This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsPolitics NewsState News

ಹೇಮರೆಡ್ಡಿ-ವೇಮನ ದೇವಾಲಯ ನಿರ್ಮಾಣಕ್ಕೆ ಅಭಯಹಸ್ತ

ಹೇಮರೆಡ್ಡಿ-ವೇಮನ ದೇವಾಲಯ ನಿರ್ಮಾಣಕ್ಕೆ ಅಭಯಹಸ್ತ

ಸೇಡಂ,

ಶಿವಶರಣೆ, ಮಹಾಸಾಧ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ಶ್ರೀ ವೇಮನ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಹೊರವಲಯದ ರಂಜೋಳ ಕ್ರಾಸ್ ಬಳಿಯಿರುವ ಹೇಮ-ವೇಮ ದೇವಾಲಯದ ಪ್ರಾಂಗಣದಲ್ಲಿ ನೂತನ ಸಚಿವರು ಮತ್ತು ಶಾಸಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರೆಡ್ಡಿ ಸಮುದಾಯವು ಉಳಿದೆಲ್ಲ ಜನಸಮುದಾಯದವರನ್ನು ಕರೆದುಕೊಂಡು ಹೋಗುವ ವಿಶಾಲ ಹೃದಯವಂತರು. ಕೊಡುಗೈ ದಾನಿಗಳು. ಅಂತಹ ಸಮುದಾಯದವರು ನಿರ್ಮಿಸುತ್ತಿರುವ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತಾವಿರುವುದಾಗಿ ಅಭಯ ನೀಡಿದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ದರ್ಶನಪುರ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿಯೇ ಇಂತಹ ಅಭೂತಪೂರ್ವ ದೇವಾಲಯ ನಿರ್ಮಿಸುತ್ತಿರುವದು ನಿಜಕ್ಕೂ ಶ್ಲಾಘನೀಯ ಕಾರ್ಯ. ಯಾದಗಿರಿಯ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ ಅವರೊಳಗೊಂಡು ೧೫ ಲಕ್ಷ ರೂ.ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಹಾಗೂ ಸರಕಾರ ಮಟ್ಟದಲ್ಲಿ ಸಹಾಯ ನೀಡುವಲ್ಲಿ ಸಚಿವರೊಂದಿಗೆ ತಾವು ಕೈಜೋಡಿಸುವುದಾಗಿ ಹೇಳಿದರು.

ಯಾದಗಿರಿಯ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ ಮಾತನಾಡಿದರು. ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ನಾಗಭೂಷಣರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸದಾಶಿವರೆಡ್ಡಿ ಗೋಪನಪಲ್ಲಿ ಸ್ವಾಗತಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷರಾದ ಹೇಮರೆಡ್ಡಿ ಪಾಟೀಲ ಕಲಕಂ ಪ್ರಾಸ್ತಾವಿಕ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ ರಂಜೋಳ ಮನವಿ ಪತ್ರ ಓದಿ ಸಚಿವರಿಗೆ, ಶಾಸಕರಿಗೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಹಿಪಾಲರೆಡ್ಡಿ ಮುನ್ನೂರ್ ನಿರೂಪಿಸಿದರು. ಹೇಮ ವೇಮ ಟ್ರಸ್ಟ್ ಅಧ್ಯಕ್ಷ ಶರಣರೆಡ್ಡಿ ಜಿಲ್ಲೇಡಪಲ್ಲಿ, ಅನಂತರೆಡ್ಡಿ ಪಾಟೀಲ ಬಟಗೇರಾ, ಶಂಭುರೆಡ್ಡಿ ಮದ್ನಿ, ಶಿವಶರಣರೆಡ್ಡಿ ಪಾಟೀಲ, ಪರ್ವತರೆಡ್ಡಿ ಪಾಟೀಲ ನಾಮವಾರ, ಶಿವಲಿಂಗರೆಡ್ಡಿ ಬೆನಕನಳ್ಳಿ, ನಾಗರೆಡ್ಡಿ ದೇಶಮುಖ, ಶ್ರೀನಿವಾಸರೆಡ್ಡಿ ದಾಮೋದರರೆಡ್ಡಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Nimma Suddi
";