ಹಿರೇಮಾಗಿ ಗ್ರಾಪಂ ನಿರ್ಲಕ್ಷಕ್ಕೆ ಆಕ್ರೋಶ
ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮ ಪಂಚಾಯಿತಿ ಸ್ವಚ್ಚತೆ ವಿಷಯದಲ್ಲಿ ನಿರ್ಲಕ್ಷ ವಹಿಸುತ್ತಿದೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ವಾರ್ಡ್ ನಂಬರ್ ೨ ರ ಮನೆಯೊಂದರಲ್ಲಿ ಏ.೪ರಂದು ವಿವಾಹ ಕಾರ್ಯಕ್ರಮವಿತ್ತು.
ಚರಂಡಿ ಸ್ವಚ್ಛಗೊಳಿಸುವಂತೆ ಕಳೆದ 15 ದಿನದಿಂದ ಚರಂಡಿ ಸ್ವಚ್ಛಗೊಳಿಸಲು ಗ್ರಾಪಂ ಕಚೇರಿಗೆ ಅಲೆದಾಡಲಾಗಿತ್ತು.
ವಿವಾಹ ಸಮೀಪಿಸುತ್ತಿದ್ದರಿಂದ ವಿವಾಹದ ನಂತರ ಸ್ವಚ್ಚಗೊಳಿಸಲು ಸೂಚಿಸಿದ್ದರು.
ಹೀಗಿದ್ದರೂ ಸೋಮವಾರ ಮಧ್ಯಾಹ್ನ ದಿಡೀರ್ ಆಗಿ ಚರಂಡಿ ಸ್ವಚ್ಚಗೊಳಿಸಿ ತ್ಯಾಜ್ಯ ಹೊರ ತೆಗೆದು ಅಲ್ಲಿಯೇ ಬಿಸಾಕಿ ಹೋಗಿದ್ದರು.
ಇದರಿಂದ ಆಕ್ರೋಶಗೊಂಡ ಅಲ್ಲಿನ ನಿವಾಸಿಗಳು ಹಾಗೂ ಕುಟುಂಬಸ್ಥರು ಸೇರಿ ತ್ಯಾಜ್ಯ ವನ್ನೆಲ್ಲ ಸ್ವಚ್ಛಗೊಳಿಸಿದರು.
ಗ್ರಾಪಂ ಪಿಡಿಒ ಅವರಿಗೆ ಹಲವು ಬಾರಿ ವಿನಂತಿಸಿದರೂ ಉದ್ಧಟತನ ತೋರಿಸುತ್ತಾರೆ. ಜನರೊಂದಿಗೆ ಅವರ ವರ್ತನೆ ಸರಿಯಿಲ್ಲ ಎಂದು ಹಿರೇಮಾಗಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.