ಬಾಗಲಕೋಟೆ
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವು ಜನವರಿ 11 ರಿಂದ 13 ವರೆಗೆ ಮೂರು ದಿನಗಳ ಕಾಲ ಅಂತರ ಮಹಾವಿದ್ಯಾಲಯಗಳ 14ನೇ ಯುವಜನೋತ್ಸವ ಕಾರ್ಯಕ್ರಮವನ್ನು ವಿಜಯ ಕಲಾ ಸಂಗಮ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ತೋವಿವಿಯ ಅಡಿಯಲ್ಲಿರುವ ಒಟ್ಟು ಒಂಬತ್ತು ಮಹಾವಿದ್ಯಾಲಯಗಳಿಂದ ಸುಮಾರು 300 ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಯುವಜನೋತ್ಸವದಲ್ಲಿ ಐದು ಬಗೆಯ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸಂಗೀತ, ಸಮೂಹ ಜಾನಪದ ನೃತ್ಯ, ರಂಗ ನಾಟಕ, ಸಾಹಿತ್ಯ ಹಾಗೂ ಲಲಿತಕಲೆಗಳನ್ನು ಒಳಗೊಂಡ ಸುಮಾರು 18 ಬಗೆಯ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಶ್ರೇಷ್ಠ ಪ್ರದರ್ಶಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯಗಳ ಯುವಜನೋತ್ಸವಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ.
ಯುವಜನೋತ್ಸವದ ಅಂಗವಾಗಿ ಜನವರಿ 11 ರಂದು 8 ಗಂಟೆಗೆ ನವನಗರದ ಕಾಳಿದಾಸ ವೃತ್ತದಿಂದ ಸಾಂಸ್ಕøತಿಕ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.
ಮೆರವಣಿಗೆಗೆ ತೋವಿವಿಯ ಕುಲಪತಿ ಡಾ.ಎನ್.ಕೆ.ಹೆಗಡೆ ಚಾಲನೆ ನೀಡುವರು. ಮೆರವಣಿಗೆ ಕಾಳಿದಾಸ ವೃತ್ತದಿಂದ ತಾಂತ್ರಿಕ ಮಹಾವಿದ್ಯಾಲಯ ವೃತ್ತ, ವಿದ್ಯಾಗಿರಿಯ ಮಾರ್ಗವಾಗಿ ಎಂ.ಬಿ.ಎ. ಮಹಾವಿದ್ಯಾಲಯ ವೃತ್ತದ ವರೆಗೆ ನಡೆಯಲಿದೆ.
ನಂತರ 10ಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಖ್ಯಾತ ಜಾನಪದ ವಿದ್ವಾಂಸ ಡಾ.ವೆಂಕಪ್ಪ ಸುತಗೇಕರ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ತೋವಿವಯ ಕುಲಪತಿ ಡಾ.ಎನ್.ಕೆ.ಹೆಗಡೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪಿ.ಹಚ್.ಪೂಜಾರ, ತೋವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ತಿಮ್ಮಣ್ಣ ಅರಳಿಮಟ್ಟಿ, ಡಾ.ರವೀಂದ್ರ ಮುಲಗೆ, ಡಾ.ಟಿ.ಬಿ.ಅಳ್ಳೊಳ್ಳಿ ಭಾಗವಹಿಸುವರು. ಜನವರಿ 11 ರಿಂದ 13 ವರೆಗೆ ಸಂಜೆ 5 ಗಂಟೆ ವರೆಗೆ ವಿವಿಧ ಮಹಾವಿದ್ಯಾಲಯಗಳ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 13 ರಂದು ಸಂಜೆ 4ಕ್ಕೆ ಯುವಜನೋತ್ಸವದ ಸಮಾರೋಪ ಸಮಾರಂಭವು ನಡೆಯಲಿದು,್ದ ತೋವಿವಿಯ ಕುಲಪತಿ ಡಾ.ಎನ್.ಕೆ.ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲತಪಿ ಡಾ.ಕೆ.ಎನ್.ಕಟ್ಟಿಮನಿ, ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಡಾ.ಎಂ.ಶಿವಮೂರ್ತಿ, ಡೀನ್, ಸ್ನಾತಕೋತ್ತರ ಡಾ. ರವೀಂದ್ರ ಮುಲಗೆ, ಡಾ.ಟಿ.ಬಿ.ಅಳ್ಳೊಳ್ಳಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.