This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಹುನಗುಂದ ಕಾನಿಪ:ಬಂಡರಗಲ್ ಅಧ್ಯಕ್ಷ

ಪ್ರಧಾನ ಕಾರ್ಯದರ್ಶಿ ಪುನರಾಯ್ಕೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೧-೨೨ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಮಲ್ಲಿಕಾರ್ಜುನ ಬಂಡರಗಲ್ಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯವಾಣಿ ವರದಿಗಾರ ಚಂದ್ರಶೇಖರ ಗಂಗೂರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಇತ್ತೀಚೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾನಿಪ ನಿಕಟಪೂರ್ವ ಅಧ್ಯಕ್ಷ ಅಶೋಕ ಹಂದ್ರಾಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ವರದಿಗಾರ ರವಿ ಕೆಲೂರ, ವಿಜಯ ಸಿಂಗದ, ಹೊಸದಿಗಂತ ವರದಿಗಾರ ರಮೇಶ ತಾರಿವಾಳ ಆಯ್ಕೆ ಆದರು. ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ಬಸವರಾಜ ನಿಡಗುಂದಿ, ಸಹಕಾರ್ಯದರ್ಶಿಯಾಗಿ ವಿಜಯವಾಣಿಯ ಎಫ್.ಎಂ.ಪಿಂಜಾರ, ಖಚಾಂಚಿಯಾಗಿ ಉದಯವಾಣಿ ಪತ್ರಿಕೆಯ ಹಸನ ಬೇಪಾರಿ ಅವಿರೋಧವಾಗಿ ಆಯ್ಕೆ ಆದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ ಹಂದ್ರಾಳ, ಸುರೇಶ ಪತ್ತಾರ, ಮುತ್ತು ಬಳಿಗಾರ, ಜಗದೀಶ ಹದ್ಲಿ ಅವರನ್ನು ಆಯ್ಕೆ ಮಾಡಲಾಯಿತು.

ಪತ್ರಕರ್ತರಾದ ಅಮರೇಶ ನಾಗೂರ, ವೀರೇಶ ಕುರ್ತಕೋಟಿ, ಮಹಾಂತೇಶ ಪಾಟೀಲ, ಮಲ್ಲಿಕಾರ್ಜುನ ಹೊಸಮನಿ, ಅಂದಾನೆಪ್ಪ ಸುಂಕದ, ರಾಜು ಬಡಿಗೇರ ಇತರರು ಇದ್ದರು.

 

 

Nimma Suddi
";