ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆಯಿಂದ ಗುಡುಗು, ಮಿಂಚು ಸಹಿತ ಮಳೆಯಾಗಿದೆ.
ಬಾಗಲಕೋಟೆಯಲ್ಲಿ ಗುಡುಗು ಸಹಿತ ಜೋರಾದ ಮಳೆಯಾಯಿತು. ಬಹು ದಿನಗಳ ನಂತರ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಯಿತು.
ಜಿಲ್ಲೆಯ ಮುಧೋಳ, ಬೀಳಗಿ, ಬನಹಟ್ಟಿ, ಮಹಾಲಿಂಗಪುರ, ತೇರದಾಳ, ಕೆರೂರ, ಬಾದಾಮಿ ಸೇರಿದಂತೆ ವಿವಿಧೆಡೆ ಕೆಲಕಾಲ ಮಳೆಯಾಯಿತು. ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸುವ ಕಾರ್ಯಕ್ಕೆ ಮಳೆ ಅಡ್ಡಿಯಾಗಲಿದೆ.
ಹುನಗುಂದ ಹಾಗೂ ಅಮೀನಗಡ ಭಾಗದಲ್ಲಿ ರಾತ್ರಿಯಿಡಿ ಬರ್ಜರಿ ಮಳೆ ಸುರಿಯಿತು. ಈ ಮಧ್ಯೆ ವಿದ್ಯುತ್ ಕಣ್ಣಾಮುಚ್ಚಾಲೆಯೂ ಆರಂಭವಾಯಿತು