ಬೆಂಗಳೂರು: ಈ ವರ್ಷದ ಬಿರು ಬಿಸಿಲಿಗೆ ಎಲ್ಲರೂ ತತ್ತರಿಸಿ ಹೋಗಿದ್ದು, ಕೂಲ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿದ್ದ ಬೆಂಗಳೂರು ಈಗ ಹಾಟ್ ಸಿಟಿಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಜನರು ಮನೆಯಿಂದ ಹೊರಗಡೆ ಬಂದರೆ ಸಾಕು, ತಂಪಾಗಿರೋದಕ್ಕೆ ಎಂದು ಎಳನೀರು, ಜ್ಯೂಸ್ ಕುಡಿಯುತ್ತಿದ್ದಾರೆ. ಆದ್ರೆ ಮನೆಯಲ್ಲಿ ಮುಂಜಾನೆ ಬಿಸಿಲಿನ ಧಗೆಯಾದ್ರೆ ಸಂಜೆ ವೇಳೆಗೆ ಬಿಸಿ ಗಾಳಿಯಯಿಂದಾಗಿ ಫ್ಯಾನ್ ಹಾಕಿದರೂ ಪ್ರಯೋಜನವಾಗುವುದಿಲ್ಲ. ರಾತ್ರಿ ನಿದ್ದೆ ಮಾಡುವುದೂ ಕಷ್ಟವಾಗಿದೆ.
ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಏರುತ್ತಿದ್ದಂತೆ ಮನೆಗಳಲ್ಲಿ ಆರಾಮದಾಯಕವಾದ ವಾತಾವರಣ ನಿರ್ಮಾಣಕ್ಕೆ ಏರ್ ಕೂಲಿಂಗ್, ಎಸಿ ಅಪ್ಲಾಯನ್ಸ್ಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ಗ್ರಾಹಕರ ಆರೋಗ್ಯ ಮತ್ತು ನೈರ್ಮಲ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಕೂಲಿಂಗ್ ಅಪ್ಲಾಯನ್ಸ್ ಗೆ ಬೇಡಿಕೆ ದುಪ್ಪಾಟಗಿದೆ.
ಎಲ್ಲಿಯೂ ಎರ್ ಕೂಲರ್ ಹಾಗೂ ಎಸಿಗಳು ಸಿಗುತ್ತಿಲ್ಲ. ಯಾವ ಮಳಿಗೆಯಲ್ಲೂ ಸಿಗುತ್ತಿಲ್ಲ. ಅಷ್ಟು ಬೇಡಿಕೆ ಹೆಚ್ಚಾಗಿದೆ. ಯಾವ ಮಳಿಗೆಗೆ ಹೋದರೂ ಏರ್ ಕೂಲರ್ ಔಟ್ ಆಫ್ ಸ್ಟಾಕ್ ಎನ್ನುತ್ತಿದ್ದಾರೆ. ಪ್ಲಿಪ್ಕಾರ್ಟ್, ಅಮೇಜಾನ್ನಂತಹ ಇ ಮಾರ್ಕೆಟಿಂಗ್ ತಾಣಗಳಲ್ಲಿಯೂ ಔಟ್ ಆಫ್ ಸ್ಟಾಕ್ ತೋರಿಸುತ್ತಿವೆ. ಅಲ್ಲದೆ, ಆರ್ಡರ್ ಮಾಡಿದರೆ ಡೆಲೆವರಿ ಪಡೆಯಲು ಮೂರು ವಾರಗಳ ಕಾಲ ಕಾಯಬೇಕಾದ ಸ್ಥಿತಿ ಎದುರಾಗಿದೆ.
ಈ ವರ್ಷ ನಿರೀಕ್ಷೆಗೂ ಮೀರಿದ ತಾಪಮಾನ ಹಿನ್ನಲೆ ವಿಪರೀತ ಸೆಖೆಯ ಪರಿಣಾಮ ಕೂಲಿಂಗ್ ಅಪ್ಲಾಯನ್ಸ್ ಏರ್ ಕೂಲರ್, ಎಸಿಗಳು, ರೆಫ್ರಿಜರೇಟರ್ ಮತ್ತು ಫ್ಯಾನ್ ಗಳಿಗೆ ರಾಜ್ಯದಲ್ಲಿ ಬೇಡಿಕೆ ಹೆಚ್ಚಳವಾಗಿದೆ. ಒಂದು ಅಂದಾಜಿನ ಪ್ರಕಾರ ಕೂಲರ್ಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 60 ರಷ್ಟು ಬೇಡಿಕೆ ಹೆಚ್ಚಾಗಿದೆ.
ಏರ್ ಕೂಲರ್ ಹಾಗೂ ಎಸಿಗಳಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಕೂಲರ್ ಎಸಿಗಳು ಸಿಗದೆ ಜನರು ಪರದಾಡುವಂತಾಗಿದೆ ಎಂದು ಮಾಹಿತಿ ಕಂಡು ಬಂದಿದೆ.