ವಿಜಯಪುರ: 14 ಲೋಕಸಭಾ ಕ್ಷೇತ್ರಗಳ ನಡೆದ ಎರಡನೇ ಹಂತದ ಚುನಾವಣೆಗೆ ಎಲ್ಲೆಡೆ ಮತೋತ್ಸವ ಕಂಡುಬಂದಿದೆ. 227 ಕಲಿಗಳ ಭವಿಷ್ಯ ಇವಿಎಂ ಸೇರಿದೆ.
ಬಾಗಲಕೋಟೆ ಶೇ.72.64, ವಿಜಯಪುರ ಶೇ.66.32, ವಿಜಯನಗರ ಶೇ.72.24, ಶಿವಮೊಗ್ಗ ಶೇ.72.24, ಬೆಳಗಾವಿ ಶೇ.71.38, ಚಿಕ್ಕೋಡಿ ಶೇ.76.25, ದಾವಣಗೇರೆ ಶೇ.77, ಬಳ್ಳಾರಿ ಶೇ.73.59, ಹಾವೇರಿ ಶೇ.72, ರಾಯಚೂರ ಶೇ.62ರಷ್ಟು ಮತದಾನವಾಗಿದೆ.
ಬಿರು ಬಿಸಿಲಿನ ನಡುವೆಯೂ ಎಲ್ಲೆಡೆ ಮತೋತ್ಸಾಹ ಕಂಡುಬಂದಿದ್ದು,, ಸವದತ್ತಿಯಲ್ಲಿ ಕಾಂಗ್ರೆಸ್ ಏಜೆಂಟ್‌ನ ಮೇಲೆ ಹಲ್ಲೆ,, ಬಳ್ಳಾರಿಯಲ್ಲಿ ಕಾರ್ಪೋರೇಟರ್‌ನಿಂದ ಮತ ಬಹಿರಂಗದ ಪ್ರಕರಣ ದಾಖಲು, ಕೆಲವು ಕಡೆ ವಾಗ್ವಾದ, ಇನ್ನೂ ಕೆಲವು ಕಡೆ ಮತಯಂತ್ರದಲ್ಲಿನ ದೋಷ ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಬಿಸಿಲಿನ ತಾಪ 43ರಷ್ಟಿದ್ದರೂ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಕೆಲವು ಕಡೆ ಬೆಳಗ್ಗೆ ಮತದಾನ ಪ್ರಮಾಣ ಹೆಚ್ಚಾದರೆ, ಇನ್ನೂ ಕೆಲವು ಕಡೆ ಸಂಜೆ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಇನ್ನೂ ಮಧ್ಯಾಹ್ನ ಬಿಸಿಲಿಗೆ ಮತದಾರರ ಎರಡು ಗಂಟೆಗಳ ಕಾಲ ಮತಗಟ್ಟೆ ಕಡೆಗೆ ಬರಲಿಲ್ಲ.
ಎಲ್ಲ ಕ್ಷೇತ್ರದಲ್ಲೂ ಮತದಾನ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳ ಕಂಡಿದೆ. ಇನ್ನೂ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಇರುವುದರಿಂದ ಸಂಜೆ ಬಿಸಿಲಿನ ಪ್ರಮಾಣ ತಗ್ಗಲಿದ್ದುಘಿ, ಇನ್ನಷ್ಟು ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಲಿದ್ದಾರೆ. ಇದು ಯಾವ ಪಕ್ಷಕ್ಕೆ,, ಯಾವ ಅಭ್ಯರ್ಥಿಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರವೂ ರಾಜಕೀಯ ವಲಯದಲ್ಲಿ ಜೋರಾಗಿಯೇ ನಡೆದಿದೆ.
14 ಮತಕ್ಷೇತ್ರಗಳಲ್ಲಿ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನ ನಡೆದಿದೆ. ಸಂಸದ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿಘಿ, ರಮೇಶ ಜಿಗಜಿಣಗಿ, ರಾಜು ಆಲಗೂರ ವಿಜಯಪುರದಲ್ಲಿಘಿ, ಪಿ.ಸಿ.ಗದ್ದಿಗೌಡರ ಬಾದಾಮಿಯಲ್ಲಿ ಮತದಾನ ಮಾಡಿದ್ದಾರೆ.