ಇಲ್ಲ. ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರುತ್ತಿರಲಿಲ್ಲ. ಇನ್ನು ಈಗ ಇರ್ತಾನಾ? ಪೆನ್ ಡ್ರೈವ್ ಪ್ರಕರಣದಿಂದ ದೇವೇಗೌಡರ ಫ್ಯಾಮಿಲಿ ಗೆ ಸ್ವಲ್ಪ ಡ್ಯಾಮೆಜ್ ಆಗಿರೋದು ಸತ್ಯ. ಪ್ರಜ್ವಲ್ ಎಚ್.ಡಿ. ರೇವಣ್ಣನ ಸಂಪರ್ಕದಲ್ಲೂ ಇಲ್ಲ. ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ, ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಅಂತಾ ಇವರು ಸುದ್ದಿ ಹಬ್ಬಿಸಿ ಬಿಡುತ್ತಾರೆ. ಯಾವ ಗ್ರಹಚಾರ ನಮಗೆ’? ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಇದೇ ಸಂದರ್ಭದಲ್ಲಿ ಬೆಳೆ ಹಾನಿಯ ಬಗ್ಗೆ ಮಾತನಾಡಿದ್ದಾರೆ. ‘ ರಾಜ್ಯದ ಹಲವೆಡೆ ಬೆಳೆ ನಾಶವಾಗಿದೆ. ಸರಕಾರ ಹೇಳಿಕೆಗಳಿಗೆ ಮಾತ್ರ ಸಿಮೀತವಾಗಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಆಗುತ್ತಿವೆ. ಸರಕಾರದ ಗಮನಕ್ಕೆ ಈ ವಿಷಯ ಇದೆಯೋ ಇಲ್ಲವೋ ಗೊತ್ತಿಲ್ಲ. ಮದ್ದೂರು, ಗದಗನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳುವ ಕೆಲಸ ಆಗಿಲ್ಲ. ಬಿಜೆಪಿಯನ್ನು ದೂರುವುದಷ್ಟೆ ಕಾಂಗ್ರೆಸ್ ಕೆಲಸ ಆಗಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಓರ್ವ ಮೃತಪಟ್ಟಿದ್ದಾನೆ. ನಾಲ್ಕು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದ ಸಿದ್ದರಾಮಯ್ಯ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದು ಇದರಲ್ಲೆ ಗೊತ್ತಾಗುತ್ತಿದೆ. ಮೈಸೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನಿದೆ ಹೇಳಲಿ? ಸಿಎಂ ರಾಜಕೀಯದ ಕೊನೆ ಹಂತದಲ್ಲಿದ್ದಾರೆ ಈಗಲಾದರೂ ಮೈಸೂರು ಜಿಲ್ಲೆ ಅಭಿವೃದ್ಧಿ ಮಾಡಲಿ’ ಎಂದರು.
ಪ್ರಜ್ವಲ್ ವಿದೇಶಕ್ಕೆ ಹೋಗುವುದು ಅವತ್ತೇ ಗೊತ್ತಾಗಿದ್ದರೆ ನಾನು ಅವತ್ತೆ ಅದನ್ನು ನಿಲ್ಲಿಸುತ್ತಿದ್ದೆ. ಪ್ರಜ್ವಲ್ ಭಯ ಬಿದ್ದಿರಬಹುದು. ಅದಕ್ಕೆ ಬರುತ್ತಿಲ್ಲ. ಪ್ರಜ್ವಲ್ ಗೆ ಹೇಳ್ತಿದ್ದಿನಿ, ಈ ವಿಚಾರದಲ್ಲಿ ವಕೀಲರ ಸಲಹೆ ಬೇಡ. ನೈತಿಕ ಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಾಸ್ ಬಾ’ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು.