ಬೆಂಗಳೂರು: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿಗೆ ಕೊಡುವುದಾಗಿ ಗೃಹ ಸಚಿವ ಜಿ. ಪರಮೇಶ್ವರ ಸೂಚಿಸಿದರು.
ಮೇ 20ರಂದು ಅಂಜಲಿಯ ನಿವಾಸಕ್ಕೆ ಭೇಟಿ ನೀಡಿದ ಜಿ. ಪರಮೇಶ್ವರ, ಅಂಜಲಿ ಮನೆಯವರೊಂದಿಗೆ ಮಾತನಾಡಿ, ಘಟನೆಯ ಬಗ್ಗೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದರು. ಆನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವನ್ನು ಸಿಐಡಿಗೆ ವಹಿಸುವುದಾಗಿ ಘೋಷಿಸಿದರು.
ಇದೇ ವೇಳೆ, ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸಿದ ಅವರು, “ಎರಡು ಕೊಲೆ ಪ್ರಕರಣಗಳಲ್ಲಿ ಸಹ ತಾವು ಮಾಧ್ಯಮ ದವರು ಸೂಕ್ಷ್ಮವಾಗಿ ವರದಿ ಮಾಡಿದ್ದೀರಿ. ತಮಗೆ ಧನ್ಯವಾದಗಳು’’ ಎಂದರು.
ಇದೇ ವೇಳೆ, ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದರು.
ಕೊಲೆಯಾದ ಅಂಜಲಿ ಅಂಬಿಗೇರ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ ಎಂದ ಅವರು ನೇಹಾ ಹಾಗೂ ಅಂಜಲಿ ಕುಟುಂಬಸ್ಥರ ಜೊತೆಗೆ ಅಗತ್ಯ ಭರವಸೆ ನೀಡಿದ್ದೇನೆ ಎಂದರು.
ನೇಹಾ ಕೊಲೆಗೆ ಸಹ ನ್ಯಾಯ ಕೊಡುತ್ತೇವೆ.ಇದರ ಜೊತೆಗೆ ಅಂಜಲಿ ಕೊಲೆ ಪ್ರಕರಣವನ್ನ ಸಹ ಸಿಐಡಿ ತನಿಖೆಗೆ ಕೊಡುತ್ತೇನೆ ಜಿ. ಪರಮೇಶ್ವರ್ ಅವರ ಭೇಟಿಗೂ ಮುನ್ನ ಅಂಜಲಿ ಅವರ ಮನೆಗೆ ಭೇಟಿ ನೀಡಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಶಂಕರ ಮುನೇನಕೊಪ್ಪ ಅವರು, ಅಂಜಲಿ ಮನೆಯವರಿಗೆ ಸರ್ಕಾರ ಈವರೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಬೇಕು. ಜೊತೆಗೆ, ಅವರಿಗೆ ನಗದು ಪರಿಹಾರ ನೀಡಬೇಕು ಎಂದು ತಿಳಿಸಿದರು.