ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ವರ್ಗಾವಣೆಗೊಂಡಿದ್ದಾರೆ. ಗದಗ ಜಿಲ್ಲೆಯ ನರೇಗಲ್ ಪಟ್ಟಣ ಪಂಚಾಯಿತಿಗೆ ಅವರನ್ನು ವರ್ಗಾವಣೆಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಜು.೧೩ರಂದು ಆದೇಶಿಸಿದ್ದಾರೆ.
ಅಮೀನಗಡ ಪಟ್ಟಣ ಪಂಚಾಯಿತಿಗೆ ಆ.೧೩, ೨೦೨೧ರಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಇಲ್ಲಿ ೨ ವರ್ಷ ೧೧ ತಿಂಗಳ ಸೇವೆ ಸಲ್ಲಿಸಿದ ಮಹೇಶ ನಿಡಶೇಶಿ ಈವರೆಗಿನ ೮ ಮುಖ್ಯಾಕಾರಿಗಳ ಪೈಕಿ ಸುದೀರ್ಘ ಸೇವೆ ಸಲ್ಲಿಸಿದ್ದಂತಾಗಿದೆ.