ಬಾಗಲಕೋಟೆ
ಹುನಗುಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 2023-28 ನೇ ಅವಧಿಯ
ಆಡಳಿತ ಮಂಡಳಿಯ 13 ಸ್ಥಾನಗಳ ಪೈಕಿ ಸಾಮಾನ್ಯ ಕ್ಷೇತ್ರದ ಸದಸ್ಯರಾಗಿ ಕಳಕಯ್ಯ ಹಿರೇಮಠ, ಭೀಮನಗೌಡ ಪಾಟೀಲ, ಯಾಸೀನ್ ಲೈನ್, ರಮೇಶ ಕೊಳಗೇರಿ, ಶರಣಪ್ಪ ತೋಳಮಟ್ಟಿ, ಸಂಗಪ್ಪ ವಕ್ಕರದ, ಸಂಗಪ್ಪ ಹೊದ್ಲೂರ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಎಂ ಜೆ ಮಾದರ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಂ ಎಚ್ ಪೂಜಾರಿ ಮಹಿಳಾ ಮೀಸಲು ವಿಭಾಗದಿಂದ ಸುಜಾತಾ ಹಂಚಿನಾಳ ಮತ್ತು ಗೀತಾ ತಾರಿವಾಳ, ಹಿಂದುಳಿದ ವರ್ಗ ‘ಅ’ ದಿಂದ ಬಿ.ವಿ.ಮ್ಯಾಗೋಟಿ, ಹಾಗೂ ‘ಬ’ ವರ್ಗದಿಂದ ಬಸವರಾಜ ಸುಂಕದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಡಳಿಗೆ ಸಾಮಾನ್ಯ ವರ್ಗದಿಂದ ವಿಜಯಾ ಎಚ್ ಗೌಡರ, ಗಿರಿಮಲ್ಲಪ್ಪ ಶಿರೂರ, ಅಬ್ದುಲ್ ಸಾಬ ವಾಲೀಕಾರ, ಶೇಷಪ್ಪ ಧೂಪದ, ಗೋವಿಂದಗೌಡ ಪಾಟೀಲ, ಶಂಕ್ರಪ್ಪ ಮೇಟಿ ಅವಿರೋಧವಾಗಿ ಆಯ್ಕೆಯಾದ್ದಾರೆ
ಒಂದು ಮತದಿಂದ ಬಾಣಿ ಗೆಲುವಿನ ನಗೆ
ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಂಗಾಧರ ಬಾಣಿ ಒಂದು ಮತದ ಅಂತರದಲ್ಲಿ ಚುನಾವಣೆಯ ಮೂಲಕ ವಿಜಯಶಾಲಿಯಾಗಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ವಿಭಾಗದಿಂದ ಲಾಲಪ್ಪ ಲಮಾಣಿ, ಪರಿಶಿಷ್ಟ ಪಂಗಡ ವಿಭಾಗದಿಂದ ಹನುಮಂತಪ್ಪ ರಂಗಾಪೂರ, ಮಹಿಳಾ ಮೀಸಲು ವಿಭಾಗದಿಂದ ಶಾಂತಾ ಸುಂಕದ, ಸಿದ್ದಾರೂಢೇಶ್ವರಿ ತುಂಬರಗುದ್ದಿ ಹಿಂದುಳಿದ ವರ್ಗ ‘ಅ’ ದಿಂದ ಮಹಮ್ಮದರಫಿ ಮುಲ್ಲಾ, ‘ಬ’ ವರ್ಗದಿಂದ ಯಲ್ಲನಗೌಡ ಹಲಗತ್ತಿ ಆಯ್ಕೆಯಾಗಿದ್ದಾರೆ. ಅವಳಿ ಶಿಕ್ಷಕರ ಪತ್ತಿನ ಸಹಕಾರಿ ಸಂಘಗಳಿಗೆ ಇನ್ನಷ್ಟೇ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಈಗಾಗಲೇ ಆಯ್ಕೆಯಾದವರಲ್ಲಿ ತುರುಸಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂಬ ಚರ್ಚೆ ಶಿಕ್ಷಕ ವಲಯದಲ್ಲಿ ನಡೆದಿದೆ.