This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ರಾಮ ಮನಗೂಳಿ ಅವರಿಗೆ ಕಾನಿಪದಿಂದ ಶ್ರದ್ಧಾಂಜಲಿ

ರಾಮ ಮನಗೂಳಿ ಅವರಿಗೆ ಕಾನಿಪದಿಂದ ಶ್ರದ್ಧಾಂಜಲಿ

ಬಾಗಲಕೋಟೆ

ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ನಾಡಿನ ಹಿರಿಯ ಪತ್ರಕರ್ತ ರಾಮ ಮನಗೂಳಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕದಿಂದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪತ್ರಿಕಾ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪತ್ರಕರ್ತರ ರಾಮ ಮನಗೂಳಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಒಂದು ನಿಮಿಷ ಮೌನಚರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಮಹೇಶ ಅಂಗಡಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರಾಮ ಮನಗೂಳಿ ಅವರು ತಮ್ಮ ಸ್ಪಷ್ಟ ನಿಲುವಿನ ಬರಹದೊಂದಿಗೆ ಲೇಖನಗಳನ್ನು ಬರೆಯುತ್ತಿದ್ದರು.

ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡ ಅವರು ಪತ್ರಕರ್ತ ಕುಟುಂಬಗಳಿಗೆ ಅನೇಕ ರೀತಿಯಲ್ಲಿ ಮಾನವಿಯ ಸ್ಪಂದನೆಯನ್ನು ನೀಡಿದ್ದಾರೆ. ಪತ್ರಕರ್ತರ ಸಂಘಟನೆ ವಿಚಾರದಲ್ಲಿ ಸಾಧಕ ಬಾದಕಗಳ ಬಗ್ಗೆ ಚರ್ಚೆ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಪತ್ರಕರ್ತರ ಸಂಘದ ಚುನಾವಣೆ ಬಂದಾಗ ಯಾವುದೇ ಕಾರಣಕ್ಕೂ ಚುನಾವಣೆಯಾಗಬಾರದು ಅವಿರೋಧವಾಗಿ ಆಯ್ಕೆಯಾಗಬೇಕು ಎಂದು ಚಿಂತಿಸುತ್ತಿದ್ದರು.ಅವರ ವಿಚಾರಧಾರೆಗಳು ಯುವ ಪತ್ರಕರ್ತರಿಗೆ ಮಾರ್ಗದರ್ಶಕವಾಗಿದ್ದರು ಎಂದು ಹೇಳಿದರು.

ಹಿರಿಯ ಪತ್ರಕರ್ತ ಈಶ್ವರ ಶೆಟ್ಟರ್ ಮಾತನಾಡಿ, 40 ವರ್ಷಗಳ ಕಾಲ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ತಮ್ಮದೇ ವಿಶಿಷ್ಟವಾದ ಹೆಜ್ಜೆ ಗುರುತು ಮೂಡಿಸಿದ ರಾಮ ಮನಗೂಳಿ ಅವರು ಜಿಲ್ಲೆಯ ಅಭಿವೃದ್ಧಿ ವಿಚಾರವನ್ನು ತಮ್ಮ ಬರಹದ ಮೂಲಕ ಪ್ರಕಟಿಸುತ್ತಿದ್ದರು. ಜಿಲ್ಲೆಯ ಜೀವನಾಡಿ ಆಗಿರುವ ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದ ಅವರು, ಅನ್ಯಾಯವಾದಾಗ ಬರಹದ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರು.

ಎಲ್ಲ ಕ್ಷೇತ್ರದ ಬಗ್ಗೆ ಆಳವಾದ ಮಾಹಿತಿಯನ್ನ ಪಡೆದುಕೊಂಡಿದ್ದ ರಾಮ ಮನಗೂಳಿ ಅವರು, ಉಪಕಾರ ಸ್ಮರಣೆಯ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರ ನಿಧನದಿಂದ ಜಲ್ಲಿಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಕಾನಿಪ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ದಲಭಂಜನ ಮಾತನಾಡಿ, ಹಿರಿಯ ಪತ್ರಕರ್ತ ರಾಮ ಮನಗೂಳಿ ಅವರು ನಿಧನರಾಗಿರುವುದು ನಮಗೆಲ್ಲ ನೋವು ತಂದಿದೆ. ಅವರನ್ನ ನಿತ್ಯ ಸ್ಮರಣೆ ಮಾಡಿಕೊಂಡು ಅವರ ಹೆಸರನ್ನ ಅಜರಾಮರವಾಗಿ ಉಳಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡುವ ಕುರಿತು ಆಲೋಚನೆ ಮಾಡಲಾಗುವುದು. ಪತ್ರಕರ್ತರು ತೊಂದರೆಗೆ ಒಳಗಾದಾಗ ಅವರ ಕುಟುಂಬಗಳಿಗೆ ಸಾಕಷ್ಟು ಮಾನವೀಯ ದೃಷ್ಟಿಯ ಕೆಲಸ ಮಾಡಿದ್ದಾರೆ.

ಅವರ ನಿಧನದಿಂದ ಸಂಘಟನೆಗೆ ಮತ್ತು ಜಿಲ್ಲಾ ಪತ್ರಿಕಾ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಉಮೇಶ ಪೂಜಾರಿ ಅವರು ಇದೇ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಬರಹದ ಮೂಲಕ ಕೊಡುಗೆ ನೀಡಿದ ಹಿರಿಯ ಪತ್ರಕರ್ತ ರಾಮ್ ಮನಗೂಳಿ ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲು, ಐವತ್ತು ಸಾವಿರ ರೂಗಳ ದತ್ತಿ ಘೋಷಣೆ ಮಾಡಿದರು.

ಚಂದ್ರಶೇಖರ ಜಿಗಜಿನ್ನಿ , ಸುಭಾಷ್ ಹೊದ್ಲೂರ, ರವಿರಾಜ್ ಗಲಗಲಿ, ಆನಂದ್ ಜಿಗಜಿನ್ನಿ, ಶ್ರೀಶೈಲ್ ಬಿರಾದಾರ, ಮುತ್ತಣ್ಣ ಬೆನ್ನೂರ, ಸಂತೋಷ್ ದೇಶಪಾಂಡೆ, ರವಿ ಹಳ್ಳೂರ, ರವಿ ಮುಖಿ , ಜಗದೀಶ ಗಾಣಿಗೇರ, ಪ್ರಕಾಶ ಗುಳೇದಗುಡ್ಡ,ಅಶೋಕ್ ಶೆಟ್ಟರ, ಬಸವರಾಜ್ ಹವಾಲ್ದಾರ, ಮಂಜುನಾಥ ತಳವಾರ ಸೇರಿದಂತೆ ಇತರರು ಸಭೆಯಲ್ಲಿ ಮಾತನಾಡಿದರು.ಎಲ್ಲಾ ಮಾಧ್ಯಮದ ಸಂಪಾದಕರು, ವರದಿಗಾರರು ಹಾಗೂ ಛಾಯಾಗ್ರಾಹಕರು ಉಪಸ್ಥಿತಿರಿದ್ದರು.

Nimma Suddi
";