ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಹಿರೇಮಾಗಿ ಗ್ರಾಮದಲ್ಲಿ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮೇ 23 ರಂದು ನಾನಾ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಾತ್ರೆ ನಿಮಿತ್ತ ಮೇ 19 ರಿಂದ ನಾನಾ ಪೂಜಾ ಕಾರ್ಯಕ್ರಮ ಆರಂಭವಾಗಿದ್ದು ಚನಬಸಪ್ಪಜ್ಜನವರ ಸಮ್ಮುಖದಲ್ಲಿ ಮೇ 23 ರಂದು ಜಾತ್ರೆ ನಿಮಿತ್ತ ಕಳಸ, ಪಲ್ಲಕ್ಕಿ, ಬಾಳೆಕಂಬ ಮೆರವಣಿಗೆ, ಹೇಳಿಕೆ ಹೇಳುವುದು, ಮಲಪ್ರಭೆ ನದಿಯಲ್ಲಿ ಮಜ್ಜನದ ನಂತರ ದೇವಸ್ಥಾನ ಪ್ರವೇಶ ಕಾರ್ಯಕ್ರಮ ನಡೆಯಲಿದೆ.
ಅಕ್ಕಿಪಾಯಸ, ಅಗ್ನಿಕುಂಡದ ನಂತರ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮೇ 27 ರಂದು ಗ್ರಾಮದೇವತೆ ಜಾತ್ರೆ, 28 ರಂದು ಕಂಟೆಮ್ಮದೇವಿ ಕೊಂಡಾ ತುಂಬುವ ಕಾರ್ಯಕ್ರಮ ನೆರವೇರಲಿವೆ. ಜಾತ್ರೆ ಅಂಗವಾಗಿ ಮೇ 23, 24, 27 ರಂದು ನಾಟಕ ಪ್ರದರ್ಶನ, 24 ಹಾಗೂ 25 ರಂದು ಬಯಲು ಜಂಗಿ ನಿಕಾಲಿ ಕುಸ್ತಿ ಹಾಗೂ ಜೋಳದ ಚೀಲ ಹೊರುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.